ಪ್ಯಾಲಸ್ತೀನ್ ಪರ ಬರಹ: ಮುಂಬೈನ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲೆ ವಜಾ!

ನವದೆಹಲಿ: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಸೊಮಯಾ ಶಾಲೆಯ ಆಡಳಿತ ಮಂಡಳಿ ಕೈಗೊಂಡಿರುವ ನಿರ್ಣಯವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಶಾಲೆಯ ಆಡಳಿತ ಮಂಡಳಿ ತನ್ನ ಶಾಲೆಯ ಪ್ರಾಂಶುಪಾಲರನ್ನೇ ಸೇವೆಯಿಂದ ವಜಾ ಮಾಡಿದೆ. ಸೊಮಯಾ ಶಾಲೆಯ ಪ್ರಾಂಶುಪಾಲೆಯಾಗಿದ್ದ ಪರ್ವೀನ್ ಶೇಖ್ ಅವರು ಪ್ಯಾಲಸ್ತೀನ್ ಪರ ಬರಹ ಬರೆಯುತ್ತಿದ್ದಾರೆ ಎಂದು ಸೇವೆಯಿಂದ ವಜಾ ಮಾಡಲಾಗಿದೆ.

ಹೌದು, ಸೊಮಯಾ ಶಾಲೆಯ ಪ್ರಾಂಶುಪಾಲೆಯಾಗಿದ್ದ ಪರ್ವೀನ್ ಶೇಖ್, ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಸಕ್ರಿಯರಾಗಿದ್ದರಂತೆ. ಪ್ಯಾಲಸ್ತೀನ್ ಪರ ಬರಹಗಳನ್ನು ಪ್ರಕಟ ಮಾಡುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲರ ಧೋರಣೆಯು ತನ್ನ ಸಂಸ್ಥೆ ಹಾಗೂ ಶಾಲಾ ಆಡಳಿತ ಮಂಡಳಿಯ ಮೌಲ್ಯಗಳಿಗೆ ಪೂರಕವಾಗಿ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಆಡಳಿತ ಮಂಡಳಿ ಅವರನ್ನು ಸೇವೆಯಿಂದ ವಜಾಗೊಳಿಸುವ ತೀರ್ಮಾನ ಪ್ರಕಟಿಸಿದೆ.

ಇದನ್ನು ಓದಿ : ಪ್ರಧಾನಿ ನರೇಂದ್ರ ಮೋದಿ ಜನಾಂಗೀಯವಾದಿ; ಪಿ.ಚಿದಂಬರಂ

ಸೊಮಯಾ ಶಾಲೆ ಆಡಳಿತ ಮಂಡಳಿ ಕೈಗೊಂಡಿರುವ ನಿರ್ಧಾರ ದೋಷಪೂರಿತ ಹಾಗೂ ಅನ್ಯಾಯ ಎಂದು ಪರ್ವೀನ್ ಶೇಖ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿ ತಮ್ಮನ್ನು ವಜಾ ಮಾಡಿರುವ ವಿಚಾರ ನನಗೆ ನೋಟಿಸ್ ಮೂಲಕ ಬರುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ತಿಳಿದು ಬಂತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಸೇವೆಯಿಂದ ವಜಾ ಮಾಡಿದ ಪ್ರಕ್ರಿಯು ಸಂಪೂರ್ಣ ಅಕ್ರಮ ಮಾತ್ರವಲ್ಲ, ಮಾನಹಾನಿಕರ ಕೂಡಾ ಆಗಿದೆ ಎಂದು ಪರ್ವೀನ್ ಶೇಖ್ ಹೇಳಿದ್ದಾರೆ.

ಇದನ್ನು ನೋಡಿ :  ರೋಹಿತ್‌ ವೇಮುಲಾ ದಲಿತನಲ್ಲವೆ?! ರೋಹಿತ್‌ನನ್ನು ಮತ್ತೆ ಮತ್ತೆ ಕೊಲ್ಲುತ್ತಿರುವ ಮನುವಾದಿ ವ್ಯವಸ್ಥೆ

Donate Janashakthi Media

Leave a Reply

Your email address will not be published. Required fields are marked *