ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು
ಮುತ್ತುಗಳ ಪೋಣಿಸಿರುವೆ
ನೀ ಕೊಟ್ಟ
ಮುತ್ತುಗಳ ಒಂದೊಂದಾಗಿ
ಹೆಕ್ಕಿ ತೆಗೆದೆ
ಕೈಯಲ್ಲಿ ಹಿಡಿದು
ನೋಡಿದರೆ
ಹೂವಾಗಿತ್ತು
ಸಂಜೆಯ ಏಕಾಂತಕ್ಕೆ
ಬಾಡಿದರೆ?????
ಎಂಬ ಭಯದಲ್ಲೇ
ಪೋಣಿಸಿರುವೆ
ನಿನ್ನ ನೆನಪಿನ
ಪಕಳೆಗಳ ತೆಗೆತೆಗೆದು
ಬಾಡದಂತೆ
ಜೋಪಾನ ಮಾಡುವ
ಕೆಲಸವ ನಿನಗೆ
ಬಿಟ್ಟಿರುವೆ.
ನೋಡು…..
ಎಷ್ಟು
ನಿರುಮ್ಮಳವಾಗಿರುವೆ
ಎಂದು……