ಶಿವಮೊಗ್ಗ: ಏಪ್ರಿಲ್ 23 ಬುಧವಾರದಂದು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರಿಂದ ನಡೆದ ಹಿಂದೂಗಳ ಮೇಲೆ ನಡೆದ ಗುಂಡಿನ ದಾಳಿಯನ್ನು ಖಂಡಿಸಿ ನಗರದಲ್ಲಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದೆ. ಪಹಲ್ಗಾಂ
ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ದಾಳಿಯಲ್ಲಿ ಬಲಿಯಾದ ಜಿಲ್ಲೆಯ ಮಂಜುನಾಥ್ ರನ್ನು ಸ್ಮರಿಸಲಾಯಿತು.
“ಅಮರ್ ರಹೇ… ಅಮರ್ ರಹೇ… ಮಂಜುನಾಥ್ ಅಮರ್ ರಹೇ” ಎಂದು ಘೋಷಣೆ ಕೂಗಿದರು. ನೂರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ದಾಳಿಯನ್ನು ತೀವ್ರವಾಗಿ ಖಂಡಿಸಿ ಧಿಕ್ಕಾರ ಕೂಗಿದರು. ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದನ್ನೂ ಓದಿ: 3 ತಿಂಗಳಲ್ಲಿ ಜಿಲ್ಲಾ – ತಾಲೂಕು ಪಂಚಾಯಿತಿ ಚುನಾವಣೆ: ಡಾ. ಶರಣ್ ಪ್ರಕಾಶ್ ಪಾಟೀಲ್
ಪೈಶಾಚಿಕ ದಾಳಿಯಲ್ಲಿ ರಾಜ್ಯದ ಮೂವರು ಬಲಿಯಾಗಿದ್ದಾರೆ.ಮೂಲತಃ ಆಂಧ್ರದ ನೆಲ್ಲೂರಿನ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲೆಸಿರುವ ಐಟಿ ಉದ್ಯೋಗಿ ಮಧುಸೂದನ್ ದಾಳಿಗೆ ಬ*ಲಿಯಾಗಿದ್ದಾರೆ.
ಎರಡು ದಿನದ ಹಿಂದೆ ಕುಟುಂಬದೊಂದಿಗೆ ಕಾಶ್ಮೀರಕ್ಕೆ ತೆರಳಿದ್ದರು. ಶಿವಮೊಗ್ಗದ ಮಂಜುನಾಥ್ , ಬೆಂಗಳೂರಿನಲ್ಲಿ ನೆಲೆಸಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಭರತ್ ಭೂಷಣ್ (41) ಮೃತರಾಗಿದ್ದಾರೆ.
ಇದನ್ನೂ ನೋಡಿ: ವಕ್ಫ್ ಚರ್ಚೆ ತೀವ್ರಗೊಂಡಿದ್ಯಾಕೆ? ಕೆಲವು ಅಂಶಗಳ ಮೇಲೆ ಕ್ರಮ ಕೈಗೊಳ್ಳದಂತೆ ಸುಪ್ರೀಂ ಸರ್ಕಾರವನ್ನು ಏಕೆ ಕೇಳಿದೆ?