- ವಿಧ್ಯಾರ್ಥಿಗಳ ವಸತಿ ನಿಲಯಗಳ ದಾಖಲಾತಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ
- ವಸತಿ ನಿಲಯಗಳ ಅರ್ಜಿಯ ಕಾಲಾವಕಾಶ ಕುರಿತು ಅರ್ಜಿ ಸಲ್ಲಿಕೆ
ಮಂಡ್ಯ : ಮುರಾರ್ಜಿ ವಿಜ್ಞಾನ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಧ್ಯಾರ್ಥಿಗಳ ವಸತಿ ನಿಲಯಗಳ ದಾಖಲಾತಿಗಾಗಿ ಅರ್ಜಿ ಸಲ್ಲಿಕೆಗೆ ನೀಡಲಾಗಿರುವ ಸಮಯ ಅವೈಜ್ಞಾನಿಕವಾಗಿದೆ. ಇದರಿಂದ ವಿಧ್ಯಾರ್ಥಿಗಳು ವಸತಿ ನಿಲಯಗಳ ಸೌಲಭ್ಯಗಳಿಂದ ವಂಚಿತರಾಗುತ್ತರೆಂದು ಖಂಡಿಸಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು)ನ ಮಂಡ್ಯ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
2022-23ನೇ ಶೈಕ್ಷಣಿಕ ಸಾಲಿನ ಮುರಾರ್ಜಿ ವಿಜ್ಞಾನ ಕಾಲೇಜುಗಳ ಪ್ರಥಮ ಪಿ.ಯು.ಸಿ. ತರಗತಿ ವಿಧ್ಯಾರ್ಥಿಗಳಿಗೆ, ವಸತಿ ನಿಲಯಗಳ ದಾಖಲಾತಿಗಳನ್ನು ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಬರುವ ಮೊದಲೆ ಆಹ್ವಾನ ಮಾಡಿರುವುದು ಅವೈಜ್ಞಾನಿಕವಾಗಿದೆ. ಅಲ್ಲದೆ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಐದು ದಿನ ಮಾತ್ರ ಕಾಲಾವಕಾಶ ವಿದ್ದಿದ್ದರಿಂದ ಎಷ್ಟು ಮಂದಿ ಅರ್ಜಿ ಸಲ್ಲಿಸಲು ಸಾಧ್ಯ. ಮುರಾರ್ಜಿ ಹಾಸ್ಟೆಲ್ ನಲ್ಲೇ ಓದಿರುವ ಮಕ್ಕಳಿಗೂ ಇದರ ಬಗ್ಗೆ ಮಾಹಿತಿ ತಿಳಿಯದಿರುವುದು ಇದೆ.
ಹಾಗಾಗಿ ಈಗ ಮಾಡಿರುವ ನೀತಿಯು ತುಂಬಾ ಅವೈಜ್ಞಾನಿಕ ರೀತಿಯಾಗಿದೆ. ಹಾಗಾಗಿ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಉದಾಹರಣೆಯೊಂದಿಗೆ ಹೇಳುವುದಾದರೆ. ಒಂದು ಆದಾಯ ಪ್ರಮಾಣ ಪತ್ರ ಪಡೆಯಲು ಕನಿಷ್ಠ 15 ದಿನಬೇಕಾಗುತ್ತೆ, ಸಾಮಾನ್ಯ ಜನ ಹಾಗು ಬಡ ಮಕ್ಕಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ತಾವುಗಳು ಪಿ.ಯು.ಸಿ. ವಿಧ್ಯಾರ್ಥಿಗಳ ವಸತಿ ನಿಲಯಗಳ ದಾಖಾಲಾತಿಗೆ ಕಾಲಾವಕಾಶ ನೀಡಬೇಕೆಂದು ಅವರು ಮಂಡ್ಯ ಜಿಲ್ಲಾದಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.