ನಿಮ್ಮದು ನಮ್ಮ ಪರಿವಾರ ಅಲ್ಲ, ನಿಮ್ಮದು ಸಂಘಪರಿವಾರ – ಪ್ರಕಾಶ್‌ ರೈ

ಬೆಂಗಳೂರು : ನಿಮ್ಮದು ನಮ್ಮ ಪರಿವಾರ ಅಲ್ಲ, ನಿಮ್ಮದು ಸಂಘಪರಿವಾರ, ನಿಮ್ಮ ಪರಿವಾರದಲ್ಲಿ ಮಣಿಪುರದ ನೋವು ಕಾಣಲ್ಲ, ರೈತರು, ಕಾರ್ಮಿಕರು, ದಲಿತರು, ಮಹಿಳೆಯರ ನೀವು ಕೇಳುತ್ತಿಲ್ಲ ಹಾಗಾಗಿ ನೀವು ನಮ್ಮ ಪರಿಹಾರ ಅಲ್ಲ ಎಂದು ಪ್ರಕಾಶ್‌ ರೈ ಪ್ರದಾನಿ ಮೋದಿಯವರನ್ನು ಕುಟುಕಿದರು. ನಿಮ್ಮದು

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ “ನವೀನ್‌ ಸೂರಿಂಜೆ ಅವರು ಬರೆದಿರುವ ’ಮಹೇಂದ್ರ ಕುಮಾರ್‌- ನಡುಬಗ್ಗಿಸದ ಎದೆಯ ದನಿ’ ಕೃತಿ ಬಿಡುಗಡೆ ಕಾರ್ಯಕ್ರಮ”ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೋದಿಯ ಹೆಸರಿನ ಬದಲಿಗೆ “ಮಹಾಪ್ರಭುಗಳು” ಎನ್ನುತ್ತ ಮಾತನಾಡಿದ್ದು ವಿಶೇಷವಾಗಿತ್ತು. ಮಹಾಪ್ರಭುಗಳು  ಉದ್ಘಾಟನೆ ಮಾಡುವ ವಸ್ತುಗಳು ಯಾವು ಇರುವುದಿಲ್ಲ, ಅಲ್ಲಿ ಏನು ಇರುವುದಿಲ್ಲ ಎಂದು ಸಣ್ಣ ಕಥೆಯ ಮೂಲಕ ಮೋದಿಯವರ ಸುಳ್ಳಿನ ಕೆಲಸಗಳನ್ನು ವಿವರಿಸಿದರು.

ನಾನು ಜನರ ಪಕ್ಷ, ಯಾವಾಗಲೂ ವಿರೋಧ ಪಕ್ಷದಲ್ಲಿ ಇರುತ್ತೇನೆ. “ರಾಜಕಾರಣದಲ್ಲಿ ಆಳುವ ಪಕ್ಷ ಗೆದ್ದಿಲ್ಲ, ಆಡಳಿತ ಪಕ್ಷದವರು ಸೋಲದಂತೆ ನೋಡಿಕೊಳ್ಳಿ..” ಎಂದು ಸಂತೋಷ್‌ ಲಾಡ್‌ರನ್ನು ಎಚ್ಚರಿಸಿದರು.

ಮಹೇಂದ್ರ ಕುಮಾರ್ ಮೇಲೆ ಕೋಪ ಇತ್ತು. ಯಾಕೆ ಯುವಕರನ್ನು, ದೇಶವನ್ನು ಕೆಡಸ್ತಾ ಇದ್ದರೆ ಅಂತಾ, ಅವರು ಬದಲಾದ ನಂತರ ನಾನು ಅವರನ್ನು ಭೇಟಿಯದೆ. ಅವರು ಈ ಸಂದರ್ಭದಲ್ಲಿ ಇರಬೇಕಿತ್ತು, ಅವರ ಅಗತ್ಯ ಇತ್ತು. ಆರ್ ಎಸ್ ಎಸ್ ನವರು ಸಾವಿರರು ಕನಸುಗಳನ್ನು ಕೊಂದು ಹಾಕಿದರು. ರಾಜಕೀಯವೇ ಇವರಿಗೆ ಮುಖ್ಯ, ರಾಮನನ್ನು ಬಿಡದೆ ಚುನಾಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದುತ್ವಕ್ಕೆ ಅಂಬೇಡ್ಕರ್‌ವಾದವೇ ಮದ್ದು : ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಸಂತೋಷ್‌ ಲಾಡ್‌ ಮಾತನಾಡಿ ಹಿಂದುತ್ವ ವಾದವನ್ನು ಹತ್ತಿಕ್ಕಲು ಅಂಬೇಡ್ಕರ್‌ವಾದ ದಿಂದ ಸಾಧ್ಯ ಹಾಗಾಗಿ ಬಸವಣ್ಣ, ಅಂಬೇಡ್ಕರ್‌ವಾದವನ್ನು ಜನರ ಮಧ್ಯೆ ಹಂಚಬೇಕು. ಎಂದರು.

ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿದವರಲ್ಲಿ ಒಬ್ಬನಾದ ಪುಣ್ಯಾತ್ಮ ಬಲ್‌ಬೀರ್‌ ಸಿಂಗ್‌ನನ್ನು ಜನ ಮರೆತ್ತಿದ್ದಾರೆ. ಆ ಬಲ್‌ಬೀರ್‌ ಸಿಂಗ್ ಇಂದು ನೂರು ಮಸೀದಿಗಳನ್ನು ಕಟ್ಟಿಸಿದ್ದಾರೆ”  ಅವರಿಗೆ ಅವರ ತಪ್ಪಿನ ಅರಿವಾಗಿತ್ತು. ಅದರಂತೆ ಮಹೇಂದ್ರ ಕುಮಾರ್‌ ಅವರಿಗೂ ತಪ್ಪಿನ ಅರಿವಾಗಿ ಬದಲಾವಣೆ ಬಯಸಿ ಸಾವಿರಾರು ಯುವಕರನ್ನು ಕೋಮುವಾದದಿಂದ ತಪ್ಪಿಸದರು ಎಂದರು.

ಕಾರ್ಯಕ್ರಮದಲ್ಲಿ ಲೇಖಕರಾದ ನವೀನ್‌ ಸೂರಿಂಜೆ, ಡಿವೈಎಫ್‌ಐ ಮುಖಂಡ ಮನೀರ್‌ ಕಾಟಿಪಳ್ಳ, ಹೈಕೋರ್ಟ್ ವಕೀಲರಾದ ಎಸ್.ಬಾಲನ್‌, ಶಾಸಕಿ ನಯನಾ ಮೋಟಮ್ಮ,  ಮಹೇಂದ್ರ ಕುಮಾರ್‌ ಒಡನಾಡಿಗಳಾದ ಸುಧೀರ್‌ ಕುಮಾರ್‌ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ  ಹಾಜರಿದ್ದರು. ನಜ್ಮಾ ಚಿಕ್ಕನೇರಳೆ ಕಾರ್ಯಕ್ರಮ ನಿರೂಪಿಸಿದರು.

 

Donate Janashakthi Media

Leave a Reply

Your email address will not be published. Required fields are marked *