ಬೆಂಗಳೂರು : ಚನ್ನರಾಯಪಟ್ಟಣದ ಧೀರ ಹೋರಾಟಗಾರರು ಇಡೀ ಜನಚಳುವಳಿಗೆ ಸ್ಪೂರ್ತಿಯಾಗಿದ್ದಾರೆ, ಮೂರು ವರ್ಷಕ್ಕೂ ಹೆಚ್ಚು ಸಮಯ ನಡೆಯುತ್ತಿರುವ ಈ ಹೋರಾಟ ಇಡೀ ಬಾರತದ ರೈತರಿಗೆ ಹೊಸ ಹುಮ್ಮಸ್ಸು ತುಂಬುವ ಹೋರಾಟ ಎಂದು ಎಐಕೆಎಸ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಡಾ. ವಿಜೂ ಕೃಷ್ಣನ್ ಶ್ಲಾಘಿಸಿದರು. ಭೂಮಿ
ಪ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ನಾಡ ಉಳಿಸಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಾವಿರ ಕಡೆ ಬಲವಂತದ ಭೂ ಸ್ವಾಧೀನ ವಿರೋಧಿ ಹೋರಾಟಗಳು ನಡೆಯುತ್ತಿದೆ. ಹೆಚ್ಚಿನ ಹೋರಾಟಗಳು ಪರಿಹಾರ ಹೆಚ್ಚಿಸಲು ಆಗ್ರಹಿಸಿದ ಹೋರಾಟಗಳು. ಆದರೆ ನಿಮ್ಮದು ಕೃಷಿ ಭೂಮಿ ಉಳಿಸುವ ಹೋರಾಟ. ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಜಿಸಿ ಬಯ್ಯಾರೆಡ್ಡಿಯವರು. ಅವರು ಈಗ ನಮ್ಮ ಜೊತೆ ಇಲ್ಲ. ಈ ಹೋರಾಟದ ಗೆಲುವೇ ಅವರಿಗೆ ಸಲ್ಲಿಸುವ ಹೋರಾಟವಾಗಬೇಕು ಎಂದರು.
ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಆದರೆ, ಈಗ ಮಾತ ಮರೆದಿದ್ದಾರೆ. ರೈತರು ಹೋರಾಟ ಮಾಡಿದಾಗ ಪೊಲೀಸರಿಂದ ದೌರ್ಜನ್ಯ ನಡಸಿದರು. ಸಂಯುಕ್ತ ಕಿಸಾನ್ ಮೋರ್ಚಾ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸುತ್ತದೆ ಎಂದರು.
ಇದನ್ನೂ ಓದಿ : ಭೂಮಿ ತಂಟೆಗೆ ಬಂದರೆ ಸರ್ಕಾರದ ಮಂತ್ರಿಗಳು ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲ – ಬಡಗಲಪುರ ನಾಗೇಂದ್ರ ಭೂಮಿ

2020ರ ಜೂನ್ನಲ್ಲಿ ಕೋವಿಡ್ ಬಂದಾಗ,ರೈತರು, ಕಾರ್ಮಿಕರನ್ನು ಬಂಧನದಲ್ಲಿಟ್ಟು ಕರಾಳ ಕೃಷಿ ಕಾಯ್ದೆಗಳನ್ನು ತಂದಿತು. ಅದರ ವಿರುದ್ದ ಹಸಿರು, ನೀಲಿ, ಕೆಂಪು ಶಾಲುಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿತು. ಆಗ ಪ್ರಧಾನಿ ಮೋದಿ, ಕಾರ್ಪೋರೇಟ್ ಮೀಡಿಯಾಗಳು ರೈತ ಹೋರಾಟಗಾರನ್ನು ತಾಲಿಬಾನ್, ಪಾಕಿಸ್ತಾನ್, ಖಲಿಸ್ತಾನ್ ಎಂದರು, ಆದರೆ, ಕೊನೆಗೆ ಏನಾಯ್ತು. ಮೋದಿ ಅಂದೋಲ ಜೀವಿಗಳು ಎಂದರು. ಆದರೆ, ರೈತರು ಒಂದಿಂಚು ಹಿಂದೆ ಸರಿಯಲಿಲ್ಲ. ನಮ್ಮ ಒಗ್ಗಟ್ಟಿನ ಕಾರಣ ನರೇಂದ್ರ ಮೋದಿ ಸರ್ಕಾರ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಿತು. ಅದು ನಮ್ಮ ಒಗ್ಗಟ್ಟಿನ ಹೋರಾಟದ ವಿಜಯ ಎಂದರು.
ಚನ್ನರಾಯಪಟ್ಟಣ ಹೋಬಳಿಯ ರೈತರು ದೆಹಲಿಯ ಹೋರಾಟಕ್ಕೂ ಮೀರಿ ಹೋರಾಟ ಮಾಡಿದ್ದಾರೆ. ಸರ್ಕಾರ ಈಗ ಸ್ಮಾರ್ಟ್ ಮೀಟರ್ ತರಲು ಹೊರಟಿದೆ. ಪ್ರೀಪೈಡ್ ಸ್ಮಾರ್ಟ್ ಮೀಟರ್ ಅತ್ಯಂತ ಭ್ರಷ್ಟ ಯೋಜನೆ.ಚಂಡೀಗಢದಲ್ಲಿ ಇದರ ವಿರುದ್ದ ಹೋರಾಟ ಮಾಡಿ ತಾರ್ಕಿಕ ಅಂತ್ಯ ಕಾಣಲಾಗಿದೆ. ಈಗ ಉತ್ತರ ಪ್ರದೇಶದಲ್ಲಿ ಅಂತಹದ್ದೇ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು.
ದೆಹಲಿಯ ರೈತ ಹೋರಾಟದ ಸಂದರ್ಭದಲ್ಲಿ ಸರ್ಕಾರ ಬಗ್ಗುವುದಿಲ್ಲ ಎಂದಿತ್ತು. ಆದರೆ, ರೈತರ ಒಗ್ಗಟ್ಟಿನ ಮುಂದೆ ಸರ್ಕಾರ ಸೋತಿತು. ನಮ್ಮ ದೆಹಲಿ ಹೋರಾಟದಲ್ಲಿ ಆರಂಭದಲ್ಲಿ ಪಂಜಾಬ್ ರೈತರು ಮಾತ್ರ ಇದ್ದರು. ಬಳಿಕ ಇಡೀ ದೇಶದಿಂದ ರೈತರು ಬೆಂಬಲ ಸೂಚಿಸಿದ್ದರು. ನೀವು ಈಗ ನಡೆಸುತ್ತಿರುವ ಹೋರಾಟಕ್ಕೆ ಗೆಲುವು ಖಚಿತ ಎಂದು ನನಗೆ ವಿಶ್ವಾಸವಿದೆ. ಗೆಲ್ಲುವವರೆಗೆ ಹೋರಾಟ ನಿಲ್ಲಬಾರದು ನಿಮ್ಮ ಜೊತೆ ಸಂಯುಕ್ತ ಕಿಸಾನ್ ಮೋರ್ಚಾ ಇದೆ ಎಂದು ಹೋರಾಟಕ್ಕೆ ಶಕ್ತಿ ತುಂಬಿದರು.
ಇದನ್ನೂ ನೋಡಿ : ನಮ್ಮನ್ನು ಬೆಳೆಯಲು ಬಿಡಿ : ಸಿಎಂ ಸಭೆಗೆ ಹೊರಟ ತರಕಾರಿ, ಹೂ, ಹಣ್ಣುJanashakthi Media
