ಬೆಂಗಳೂರು: ಶಿವಸಂಚಾರ ನಾಟಕೋತ್ಸವ ಸಮಿತಿ ವತಿಯಿಂದ 2022ರ ಮಾರ್ಚ್ 26 ರಿಂದ 28ರವರೆಗೆ ಮಲ್ಲತ್ತಳ್ಳಿಯಲ್ಲಿರುವ ಕಲಾ ಗ್ರಾಮ, ಬಯಲು ರಂಗಮಂದಿರದಲ್ಲಿ ಮೂರು ದಿನಗಳ ʻಶಿವ ಸಂಚಾರ ನಾಟಕೋತ್ಸವʼ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಗರಬಾವಿ ಬಸವ ಬಳಗಮ ಬಸವ ಇಂಟರ್ ನ್ಯಾಷನಲ್ ಫೌಂಡೇಷನ್, ಲಂಡನ್, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಗೋವಿಂದರಾಜನಗರ ಹಾಗೂ ರಾಜರಾಜೇಶ್ವರಿನಗರ ಘಟಕ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾಗರಬಾವಿ ಬಸವ ಬಳಗದ ನಟರಾಜ್ ಬ್ಯಾಲಕೆರೆ, ಶಿವನಗೌಡ ಜಿ. ಪಾಟೀಲ್, ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನದ ಎಸ್. ಮಹದೇವಯ್ಯ, ಲಂಡನ್, ಡಾ. ಕೆ.ವಿ. ಮಂಜುನಾಥ್, ಶರಣ ಸಾಹಿತ್ಯ ಪರಿಷತ್ತು, ಗೋವಿಂದರಾಜನಗರ ಘಟಕದ ಎಂ.ಆರ್. ಪರಮೇಶ್, ಶಿವಣ್ಣ ಎಂ.ಸಿ. ಹಾಗೂ ಶರಣ ಸಾಹಿತ್ಯ ಪರಿಷತ್ತು, ರಾಜರಾಜೇಶ್ವರಿನಗರ ಘಟಕದ ಪ್ರೊ. ಸಂಗಮೇಶ ಗೌಡಪ್ಪನವರ್, ಶಿವಕುಮಾರ ಆರಾಧ್ಯ, ಅನಿಲ್ ಹಾರಕೊಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಸಾಣೇಹಳ್ಳಿಯಲ್ಲಿ ಸಿಜಿಕೆ ನುಡಿಚಿತ್ರ ಟಂಕಸಾಲೆ ಉದ್ಘಾಟನೆ
ಮಾರ್ಚ್ 26ರಂದು ಉದ್ಘಾಟನಾ ಸಮಾರಂಭವು ಸಂಜೆ 5.30ಕ್ಕೆ ನಡೆಯಲಿದೆ. ಸಮಾರಂಭದ ಬಳಿಕ ಲಿಂಗದೇವರು ಹಳೇಮನೆ ರಚನೆ ಹಾಗೂ ಜಗದೀಶ್ ಆರ್. ನಿರ್ದೇಶಿಸಿರುವ ಗಡಿಯಂಕ ಕುಡಿಮುದ್ದ ಪ್ರದರ್ಶನವಿರುತ್ತದೆ.
ವೀಣಾ ಮಹದೇವ್ ಮತ್ತು ತಂಡದಿಂದ ವಚನ ಗಾಯನ ಕಾರ್ಯಕ್ರಮವಿರಲಿದೆ.
ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಸಂಜೆ 4.00 ಗಂಟೆಗೆ ರಂಗಭೂಮಿ ಮತ್ತು ಚಲನಶೀಲತೆ – ಒಂದು ಅವಲೋಕನ ಕಾರ್ಯಕ್ರಮವಿರಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ಜಿ.ಎನ್. ಮೋಹನ್ ನಿರ್ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಂಗಕರ್ಮಿ ಸಿ.ಕೆ. ಗುಂಡಣ್ಣ ಹಾಗೂ ತಂಡಗಳಾಗಿ ಕಲಾಗಂಗೋತ್ರಿ, ಪ್ರಯೋಗರಂಗ, ವಿಜಯನಗರ ಬಿಂಬ, ಸೂರ್ಯ ಕಲಾವಿದರು ನಾಟಕ ತಂಡದವರು ಭಾಗವಹಿಸಲಿದ್ದಾರೆ.
ವಿಜಯನಗರ ಬಿಂಬದ ಎಸ್.ಆರ್. ವೆಂಕಟೇಶ್ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 2022ನೇ ಸಾಲಿನ ನಾಟಕ ಅಕಾಡೆಮಿ ಪುರಸ್ಕೃತರಾದ ರಾಮಚಂದ್ರ ಹಾಗೂ ವೆಂಕಟೇಶ್(ಪಿನ್ನಯ್ಯ) ಅವರಿಗೆ ಅಭಿನಂದನಾ ಕಾರ್ಯಕ್ರಮವಿರಲಿದೆ.
ನಂತರ, ಬಿ.ಆರ್. ಅರಿಷಣಗೂಡಿ ರಚನೆಯ, ವೈ.ಡಿ. ಬಾದಾಮಿ ಸಾಣೆಹಳ್ಳಿ ನಿರ್ದೇಶನದ ಬಸ್ ಕಂಡಕ್ಟರ್ ನಾಟಕ ಪ್ರದರ್ಶನವಿರುತ್ತದೆ. ನಂತರ ಪ್ರಯೋಗರಂಗ, ವಿಜಯಕುಮಾರ್ ಜಿತೂರಿ ಮತ್ತು ತಂಡ, ಶ್ರೀ ಶಾಂತಕುಮಾರ ಮತ್ತು ತಂಡದಿಂದ ರಂಗಗೀತೆಗಳು ಇರಲಿವೆ.
ಮಾರ್ಚ್ 28ರಂದು ಸಂಜೆ 4.00 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವಿರಲಿದೆ. ನಂತರ, ಚಂದ್ರಶೇಖರ ತಾಳು ರಚನೆಯ, ಛಾಯಾ ಭಾರ್ಗವಿ ನಿರ್ದೇಶನದ ಒಕ್ಕಲಿಗ ಮುದ್ದಣ್ಣ ನಾಟಕ ಪ್ರದರ್ಶವಿರಲಿದೆ.
ಕದಲಿ ವೇದಿಕೆ, ರಾಜರಾಜೇಶ್ವರಿನಗರ ಘಟಕದಿಂದ ವಚನ ಗಾಯನವಿರಲಿದ್ದು, ರುದ್ರಮಣಿ ವೀರಭದ್ರಯ್ಯ ಮತ್ತು ತಂಡದವರು ನಿರ್ವಹಣೆ ಮಾಡಲಿದ್ದಾರೆ.