ತಮಿಳುನಾಡು:ಕೋರ್ಟ್ ಆವರಣದಲ್ಲಿಯೇ ವಕೀಲನೊಬ್ಬನ ಮೇಲೆ ಕೊಲೆ ಪ್ರಯತ್ನ ಮಾಡಿರುವಂತಹ ಘಟನೆ ತಮಿಳುನಾಡಿನ ಹೊಸೂರು ಕೋರ್ಟ್ ಬಳಿ ನಡೆದಿದೆ.
ಕಣ್ಮನ್(30) ಮೃತ ವಕೀಲರು ಎಂದು ತಿಳಿದುಬಂದಿದೆ. ಕೋರ್ಟ್ ನ ಆವರಣದಲ್ಲೇ ವಕೀಲನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಲಾಗಿದೆ.
ಇದನ್ನೂ ಓದಿ : ಹೇರ್ ಡ್ರೈಯರ್ ಸ್ಪೋಟ; ಮಹಿಳೆಯ ಎರಡೂ ಕೈ ತುಂಡು
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವಕೀಲನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು.ಆದರೆ ಆಸ್ಪತ್ರೆಗೆ ದಾಖಲಿಸುವುದರೊಳಗೆ ವಕೀಲ ಕಣ್ಮನ್ ಪ್ರಾಣ ಕಳೆದುಕೋಂಡಿದ್ದರು ಎಂದು ತಿಳಿದು ಬಂದಿದೆ.
ಮಚ್ಚಿನಿಂದ ಹಲ್ಲೆ ಮಾಡಿದ ಬಳಿಕ ಆರೋಪಿ ಆನಂದ್ ಕೋರ್ಟ್ಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಹೊಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ನೋಡಿ : ಮರಕುಂಬಿ ಪ್ರಕರಣ ; 97 ಮಂದಿಗೆ ಜಾಮೀನು | ಜಾಮೀನನ್ನು ಸಂಭ್ರಮಸಲು ಸಿದ್ದತೆ ನಡೆದಿತ್ತು – ಮರಕುಂಬಿ ಬಸವರಾಜ