2014-19ರ ಅಚ್ಛೇ ದಿನ್ ಕಾಲದ ನೋಟುರದ್ಧತಿ ಮತ್ತು ಜಿಎಸ್‌ಟಿ ನಂತರ 2019-24ರ ‘ನ್ಯೂ ಇಂಡಿಯ’ ಕಾಲದಲ್ಲಿ ಮತ್ತೊಂದು ‘ಚಾರಿತ್ರಿಕ’ ಹೆಜ್ಜೆ ಇಟ್ಟಿರುವುದಾಗಿ ಸ್ವತಃ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ- ಕೊವಿಡ್ ಕಾಲದಲ್ಲಿ ಹೊರಡಿಸಿದ್ದ ಮೂರು ಕೃಷಿ ಸುಗ್ರೀವಾಜ್ಞೆಗಳು ಈಗ ಕಾನೂನುಗಳಾಗಿವೆ. ಪ್ರಧಾನ ಮಂತ್ರಿಗಳು ಈಗ ನೋಟುರದ್ಧತಿ ಬಗ್ಗೆ ಮಾತೇ ಆಡದಿದ್ದರೂ, ಭಕ್ತವೃಂದ ಇದು ನೋಟುರದ್ಧತಿ-2 ಎಂದೇ ಪ್ರಚಾರಕ್ಕಿಳಿದಿದೆ.
ಕಪ್ಪು ಹಣ ನಿರ್ನಾಮದ ಹೆಸರಲ್ಲಿ ನೋಟುರದ್ಧತಿಯಿಂದ ಅರ್ಥವ್ಯವಸ್ಥೆಯನ್ನು ನೆಲಕ್ಕುರುಳಿಸಿದ್ದಾಯ್ತು; ಆರ್ಥಿಕ ಬೆಳವಣಿಗೆ ಹೆಸರಲ್ಲಿ ಜಿಎಸ್‍ಟಿಯಿಂದ ರಾಜ್ಯಗಳನ್ನು ಸುಸ್ತುಗೊಳಿಸಿದ್ದಾಯ್ತು; ಈಗ ಮಧ್ಯವರ್ತಿಗಳನ್ನು ತೆಗೆಯುವ ಹೆಸರಲ್ಲಿ ಕೃಷಿ ಕಾನೂನುಗಳ ಮೂಲಕ ರೈತರ ಮೇಲೆ!

ಮಧ್ಯವರ್ತಿಗಳಿಂದ ಬಿಡುಗಡೆಯ ಪರಿಯಿದು
–ವಾಸ್ತವವಾಗಿ ಕಾರ್ಪೊರೇಟ್ ಸವಾರಿಗಾಗಿ ತಿದ್ದುಪಡಿ?

ಕಾರ್ಪೊರೇಟ್ ಪ್ರಧಾನ ದೇಶವಾಗಿಸಲು ಕೃಷಿ ಮಸೂದೆಗಳು!

ದೇಶದ ಬೆನ್ನೆಲುಬಿಗೆ ಪರಿಷ್ಕೃತ ಸ್ವರೂಪ!

ರೈತನಿಗೆ ಸ್ವಾತಂತ್ರ್ಯ- ಆಯ್ಕೆಗಳು ಅವೆಷ್ಟು ಭವ್ಯ, ದಿವ್ಯ!

ಕೃಷಿ ಮಸೂದೆಗಳು ತರಲಿರುವ ಅಚ್ಛೇ ದಿನ್

ಉದ್ಯೋಗ ಕಳಕೊಳ್ಳುವವರಿಗೂ
ಅಚ್ಛೇ ದಿನ್-ರೈತರೊಂದಿಗೆ!
