ಅನೇಕ ಕಾರಣಗಳಿಗೆ ‘ಫುಲೆ’ ಸಿನಿಮಾ ಮುಖ್ಯವಾಗಿದೆ. ಇಲ್ಲಿ ಕಥನದ ನಿರೂಪಣೆ ಕಲಾತ್ಮಕವಾಗಿದೆಯೇ? ಎಲ್ಲವೂ ಸರಳೀಕರಣಗೊಂಡಿದೆಯೇ? ಫುಲೆಯವರ ಜಾತಿ ವಿರೋಧಿ ಚಳವಳಿಯ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಗ್ರಹಿಸಿದ್ದಾರೆಯೇ? ಮುಂತಾದ ವಿಮರ್ಶೆಗಳು ಸಿನಿಮಾ ನೋಡಿದ ನಂತರ ಅಗತ್ಯವಾಗಿ ನಡೆಯಬೇಕಾಗಿದ್ದೆ. ಅನುಮಾನವಿಲ್ಲಎಂದು ಚಿಂತಕ ಶ್ರೀಪಾದ್ ಭಟ್ ತಿಳಿಸಿದ್ದಾರೆ. ಫುಲೆ
ಆದರೆ ಪ್ರಸ್ತುತ ಬ್ರಾಹ್ಮಣ ಸಮಾಜ ‘ಇದ್ದದ್ದನ್ನು ಇದ್ದಂತೆ ಹೇಳಿದರೆ ಎದೆಗೆ ಒದ್ದಂತೆ’ ಎಂಬಂತೆ ವರ್ತಿಸುತ್ತಿದ್ದಾರೆ. ಇದು ಖಂಡನೀಯ. ಫುಲೆ ದಂಪತಿಗಳು ಚಾತುರ್ವರ್ಣ ಪದ್ಧತಿಯನ್ನು ವಿರೋಧಿಸಿ ಜಾತಿ ವಿನಾಶ ಚಳುವಳಿಯನ್ನು ಕಟ್ಟಿದರು.
ಇದನ್ನೂ ಓದಿ: ತಾಲಿಬಾನ್ ನೈತಿಕ ಪೊಲೀಸ್ ಪಡೆ ದಾಳಿ – ತಪ್ಪು ಕೂದಲ ಶೈಲಿ ಕಾರಣದಿಂದ ಪುರುಷರ ಬಂಧನ ಫುಲೆ
ಆಗ ಬ್ರಾಹ್ಮಣ ಸಮಾಜ ಫುಲೆಯವರ ಜಾತಿ ವಿರೋಧಿ ಚಳವಳಿಯನ್ನು ಖಂಡಿಸಿದ್ದಾರೆ. ಇವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಚಾರಿತ್ರಿಕ ಸತ್ಯವನ್ನು ಬ್ರಾಹ್ಮಣರು ಅಲ್ಲಗೆಳೆಯಲು ಸಾಧ್ಯವಿಲ್ಲ.
ವರ್ತಮಾನದಲ್ಲಿ ಇತಿಹಾಸವನ್ನು ತಿದ್ದಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಇವರು ಆದಷ್ಟು ಬೇಗ ಅರ್ಥ ಮಾಡಿಕೊಂಡರೆ ಒಳ್ಳೆಯದು. ಕನಿಷ್ಠ ಸಾಮಾನ್ಯ ತಿಳುವಳಿಕೆ ಇದ್ದರೆ ‘ಹೌದು,ಆಗ ತಪ್ಪು ನಡೆದಿದೆ’ ಎಂದು ಒಪ್ಪಿಕೊಳ್ಳುವುದು ಪ್ರಾಥಮಿಕ ನಾಗರಿಕ ವರ್ತನೆ (ಇಂತಹ ನಿವೇದನೆಯನ್ನು ಬ್ರಾಹ್ಮಣಶಾಹಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವುದೂ ವಾಸ್ತವ)
ಆದರೆ ‘ಫುಲೆ’ ಸಿನಿಮಾದ ಯಾವುದೇ ದೃಶ್ಯವೂ ಕತ್ತರಿಯಾಗಬಾರದು ಎನ್ನುವ ಹಕ್ಕೊತ್ತಾಯ ಮಾಡಲೇಬೇಕು.
ಇದನ್ನೂ ನೋಡಿ: ಬದುಕನ್ನು ಕಿತ್ತುಕೊಂಡ ʼವೈಟ್ ಟಾಪಿಂಗ್ ಕಾಮಗಾರಿʼ! Janashakthi Media