ಮೈಸೂರು ರಂಗಾಯಣ ಕಲಾವಿದರ ‘ಪರ್ವ’ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನ

ಬೆಂಗಳೂರು: ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿ ಆಧರಿತ ‘ಪರ್ವ’ ನಾಟಕ ಪ್ರದರ್ಶನ ಅಕ್ಟೋಬರ್‌ 23 ಮತ್ತು 24ರಂದು (ಶನಿವಾರ ಮತ್ತು ಭಾನುವಾರ) ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ.

ಇದನ್ನು ಓದಿ: ಮೈಸೂರಿನಲ್ಲಿ ʻಪರ್ವʼ

ಮೈಸೂರು ರಂಗಾಯಣ ಆಯೋಜಿಸಿರುವ ಪರ್ವ ನಾಟಕವು 43 ವರ್ಷ ಹಳೆಯ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಲಾಗಿದೆ. ಕೋವಿಡ್‌ ಕಾಲಘಟ್ಟದಲ್ಲಿ ರೂಪುಗೊಂಡಿರುವ ಈ ನಾಟಕಕ್ಕೆ ಮೈಸೂರಿನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿ ಏರ್ಪಡಿಸಿದ್ದ 16 ಪ್ರದರ್ಶನಗಳನ್ನು 6 ಸಾವಿರ ಮಂದಿ ವೀಕ್ಷಿಸಿದ್ದಾರೆ. ಮುಂದುವರಿದ ರಂಗ ಪ್ರಯೋಗದ ಮೊದಲ ಹೆಜ್ಜೆಯಾಗಿ ಈಗ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿಕೆ ನೀಡಿದ್ದರು.

ಕಲಾವಿದರು ಸೇರಿದಂತೆ 60 ಮಂದಿಯ ತಂಡವು ಈ ನಾಟಕವನ್ನು ಸಿದ್ಧಪಡಿಸಿದೆ. ರಂಗಕರ್ಮಿ ಪ್ರಕಾಶ್‌ ಬೆಳವಾಡಿ ನಿರ್ದೇಶಿದ ನಾಟಕದ ಸಿದ್ಧತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ₹ 50 ಲಕ್ಷ ಬಿಡುಗಡೆ ಮಾಡಿದೆ. 8 ಗಂಟೆಗಳ ನಾಟಕದ ಅವಧಿಯಲ್ಲಿ ಮಧ್ಯಾಹ್ನ ಊಟಕ್ಕೆ ಅರ್ಧಗಂಟೆ ಹಾಗೂ ತಲಾ 10 ನಿಮಿಷಗಳ ಮೂರು ಚಹಾ ವಿರಾಮವಿರುತ್ತದೆ.

ಬೆಂಗಳೂರು ನಗರದಲ್ಲಿ ಎರಡು ಪ್ರದರ್ಶನ

ನಾಟಕ ಪ್ರಸ್ತುತಿ: ರಂಗಾಯಣ ಮೈಸೂರು

ನಾಟಕ ನಿರ್ದೇಶನ: ಪ್ರಕಾಶ್ ಬೆಳವಾಡಿ

ಪ್ರದರ್ಶನದ ಅವಧಿ: ಬೆಳಿಗ್ಗೆ 10ರಿಂದ ಸಂಜೆ 6

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು.

ಟಿಕೆಟ್ ದರ: ₹ 500, ₹ 250

Donate Janashakthi Media

Leave a Reply

Your email address will not be published. Required fields are marked *