ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್ ಅವರನ್ನು ಕೊಲೆ ಮಾಡುವಂತೆ ಆಗ್ರಹಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಂಜಿತ್ ಆರ್. ಎಂ. ಎಂದು ಗುರುತಿಸಲಾಗಿದೆ. ಮತ್ತೊಂದೆಡೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಅವರ ಪಕ್ಷದ ಸಚಿವರನ್ನು ಅವಹೇಳನ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಬಿಜೆಪಿ ನಾಯಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಬಂಧನ
ಈ ಬಗ್ಗೆ ಬೆಂಗಳೂರಿನ ಜಯನಗರ ಬ್ಲಾಕ್‌ನ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ದೂರು ದಾಖಲಿಸಿದ್ದರು. ಆರೋಪಿಯು “ಡಿ. ಕೆ. ಸಹೋದರರನ್ನು ಕೊಲ್ಲಿ” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆರೋಪಿಯು ತಾನು ಬೆಂಗಳೂರು ನಗರ ಪೊಲೀಸರ ಬಳಿ ಸೈಬರ್ ಕ್ರೈಂ ಡಿಟೆಕ್ಟಿವ್ ಎಂದು ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಬಂಧನ
ಇದನ್ನೂ ಓದಿ: ಚಾಮರಾಜನಗರ | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ಆರಂಭ
ಇಷ್ಟೆ ಅಲ್ಲದೆ, ಆರೋಪಿ ರಂಜಿತ್ ಈ ಹಿಂದಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಎಂದು ತಿಳಿದು ಬಂದಿದೆ. ಬೆಂಗಳೂರಿನ ಜಯನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಿಎಂ ಸ್ಟಾಲಿನ್ ಮತ್ತು ಡಿಎಂಕೆ ಸಚಿವರ ಅವಹೇಳನಕಾರಿ ಚಿತ್ರ ಪೋಸ್ಟ್ – ತಮಿಳುನಾಡು ಬಿಜೆಪಿ ನಾಯಕನ ಬಂಧನ
ಚೆನ್ನೈ: ತಮಿಳುನಾಡಿನ ಅರಿಯಲೂರಿನಲ್ಲಿ ಬಿಜೆಪಿ ನಾಯಕರೊಬ್ಬರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪಕ್ಷದ ಡಿಎಂಕೆಯ ಇತರ ಕೆಲವು ನಾಯಕರ ಅವಹೇಳನಕಾರಿ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿವರಗಳ ಪ್ರಕಾರ, ಬಿಜೆಪಿ ಪದಾಧಿಕಾರಿಯನ್ನು ವಡುಗಪಾಳ್ಯಂ ನಿವಾಸಿ ಸುರೇಶ್ ಎಂದು ಗುರುತಿಸಲಾಗಿದ್ದು, ಬುಧವಾರ ತಡರಾತ್ರಿ ಬಂಧಿಸಲಾಗಿದೆ.
ಆರೋಪಿಯು ಉದಯನಿಧಿ ಸ್ಟಾಲಿನ್, ಸೆಂಥಿಲ್ ಬಾಲಾಜಿ, ಮನೋ ತಂಗರಾಜ್, ಪಿಟಿಆರ್ ತ್ಯಾಗರಾಜನ್, ಮುಖ್ಯಮಂತ್ರಿ ಅಳಿಯ ಶಬರೇಶನ್, ಡಿಎಂಕೆ ಸಂಸದ ಟಿಆರ್ ಬಾಲು ಮತ್ತು ವಿಸಿಕೆ ಸಂಸದ ತಿರುಮಾವಲವನ್ ಅವರ ಅವಹೇಳನಕಾರಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದನು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ವಿಡಿಯೊ ನೋಡಿ: ಕಾರ್ನಾಡ್ ನೆನಪು : ಕಾರ್ನಾಡ್ ನಾಟಕಗಳಲ್ಲಿ ʻಪೌರಾಣಿಕ ವಸ್ತುʼ – ಡಾ.ಎಚ್, ಎಲ್, ಪುಷ್ಪಾರವರ ಮಾತುಗಳು