ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ತೆರಳಿದ್ದ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ʻನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮತ್ತು ಶಾಂತಿ, ನ್ಯಾಯ, ಪ್ರಜಾಪ್ರಭುತ್ವ, ಸಹಜತೆಯನ್ನು ಪುನಃಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸುವುದು ನನ್ನ ಆದ್ಯತೆಗಳಲ್ಲಿ ಒಂದಾಗಿದೆʼ ಎಂದು ಹೇಳಿದ್ದಾರೆ.
ರಾಜ್ಯದ ಕಡೆಗಿರುವ ಪ್ರತಿಕೂಲ ಬೆಳವಣಿಗೆಯನ್ನು ಕೊನೆಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಪ್ರಚಾರ ಸಭೆಯಲ್ಲಿದ್ದ ಪ್ರಮುಖ ನಾಯಕರಾದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿ ಇತರರನ್ನು ಉದ್ದೇಶಿಸಿ, ಇಲ್ಲಿ ಇರುವ ನಮ್ಮ ನಾಯಕರಿಗಿಂತ ದೊಡ್ಡ ದೇಶಭಕ್ತರು ಬೇರೊಬ್ಬರಿಲ್ಲ. ಇವರೆಲ್ಲ ದೇಶ ಭಕ್ತರಲ್ಲದಿದ್ದರೆ, ನಮ್ಮ ದೇಶದ ಬಗ್ಗೆ ದೇಶಪ್ರೇಮವನ್ನು ಹೇಳಿಕೊಳ್ಳಲು ನಮ್ಮಲ್ಲಿ ಯಾರಿಗೂ ಹಕ್ಕಿಲ್ಲ ಎಂದರು.