ನವದೆಹಲಿ: ನವೆಂಬರ್ ತಿಂಗಳಲ್ಲಿ ಅತ್ಯಂತ ಪ್ರಮುಖವಾದ ಹಬ್ಬಗಳು ಹಾಗೂ ಸಾಂದರ್ಭಿಕ ವಾರಾಂತ್ಯ ರಜೆಯ ಅಂಗವಾಗಿ ಸುಮಾರು 17 ದಿನಗಳು ಬ್ಯಾಂಕುಗಳಲ್ಲಿ ವಹಿವಾಟು ನಡೆಯುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಧಿಕ ರಜೆಗಳು ಇರುವುದರಿಂದ ಸಾರ್ವಜನಿಕರು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮುನ್ನ, ಬ್ಯಾಂಕುಗಳು ಮುಚ್ಚಲಾಗುವ ಪ್ರಮುಖ ದಿನಗಳ ಪಟ್ಟಿಯನ್ನು ನೀವು ಗಮನಿಸಬೇಕು.
ಭಾರತೀಯ ರಿಸರ್ವ್ ಬ್ಯಾಂಕ್ ರಜಾದಿನದ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ನವೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 17 ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಜಾದಿನಗಳನ್ನು ಮೂರು ಆವರಣಗಳ ಅಡಿಯಲ್ಲಿ ಇರಿಸುತ್ತದೆ.
ಆದಾಗ್ಯೂ, ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತವೆ. ಎಲ್ಲೆಡೆ ಒಂದೇ ಮಾದರಿಯ ರಜಾದಿನಗಳು ಸಹ ಇರುವುದಿಲ್ಲವೆಂದು ಗಮನಿಸಬೇಕಾಗಿದೆ. ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲ್ಪಡುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಸಹ ಅವಲಂಬಿಸಲಿದೆ.
ನವೆಂಬರ್ 2021ರಲ್ಲಿ ಬರುವ ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿವೆ;
- ನವೆಂಬರ್ 1- ಕರ್ನಾಟಕ ರಾಜ್ಯೋತ್ಸವ (ಕರ್ನಾಟಕ) ಅಲ್ಲದೆ, ಕೇರಳ, ಪುದುಚೇರಿ, ಮೇಘಾಲಯದಲ್ಲಿಯೂ ರಜೆ)
- ನವೆಂಬರ್ 3- ನರಕ ಚತುರ್ದಶಿ (ಕರ್ನಾಟಕ)
- ನವೆಂಬರ್ 4- ದೀಪಾವಳಿ ಅಮಾವಸ್ಯೆ (ಲಕ್ಷ್ಮಿ ಪೂಜೆ)/ ದೀಪಾವಳಿ/ ಕಾಳಿ ಪೂಜೆ ಇತ್ಯಾದಿ)
- ನವೆಂಬರ್ 5- ಬಲಿಪಾಢ್ಯಮಿ (ಕರ್ನಾಟಕ) /ವಿಕ್ರಮ್ ಸಂವಂತ್ ಹೊಸ ವರ್ಷದ ದಿನ/ಗೋವರ್ಧನ್ ಪೂಜೆ
- ನವೆಂಬರ್ 6- ಭಾಯಿ ದುಜ್/ಚಿತ್ರಗುಪ್ತ್ ಜಯಂತಿ/ ಲಕ್ಷ್ಮಿ ಪೂಜೆ/ ದೀಪಾವಳಿ/ ನಿಂಗೋಲ್ ಚಕ್ಕೌಬಾ (ಗುಜರಾತ್, ರಾಜಸ್ಥಾನ, ಸಿಕ್ಕಿಂ, ಉತ್ತರಖಂಡ, ಉತ್ತರ ಪ್ರದೇಶ)
- ನವೆಂಬರ್ 10- ಛತ್ ಪೂಜೆ ಇತ್ಯಾದಿ (ಬಿಹಾರ, ಛತ್ತೀಸ್‌ಘಡ, ಜಾರ್ಖಂಡ್)
- ನವೆಂಬರ್ 11- ಛತ್ ಪೂಜೆ ಇತ್ಯಾದಿ (ಬಿಹಾರ)
- ನವೆಂಬರ್ 12- ವಾಂಗಾಲ ಉತ್ಸವ
- ನವೆಂಬರ್ 19- ಗುರುನಾನಕ್ ಜಯಂತಿ / ಕಾರ್ತಿಕ ಪೂರ್ಣಿಮೆ
- ನವೆಂಬರ್ 22- ಕನಕದಾಸ ಜಯಂತಿ (ಕರ್ನಾಟಕ)
- ನವೆಂಬರ್ 23- ಸೆಂಗ್ ಕುಟ್ ಸ್ನೇಮ್ (ಪ್ರಮುಖವಾಗಿ ಮೇಘಾಲಯಾ)
ಮೇಲಿನ ಬ್ಯಾಂಕ್ ರಜಾದಿನಗಳನ್ನು ಹೊರತುಪಡಿಸಿ, ಎರಡನೇ ಮತ್ತು ನಾಲ್ಕನೇ ಶನಿವಾರಗಳು, ತಿಂಗಳ ಭಾನುವಾರಗಳು ಈ ಕೆಳಗಿನ ದಿನಾಂಕಗಳಲ್ಲಿ ಬರಲಿವೆ;
- ನವೆಂಬರ್ 7 – ಭಾನುವಾರ
- ನವೆಂಬರ್ 13- ಎರಡನೇ ಶನಿವಾರ
- ನವೆಂಬರ್ 14- ಭಾನುವಾರ
- ನವೆಂಬರ್ 21- ಭಾನುವಾರ
- ನವೆಂಬರ್ 27- ನಾಲ್ಕನೇ ಶನಿವಾರ
- ನವೆಂಬರ್ 28- ಭಾನುವಾರ