ಕೊಹಿಮಾ: ದಂಗೆಕೋರರ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ 14 ನಾಗರಿಕರನ್ನು ಹತ್ಯೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ನಾಗಾಲ್ಯಾಂಡ್ ಸರಕಾರವು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು(ಎಎಫ್‌ಎಸ್‌ಪಿಎ) ಹಿಂತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸರಕಾರ ಪತ್ರ ಬರೆದಿದ್ದಾರೆ.
ಶನಿವಾರ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಕಳೆದ ಶನಿವಾರದಂದು 14 ಮಂದಿ ಗಣಿ ಕಾರ್ಮಿಕರ ಹತ್ಯೆಗೆ ಸಂಬಂಧಿಸಿದಂತೆ ತೀವ್ರವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರದಂದು ಅಂತ್ಯ ಸಂಸ್ಕಾರ ನಡೆದಿದೆ. ಈ ಸಂದರ್ಭದಲ್ಲಿ ನೀಡಿದ್ದಾರೆ.
ಇದನ್ನು ಓದಿ: ನಾಗಾಲ್ಯಾಂಡ್ ನಾಗರಿಕರ ಹತ್ಯೆ: ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ-ಉನ್ನತಾಧಿಕಾರಿಗಳ ಮಟ್ಟದ ತನಿಖೆಗೆ ಭಾರತೀಯ ಸೇನೆ ಆದೇಶ
ರಾಜ್ಯದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ-1958 ಜಾರಿಯಲ್ಲಿದೆ. ರಾಜ್ಯಕ್ಕೂ ವಿಶೇಷ ಸ್ಥಾನಮಾನಗಳಿವೆ. ಎಎಫ್ಎಸ್‌ಪಿಎ ಜಾರಿಗೊಳಿಸುವುದು ಹಾಗೂ ರದ್ದುಗೊಳಿಸುವ ವಿಷಯವಾಗಿ ಚರ್ಚೆಗಳು ನಡೆಯಬೇಕು ಎಂದು ಕಾರ್ಮಿಕರ ಅಂತ್ಯಕ್ರಿಯೆಯ ವೇಳೆ ನಾಗಾಲ್ಯಾಂಡ್ ಮುಖ್ಯಮಂತ್ರಿ ಹೇಳಿದ್ದಾರೆ. 14 ಮಂದಿ ಗಣಿ ಕಾರ್ಮಿಕರ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ. ನಾವು ಈ ವಿಷಯವಾಗಿ ಒಗ್ಗಟ್ಟಿನಿಂದ ಇದ್ದೇವೆ ಎಂದು ನಿಫಿಯು ರಿಯೊ ತಿಳಿಸಿದ್ದಾರೆ.
ನಾಗಾಲ್ಯಾಂಡ್‌ಗೆ ಸಂವಿಧಾನದ ಆರ್ಟಿಕಲ್ 371 (ಎ) ವಿಶೇಷ ಸ್ಥಾನಮಾನ ನೀಡಿದ್ದು, ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯುವವರೆಗೆ ಸಂಸತ್ತಿನ ಯಾವುದೇ ಕಾಯ್ದೆಗಳೂ ರಾಜ್ಯಕ್ಕೆ ಅನ್ವಯವಾಗುವುದಿಲ್ಲ.
ಮುಖ್ಯಮಂತ್ರಿ ನೆಫಿಯು ರಿಯೊ ಅವರು ನಾಗಾಲ್ಯಾಂಡ್ ರಾಜ್ಯದಲ್ಲಿ ಅಶಾಂತಿ ಹಾಗೂ ನೋವಿಗೆ ಕಾರಣವಾಗಿದೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಬಿಜೆಪಿಯ ಮೈತ್ರಿ ಕೂಟ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ದೊಂದಿಗೆ ಇರುವ ನೆಫಿಯು ರಿಯೊ ಈ ಹೇಳಿಕೆಗಳು ಹೆಚ್ಚು ಮಹತ್ವದ್ದಾಗಿವೆ.