ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿದ್ದ ಪ್ರೊ. ವಿ.ಕೆ. ನಟರಾಜ್ (85) ಅನಾರೋಗ್ಯದಿಂದ ಡೆಸೆಂಬರ್ 9ರ ಬೆಳಗ್ಗೆ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಮಂಗಳವಾರ (ಡಿ.10) ಬೆಳಿಗ್ಗೆ ಇಲ್ಲಿನ ವಿಜಯನಗರದ ಶಾಂತಿಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ದೇಹವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ನಗರದ ಜೆಎಸ್‌ಎಸ್ ಆಸ್ಪತ್ರೆಗೆ ದಾನವಾಗಿ ನೀಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ ನಂತರ, ಪ್ರೊ. ನಟರಾಜ್ ಅವರು ಆಕ್ಸ್‌ಫರ್ಡ್‌ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು 1972 ರಲ್ಲಿ ಮೈಸೂರಿನಲ್ಲಿ ಅಭಿವೃದ್ಧಿ ಅಧ್ಯಯನದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿಯೂ ಸೇವೆಯನ್ನು ಸಲ್ಲಿಸಿದರು. ನಿವೃತ್ತಿ ನಂತರ ಚೆನ್ನೈನ ಎಂಐಡಿಎಸ್ (ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟಲ್ ಸ್ಟಡೀಸ್) ನಿರ್ದೇಶಕರಾಗಿದ್ದರು. ಬಳಿಕ ಇಂಡೋ- ಕೆನಡಿಯನ್ ಸ್ಟಡಿ ಸೆಂಟರ್ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಇದನ್ನೂ ಓದಿ: ಮಂಡ್ಯ ಸಾಹಿತ್ಯ ಸಮ್ಮೇಳನ|ಮನೆಗೊಂದು ಕೋಳಿ ಸಂಗ್ರಹ ಅಭಿಯಾನ: ಬಾಡೂಟ ಬಳಗದ ಸಿದ್ಧತೆ
ಅರ್ಥಶಾಸ್ತ್ರ ಕುರಿತು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದ ಅವರು, ವರ್ಲ್ಡ್ ಬ್ಯಾಂಕಿನ ಸಲಹೆಗಾರರಾಗಿದ್ದರು. ಖ್ಯಾತ ಸರೋದ್ ವಾದಕರಾಗಿದ್ದ ಪಂ.ರಾಜೀವ ತಾರಾನಾಥರ ಆತ್ಮೀಯರೂ ಆಗಿದ್ದರು.
ಸಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಫೆಲೋ ಆಗಿದ್ದರು ಮತ್ತು ತಮಿಳುನಾಡು, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಪಂಚಾಯತ್‌ಗಳ ಕುರಿತು ಇದು ಪ್ರಾರಂಭಿಸಿದ ಸಂಶೋಧನಾ ಅಧ್ಯಯನದ ಮುಖ್ಯಸ್ಥರಾಗಿದ್ದರು. ಅವರು ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್‌ನ ತಜ್ಞರ ಸಮಿತಿಯ ಸದಸ್ಯರಾಗಿದ್ದರು ಮತ್ತು ವಿಕೇಂದ್ರೀಕರಣದ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ರೈತರ ನಡುವೆ ಸಂವಾದವನ್ನು ಪ್ರೋತ್ಸಾಹಿಸಿದರು.
ಇದನ್ನೂ ನೋಡಿ: ಶಾಹಿ,ಗ್ನಾನವ್ಯಾಪಿ,ಸಂಭಾಲ್,ಅಜ್ಮೀರ್ ಚಿಸ್ತಿ ದರ್ಗಾ,ಮಸೀದಿಗಳ ಸಮೀಕ್ಷೆಯೂ, ಪೂಜಾ ಸ್ಥಳ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯೂ