“ನಮಗೆ 5 ವರ್ಷ ಅಧಿಕಾರವಿದೆ, ಹೀಗಾಗಿ ಹಿಂದೂಗಳಿಂದ ಏನನ್ನೂ ಖರೀದಿಸಬಾರದು ಎಂದು ಬೆಂಗಳೂರು ಮುಸಲ್ಮಾನರ ಸಭೆಗಳಲ್ಲಿ ತೀರ್ಮಾನಿಸಲಾಗಿದೆ” ಎಂದು ಪ್ರತಿಪಾದಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದಿಯಲ್ಲಿ ಮಾತಾಡುವ ವಿಡಿಯೋವೊಂದನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುತ್ತಿದ್ದಾರೆ. ವೈರಲ್ ವಿಡಿಯೊದಲ್ಲಿ ಗಡ್ಡದಾರಿ ವ್ಯಕ್ತಿಯೊಬ್ಬರು, “ಮುಸ್ಲಿಮರು ಅವರ ಬಸ್‌ಗೆ ಹತ್ತಬಾರದು, ಅವರ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ಹಾಕಬಾರದು ಹಾಗೂ ಅವರ ಮೆಡಿಕಲ್‌ನಲ್ಲಿ ಔಷಧ ಕೊಳ್ಳಬಾರದು…” ಎಂದು ಹೇಳುವುದು ಕೇಳಿಸುತ್ತದೆ. ಫ್ಯಾಕ್ಟ್‌ಚೆಕ್
ಫ್ಯಾಕ್ಟ್‌ಚೆಕ್ ಈ ವಿಡಿಯೊವನ್ನು ಬಳಸಿಕೊಂಡು, “ಬೆಂಗಳೂರು ಮುಸಲ್ಮಾನರ ಸಭೆಗಳಲ್ಲಿ ಹಿಂದೂಗಳಿಂದ ಏನನ್ನೂ ಖರೀದಿಸುವುದಿಲ್ಲ, ನಮಗೆ 5 ವರ್ಷ ಅಧಿಕಾರವಿದೆ, ಹಿಂದೂ ಪಂಪ್‌ಗಳಲ್ಲಿ ಪೆಟ್ರೋಲ್ ಖರೀದಿಸಬೇಡಿ, ಹಿಂದೂ ಮೆಡಿಕಲ್ ಶಾಪ್‌ಗಳಲ್ಲಿ ಔಷಧಿ ತೆಗೆದುಕೊಳ್ಳಬೇಡಿ, ಏಕೆಂದರೆ ಅವರು ಹಿಂದೂಗಳಿಗೆ ವ್ಯಾಪಾರ ಲಾಭವನ್ನು ನೀಡಲು ಬಯಸುವುದಿಲ್ಲ ಎಂದು ನಿರ್ಧರಿಸಿದರು” ಎಂದು ಬರೆದು ವೈರಲ್ ಮಾಡಲಾಗುತ್ತಿದೆ. ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಕೇರಳದಲ್ಲಿ ಬುರ್ಖಾ ಧರಿಸದ ಕಾರಣಕ್ಕೆ ಹಿಂದೂ ಮಹಿಳೆಯನ್ನು ಮುಸ್ಲಿಂ ಮಹಿಳೆಯರು ಬಸ್ ಏರದಂತೆ ತಡೆದರು ಎಂಬುದು ಸುಳ್ಳು
ಬಿಜೆಪಿ ಬೆಂಬಲಿಸುವ ಹಲವಾರು ಜನರು ಇದನ್ನೂ ಟ್ವಿಟರ್, ಫೇಸ್‌ಬುಕ್ ಹಾಗೂ ವಾಟ್ಸಪ್ ಸೇರಿದಂತೆ ಹಲವಾರು ಕಡೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ,ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್
ಪ್ಯಾಕ್ಟ್‌ಚೆಕ್:
2023 ಮಾರ್ಚ್ ವೇಳೆಗೆ ಈ ವೀಡಿಯೊವನ್ನು ದ್ವೇಷ ಹರಡಲು ತಪ್ಪಾಗಿ ಬಿಂಬಿಸಿ ವೈರಲ್ ಮಾಡಲಾಗಿತ್ತು. ಈ ವಿಡಿಯೊಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಬಾರ್ಮರ್ ಪೊಲೀಸರ ಅಧಿಕೃತ ಖಾತೆಯು, ಘಟನೆಯ ಕೋಮು ಆಯಾಮವನ್ನು ನಿರಾಕರಿಸಿತ್ತು. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಭಾರತೀಯರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂಬುದು ಸುಳ್ಳು!
“ಈ ವೀಡಿಯೊ 2019 ರದ್ದಾಗಿದ್ದು, ರಾಜ್ಯದ ಬಿಜ್ರಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಭೋಜಾರಿಯಾ ಗ್ರಾಮದ್ದಾಗಿದೆ. 28.6.2019 ರಂದು ಪೊಲೀಸ್ ಠಾಣಾ ವ್ಯಾಪ್ತಿಯ ರಾಮ್‌ಸಾರ್‌ನ ಗಗರಿಯಾ ಗ್ರಾಮದ ಪೆಟ್ರೋಲ್ ಪಂಪ್ ಎದುರು ಖಾಸಗಿ ಬಸ್‌ಗೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ವಿರೋಧಿಸಿ, ಮೃತರ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಈ ಆಗ್ರಹ ಮಾಡಿದ್ದರು. ಈ ವೇಳೆ ಮೃತರ ಸಂಬಂಧಿಯೊಬ್ಬರು ಈ ಭಾಷಣ ಮಾಡಿದ್ದಾರೆ. ನಿಯಮಗಳ ಪ್ರಕಾರ ಬಾರ್ಮರ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ” ಎಂದು ಬಾರ್ಮರ್ ಪೊಲೀಸ್ ಹೇಳಿದೆ.
