ದ್ವೇಷದ ರಾಜಕಾರಣದಿಂದ ಕೊಲೆ: ಆರು ಯುವಕರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರದ ಚೆಕ್‌ ವಿತರಣೆ 

ಬೆಂಗಳೂರು: ಮತೀಯ ಹಾಗೂ ದ್ವೇಷದ ರಾಜಕಾರಣದಿಂದಾಗಿ ಕೊಲೆಗೀಡಾಗಿದ್ದ ಆರು ಯುವಕರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ₹ 25 ಲಕ್ಷ ರೂಪಾಯಿ  ಮೊತ್ತದ ಚೆಕ್‌ ಅನ್ನು ಸೋಮವಾರ ವಿತರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ  ಕಳಂಜ ಗ್ರಾಮದ ಮಸೂದ್‌,ಮಂಡ್ಯದ ಇದ್ರಿಸ್‌ ಪಾಷ್‌,ಮಂಗಳೂರಿನ ಹೊರ ವಲಯದ ಬಾಲ ಗ್ರಾಮದ ಮೊಹಮದ್‌ ಫಾಜಿಲ್‌, ನರಗುಂದದ ಶಮೀರ್‌, ಮಂಗಳೂರಿನ ಕಾಟಿಪಳ್ಯದ ಅಬ್ದುಲ್‌ ಜಲೀಲ್‌ ಮತ್ತು ದೀಪಕ್‌ ರಾವ್‌ ಅವರ ಕುಟುಂಬದವರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ ₹ 25 ಲಕ್ಷ ಪರಿಹಾರ ವಿತರಿಸಲಾಯಿತು.

ಇದನ್ನೂ ಓದಿ:ಕೋಮುದ್ವೇಷಕ್ಕೆ ಬಲಿಯಾದ ನಾಲ್ಕು ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 25 ಲಕ್ಷ ಪರಿಹಾರ ಘೋಷಣೆ!

ಮುಖ್ಯಮಂತ್ರಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಈ ಯುವಕರು ಕುಟುಂಬಗಳ ಸದಸ್ಯರು ಚೆಕ್‌ ಸ್ವೀಕರಿಸಿದರು. ಸಚಿವರಾದ ಬಿ.ಜೆಡ್‌. ಜಮೀರ್‌ ಅಹಮ್ಮದ್‌ ಖಾನ್‌ , ಎನ್‌.ಚೆಲುವರಾಯಸ್ವಾಮಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಅಬ್ದುಲ್‌ ನಜೀರ್‌ ಇದ್ದರು. ಕೋಮು ಗಲಭೆಗಳಲ್ಲಿ ಮೃತಪಟ್ಟ ಹಿಂದೂಗಳಕುಟುಂಬದವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಲಾ ₹ 25 ಲಕ್ಷ ಪರಿಹಾರ ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್‌ ನೆಟ್ಟಾರು, ಶಿವಮೊಗ್ಗದ ಹರ್ಷ ಎಂಬ ಯುವಕರ ಕುಟುಂಬಗಳಿಗೆ ಈ ರೀತಿ ಪರಿಹಾರ ನೀಡಲಾಗಿತ್ತು. ಆದರೆ, ಮೃತರಾದ ಮುಸ್ಲಿಮರ  ಕುಟುಂಬಗಳಿಗೆ ಪರಿಹಾರ ನೀಡಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸರ್ಕಾರ ಎಲ್ಲಾರನ್ನೂ ಸಮಾನವಾಗಿ ಕಾಣಬೇಕು. ಜನರ ಮದ್ಯೆ ತಾರತಮ್ಯ ಮಾಡಬಾರದು. ಈ ಕಾರಣದಿಂದ ಆರು ಮಂದಿಯ ಕುಟುಂಬಗಳಿಗೆ ಈಗ ಪರಿಹಾರ ವಿತರಿಸಲಾಗಿದೆ ಎಂದರು.

 

Donate Janashakthi Media

Leave a Reply

Your email address will not be published. Required fields are marked *