ಮೈಸೂರು ದಸರಾ
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣದಲ್ಲೀಗ ದಸರಾ ಸಿದ್ಧತೆಯ ಸಂಭ್ರಮ ನಡೆಯುತ್ತಿದೆ. ದಸರಾ ಸಮಿತಿ ನಾಡಹಬ್ಬದ ವೇಳಾಟ್ಟಿಯನ್ನು ಬಿಡುಗಡೆ ಮಾಡಿದೆ. ನವರಾತ್ರಿ ಆಚರಣೆಯ ವೇಳಾಪಟ್ಟಿ ಬಿಡುಗಡೆ ಮಾಡಿರುವ ಸಮಿತಿ, ಯಾವ ದಿನ ಯಾವ ಸಮಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಅಕ್ಟೋಬರ್ 15- ಭಾನುವಾರ – ಶರನ್ನವರಾತ್ರಿ ಪ್ರಾರಂಭ, ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ. ಅರಮನೆ ಪೂಜೆಗಳು
ಅಕ್ಟೋಬರ್ 24: ಮಂಗಳವಾರ – ವಿಜಯದಶಮಿ. ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರಿಂದ ನಂದೀ ಧ್ವಜ ಪೂಜೆ. ನಂತರ “ಜಂಬೂ ಸವಾರಿ” ಪ್ರಾರಂಭ.
ಅಕ್ಟೋಬರ್ 26-ಭಾನುವಾರ – ಬೆಟ್ಟದ ಶ್ರೀಚಾಮುಂಡೇಶ್ವರಿ ರಥೋತ್ಸವ.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ : ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ : ಜನಮನ ಸೆಳೆದ ಮಂಟೇಸ್ವಾಮಿ & ಸಿದ್ದಪ್ಪಾಜಿ ಹಾಡುಗಳು