ಕೊಹಿಮಾ : ಫೆ.27ರಂದು ನಡೆಯಲಿರುವ ನಾಗಲ್ಯಾಂಡ್ ವಿಧಾನಸಭಾ ಚುನಾವಣೆಗೆ ಕೇವಲ 6 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದು, ಕೇವಲ 6 ಜನರು ನಾಮಪತ್ರ ಸಲ್ಲಿಸಿದ್ದಾರೆ. ನ್ಯಾಷನಲ್ ಡೆಮೋಕ್ರೆಟಿಕ್ ಪ್ರೊಗ್ರೆಸಿವ್ ಪಕ್ಷದಿಂದ ಎರಡು ಅಭ್ಯರ್ಥಿಗಳು ಮತ್ತು ಅದರ ಮಿತ್ರ ಪಕ್ಷ ಬಿಜೆಪಿಯಿಂದ ಓರ್ವ, ಸ್ವತಂತ್ರ ಅಭ್ಯರ್ಥಿಗಳಾಗಿ ಮೂವರು, ರೈಸಿಂಗ್ ಪೀಪಲ್ ಪಕ್ಷದಿಂದ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಮೂರು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ; ಫೆ.16ಕ್ಕೆ ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್- ಮೇಘಾಲಯದಲ್ಲಿ ಮತದಾನ
ಒಟ್ಟು 60 ವಿಧಾನಸಭಾ ಸ್ಥಾನಗಳಲ್ಲಿ ಎನ್‍ಡಿಪಿಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಶೇ.40:20 ರ ಪ್ರಮಾಣದಲ್ಲಿ ಸ್ರ್ಪಸಿ ಎರಡನೇ ಬಾರಿಗೆ ಅಧಿಕಾರ ಪಡೆಯುವ ನಿರ್ಧಾರ ಮಾಡಿದ್ದಾರೆ. ನಾಗ ಪೀಪಲ್ ಫ್ರಂಟ್ 22 ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ.
ಕಾಂಗ್ರೆಸ್ 25 ಜನರ ಹೆಸರನ್ನು ಪ್ರಕಟ ಮಾಡಿದೆ. ಲೋಕ ಜನಶಕ್ತಿ ಮತ್ತು ನ್ಯಾಷನಲ್ ಪೀಪಲ್ಸ್ ಪಕ್ಷಗಳು ಕೂಡಾ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಯಾರೂ ಈವರೆಗೆ ನಾಮಪತ್ರ ಸಲ್ಲಿಸಿಲ್ಲ.
ನಾಳೆಯೆ ಅಂತಿಮ ದಿನವಾಗಿದ್ದು ಒಂದೇ ದಿನ ನಾಮಪತ್ರ ಸಲ್ಲಿಕೆ ಯಾಗಲಿದೆಯಾ? ಚುನಾವಣೆಗಳನ್ನು ಗೆಲ್ಲುವ ಭರವಸೆಯನ್ನು ಅಲ್ಲಿನ ಪಕ್ಷಗಳು ಕಳೆದುಕೊಂಡಿವೆಯಾ? ಅಥವಾ ಬೇರೆ ಏನಾದರೂ ಗಿಮಿಕ್ಕ ಅಡಗಿದೆಯಾ ಎಂಬುದು ಕುತೂಹಲದ ಸಂಗತಿಯಾಗಿದೆ.