ಬೆಂಗಳೂರು : ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಮತ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿಯ ಮುನಿರತ್ನರವರು ಗೆಲವು ಸಾಧಿಸಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಆರ್. ಆರ್. ನಗರದ ಉಪಚುನಾವಣೆಯಲ್ಲಿ ಮುನಿರತ್ನ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗಿಂತ 50 ಸಾವಿರಕ್ಕೂ ಹೆಚ್ಚಿನ ಅಂತರದಲ್ಲಿ ಮುನಿರತ್ನ ಗೆಲುವು ಸಾಧಿಸಿದ್ದಾರೆ.
ಮತಗಳ ವಿವರ ಈ ರೀತಿ ಇದೆ : ಬಿಜೆಪಿಯ ಮುನಿರತ್ನ : 1,18,980, ಕಾಂಗ್ರೆಸ್ ನ ಕುಸುಮಾ : 65,795, ಜೆಡಿಎಸ್ ಕೃಷ್ಣಮೂರ್ತಿ 7772. ಉಪಚುನಾವಣೆಯಲ್ಲಿ ಮುನಿರತ್ನರವರು ಮತದಾರರಿಗೆ ಸೆಟೆಪ್ ಭಾಕ್ಸ್ ನೀಡಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಸ್ವತಃ ಅವರು ಅದನ್ನು ಒಪ್ಪಿಕೊಂಡಿದ್ದು ಸೆಟೆಪ್ ಬಾಕ್ಸ್ ನೀಡಿದ್ದು ಅಪರಾಧವಲ್ಲ ಎಂದಿದ್ದರು, ರಾಜ್ಯ ಸರಕಾರವೂ ಮುನಿರತ್ನರ ಕ್ರಮವನ್ನು ಸಮರ್ಥಿಸಿಕೊಂಡಿತ್ತು.
ಟ್ರಬಲ್ ಶೂಟರ್ ಡಿ.ಕೆ.ಶಿ ಈ ಕ್ಷೇತ್ರವನ್ನು ಗೆಲ್ಲುವುದಕ್ಕಾಗಿ ಸಾಕಷ್ಟು ಹರಸಾಹಸ ಮಾಡಿದ್ದರು, ಘಟಾನುಘಟಿ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಕ್ಷೇತ್ರದಲ್ಲಿ ಡಿಕೆಶಿ ಮೊಕ್ಕಾಂ ಹೂಡಿದ್ದರೂ ಕೂಡಾ ಕಾಂಗ್ರೆಸ್ ತಂತ್ರಗಾರಿಕೆ ಫಲ ನೀಡಲಿಲ್ಲ. ಫಲಿತಾಂಶದ ನಂತರ ಪ್ರತಿಕ್ರೀಯೆ ನೀಡಿರುವ ಮುನಿರತ್ನ “ ಇನ್ನು ಎರಡು ವರ್ಷದ ಅವಧಿಯಲ್ಲಿ ಆರ್. ಆರ್. ನಗರವನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ. ನಾವೆಲ್ಲ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿದ್ದು ಹಾಗೂ ಯುವಕರು ಪ್ರಚಾರದಲ್ಲಿ ಹೆಚ್ಚಾಗಿ ತೊಡಗಿದ್ದು ನನ್ನ ಗೆಲುವಿಗೆ ಕಾರಣ ಎಂದು ಪ್ರತಿಕ್ರೀಯಿಸಿದ್ದಾರೆ.