1/2 इस घटना के विरोध में मृतक के परिजनों द्वारा उनके घर पर जनाजे के दौरान विरोध प्रदर्शन के दौरान मांगे की गई थी गई थी। उसी दौरान मृतक के परिजन द्वारा इस तरह का भाषण भी दिया गया था। तत्समय नियमानुसार कार्यवाही की गई थी।
— Barmer Police (@Barmer_Police) March 15, 2023
ಖ್ಯಾತ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಈ ಬಗ್ಗೆ ಸ್ಪಷ್ಟನೆಗಾಗಿ ಬಿಂಜ್ರಾಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರೊಂದಿಗೆ ಮಾತನಾಡಿದ್ದು, ಅವರು ಘಟನೆಗೆ ಯಾವುದೆ ಕೋಮು ಆಯಾಮವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಭಾರತ್ ಮಾತಾ ಕಿ ಜೈ’ ಎಂದಿದ್ದಕ್ಕೆ ಮುಸ್ಲಿಮರು ಥಳಿಸಿದರು ಎಂಬುದು ಸುಳ್ಳು
“2019 ರಲ್ಲಿ ನಡೆದ ಬಸ್ ಅಪಘಾತದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅಪಘಾತಕ್ಕೆ ಕಾರಣವಾದ ಬಸ್ಸಿನ ಮಾಲೀಕರು ಪೆಟ್ರೋಲ್ ಪಂಪ್ ಕೂಡ ಹೊಂದಿದ್ದರು. ಹೀಗಾಗಿ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಬಸ್ಸಿನ ಮಾಲೀಕ ಮತ್ತು ಆತನ ಇತರೆ ವ್ಯಾಪಾರ ಸಂಸ್ಥೆಗಳನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುತ್ತಿದ್ದಾನೆಯೇ ಹೊರತು ಇಡೀ ಹಿಂದೂ ಸಮುದಾಯದ ಬಗ್ಗೆಯಲ್ಲ. ಮೃತರ ಅಂತಿಮ ಸಂಸ್ಕಾರದ ದಿನದಂದು ಅವರ ನಿವಾಸದಲ್ಲಿ ಈ ಭಾಷಣ ಮಾಡಲಾಯಿತು” ಎಂದು ಆಲ್ಟ್ ನ್ಯೂಸ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.
“ಮೃತರ ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಾಗಿರಲಿಲ್ಲ. ಸಂತ್ರಸ್ತರ ಕುಟುಂಬಕ್ಕೆ ಸಹಾಯ ಮಾಡುವಂತೆ ಬಸ್ ಮಾಲೀಕರನ್ನು ಕೇಳಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರು. ಹೀಗಾಗಿ ಪ್ರತಿಭಟನೆಯಲ್ಲಿ ಈ ಭಾಷಣ ಮಾಡಲಾಗಿದೆ” ಎಂದು ಬಿಂಜ್ರಾಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹೇಳಿದ್ದಾರೆ ಎಂದು ಆಲ್ಟ್‌ನ್ಯೂಸ್ ಹೇಳಿದೆ.
ಒಟ್ಟಿನಲ್ಲಿ ಹೇಳಬಹುದಾದರೆ, ಈ ವಿಡಿಯೋವನ್ನು ರಾಜಸ್ಥಾನದಲ್ಲಿ 2019ರ ಜೂನ್ ತಿಂಗಳಲ್ಲಿ ರೆಕಾರ್ಡ್ ಮಾಡಲಾಗಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಆರೋಪಿ ಚಾಲಕ ಮತ್ತು ಅವರ ವ್ಯಾಪಾರ ಸಂಸ್ಥೆಗಳ ಆರ್ಥಿಕ ಬಹಿಷ್ಕಾರಕ್ಕಾಗಿ, ಮೃತ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಕರೆ ನೀಡಲಾಗಿತ್ತು. ಆದರೆ ಹಿಂದೂಗಳ ಆರ್ಥಿಕ ಬಹಿಷ್ಕಾರಕ್ಕೆ ಮುಸ್ಲಿಮರು ಕರೆ ನೀಡಿರಲಿಲ್ಲ. ಇದನ್ನು ರಾಜಸ್ಥಾನ ಪೊಲೀಸರು ಕೂಡಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದು ಬೆಂಗಳೂರಿನಲ್ಲಿ ನಡೆದ ಘಟನೆ ಅಲ್ಲ, ಹಾಗೂ ಹಿಂದೂಗಳಿಗೆ ಹೇಳಿದ್ದೂ ಅಲ್ಲ. ಮುಸ್ಲಿಮರನ್ನು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತಪ್ಪಾಗಿ ಬಿಂಬಿಸಲು ಇದನ್ನು ಹಂಚಲಾಗುತ್ತಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ‘ತುಘಲಕ್’ ನಾಟಕವನ್ನು ಕಟ್ಟಿ ಕೊಟ್ಟಿದ್ದರ ಹಿಂದ ರೋಚಕ ಕಥೆ ಇದೆ – ಡಾ. ಶ್ರೀಪಾಧ್ ಭಟ್