ನಾಗಮಂಗಲ ಘಟನೆ: ತನಿಖಾ ವರದಿ ನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು – ಗೃಹ ಸಚಿವ ಡಾ. ಜಿ. ಪರಮೇಶ್ವರ

ಕಲಬುರಗಿ: ಎಲ್ಲ ಆಯಾಮಗಳಿಂದ  ನಾಗಮಂಗಲದ ಅಹಿತರ ಘಟನೆಯ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ಸುದ್ದಿಗಾರರೊಂದಿಗೆ ಮಾತನಾಡಿ, ತಿಳಿಸಿದರು.

ಈಗಾಗಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆಯಲ್ಲಿ ಯಾರ್ಯಾರು ಭಾಗಿ ಎಂಬುದು ತನಿಖೆಯಿಂದ ಬಯಲಿಗೆ ಬರಲಿದೆ ಎಂದರು.

ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಆಯ್ಕೆ

ಶಾಸಕ ಮುನಿರತ್ನ ರನ್ನು ತರಾತುರಿಯಲ್ಲಿ ಬಂಧಿಸಿಲ್ಲ. ದೂರು ದಾಖಲಾದ ನಂತರ ಬಂಧನವಾಗಿದೆ. ಆದರೆ ಯಾದಗಿರಿ ಶಾಸಕರ ವಿರುದ್ಧ ದೂರಿಗೂ ಇದಕ್ಕೂ ವ್ಯತ್ಯಾಸ ವಿದೆ ಎಂದರು.

ಇದನ್ನೂ ನೋಡಿ: ದುಃಖದ ಕಡಲ ದಾಟಿಸುವ ನಾವಿಕ – ಯಮುನಾ ಗಾಂವ್ಕರ್ | ಸೀತಾರಾಂ ಯೆಚೂರಿ

Donate Janashakthi Media

Leave a Reply

Your email address will not be published. Required fields are marked *