ಮುಂಬರುವ 3 ತಿಂಗಳಲ್ಲಿ ಸುಮಾರು 70 ಮಂದಿ ರಾಜ್ಯಸಭಾ ಸದಸ್ಯರು ನಿವೃತ್ತಿ

ನವದೆಹಲಿ: ಸಂಸತ್ತಿನ ರಾಜ್ಯಸಭೆ ಮೇಲ್ಮನೆಯಲ್ಲಿನ ಸದಸ್ಯತ್ವವು 250 ಸದಸ್ಯರಿಗೆ ಸೀಮಿತವಾಗಿದ್ದು, ಪ್ರಸ್ತುತ ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದೆ. 233 ಸದಸ್ಯರನ್ನು ವಿಧಾನಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ. ಇನ್ನುಳಿದಂತೆ 12 ಜನರನ್ನು ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾಮಾಜಿಕ ಸೇವೆಗಳಿಗೆ ನೀಡಿದ ಕೊಡುಗೆಗಳಿಗಾಗಿ ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ. ಸದಸ್ಯರ ಕಾಲಾವಧಿ ಆರು ವರ್ಷಗಳಾಗಿದ್ದು, ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ.

ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಪ್ರಸ್ತುತ 114 ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ ಬಿಜೆಪಿ 97, ಜೆಡಿಯು 5, ಎಐಡಿಎಂಕೆ 5, ಸ್ವತಂತ್ರ 1 ಮತ್ತು ಸಣ್ಣ ಪಕ್ಷಗಳು 6 ಸ್ಥಾನಗಳನ್ನು ಹೊಂದಿವೆ. ಆದರೆ ಶೀಘ್ರದಲ್ಲೇ ಪರಿಸ್ಥಿತಿ ಬದಲಾಗಲಿದ್ದು, ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 70 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಬಿಜೆಪಿ-ಮಿತ್ರಪಕ್ಷಗಳ ಸದಸ್ಯರ ಸಂಖ್ಯೆ 107ಕ್ಕೆ ಇಳಿಯಲಿದೆ

ಸದ್ಯ ಇರುವ ರಾಜ್ಯಸಭಾ ಸದಸ್ಯರಲ್ಲಿ ಬಿಜೆಪಿ 5, ಎಐಎಡಿಎಂಕೆಗೆ 1 ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ 1 ಸ್ಥಾನ ಕಡಿಮೆಯಾಗಲಿದೆ. ಮೇಲ್ಮನೆಯಲ್ಲಿನ ಬಿಜೆಪಿಯ ಸದಸ್ಯರ ಸಂಖ್ಯೆ ಕುಸಿತದ ಬಳಿಕ, 114 ರಿಂದ 107ಕ್ಕೆ ಇಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಿತ್ರಪಕ್ಷಗಳ ಪ್ರತಿರೋಧ ಹಾಗೂ ಬಿಜೆಡಿ, ವೈಎಸ್‌ಆರ್‌ ಕಾಂಗ್ರೆಸ್‌ ಬೆಂಬಲ ದೊರೆಯದಿದ್ದರೆ ಬಿಜೆಪಿಗೆ ರಾಜ್ಯಸಭೆಯಲ್ಲಿ ಯಾವುದೇ ಮಸೂದೆ ಅಂಗೀಕರಿಸುವುದು ಕಷ್ಟವಾಗಲಿದೆ.

ಇದಲ್ಲದೆ, ಸದ್ಯ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ಪೈಕಿ ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಸ್ಥಾನಗಳು ಕಡಿಮೆಯಾದರೆ, ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆಯೂ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಈ ರಾಜ್ಯಗಳು 19 ರಾಜ್ಯಸಭಾ ಸ್ಥಾನಗಳನ್ನು ಹೊಂದಿವೆ. ಐದು ರಾಜ್ಯಗಳ ವಿಧಾನಸಭೆಯ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಬರಲಿದೆ. ಚುನಾವಣೆ ಫಲಿತಾಂಶ ಬರಲಿದ್ದು, ಬಳಿಕ ಇಲ್ಲಿನ ಚಿತ್ರಣ ಸ್ಪಷ್ಟವಾಗಲಿದೆ.

ಸುಬ್ರಮಣಿಯನ್ ಸ್ವಾಮಿ ನಿವೃತ್ತಿ

ಕೇಂದ್ರದಲ್ಲಿ ಹಿಂದಿನ ಅಟಲ್ ಬಿಹಾರಿ ವಾಜಪೇಯಿ ಎನ್‌ಡಿಎ ನೇತೃತ್ವದ ಸರ್ಕಾರವನ್ನು ಒಂದು ಮತದಿಂದ ಕೆಡವಿ ರಾಜಕೀಯ ದಿಕ್ಕು ಬದಲಿಸಿದ ಸುಬ್ರಮಣಿಯನ್ ಸ್ವಾಮಿ ರಾಜ್ಯಸಭೆಯಿಂದ ನಿವೃತ್ತಿಯೊಂದಲಿದ್ದಾರೆ. ಇದರೊಂದಿಗೆ ಬಿಜೆಪಿಯಿಂದ ಅವರು ದೂರವಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕೇಂದ್ರ ಸರ್ಕಾರದ ವಿರುದ್ಧ ಸುದೀರ್ಘ ವಾಗ್ದಾಳಿ ನಡೆಸುತ್ತಿರುವ ಸುಬ್ರಮಣಿಯನ್ ಸ್ವಾಮಿ ಅವರ ಅಧಿಕಾರಾವಧಿ ಏಪ್ರಿಲ್ 24 ರಂದು ಕೊನೆಗೊಳ್ಳಲಿದೆ. ಬಿಜೆಪಿಯಿಂದ ನಾಮನಿರ್ದೇಶನಗೊಂಡಿದ್ದ ಸುಬ್ರಹ್ಮಣಿಯನ್ ಸ್ವಾಮಿಯವರ ಜತೆ, ಸುರೇಶ್​ ಗೋಪಿ, ರೂಪಾ ಗಂಗೂಲಿ, ಪತ್ರಕರ್ತ ಸ್ವಪನ್​ ದಾಸ್​ಗುಪ್ತಾ, ಶ್ವೈತ್​ ಮಲ್ಲಿಕ್​(ಪಂಜಾಬ್​) ನಿವೃತ್ತರಾಗಲಿದ್ದಾರೆ.

ಬಿಜೆಪಿ ಸದಸ್ಯರೊಂದಿಗೆ, ಕಾಂಗ್ರೆಸ್‌ನ ಹಲವರು ರಾಜ್ಯಸಭೆ ಅವಧಿ ಪೂರ್ಣಗೊಳ್ಳಲಿದೆ. ಇದರಲ್ಲಿ ಆನಂದ್ ಶರ್ಮಾ, ಕಪಿಲ್ ಸಿಬಲ್, ಎ ಕೆ ಆಂಟನಿ ಮತ್ತು ಅಂಬಿಕಾ ಸೋನಿಯೂ ಅವರೊಂದಿಗೆ, ಪ್ರತಾಪ್​ ಸಿಂಗ್ ಬಾಜ್ವಾ (ಪಂಜಾಬ್​), ಶಮ್ಷೇರ್​ ಸಿಂಗ್ ಡುಲ್ಲೋ (ಪಂಜಾಬ್​) ರಿಪುನ್​ ಬೋರಾ (ಆಸ್ಸಾಂ) ಮತ್ತು ರನೀ ನಾರಹ್​ (ಆಸ್ಸಾಂ) ಸಹ ಇದ್ದಾರೆ. ಈ ನಾಯಕರು ಮತ್ತೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯೂ ಇಲ್ಲ ಎನ್ನಲಾಗುತ್ತಿದೆ.

ನಾಗ್ಪುರ ಪೀಪಲ್ಸ್​ ಫ್ರಂಟ್​ ಪಕ್ಷದ ಏಕೈಕ ರಾಜ್ಯಸಭಾ ಸದಸ್ಯ ಕೆ.ಜಿ. ಕೆನ್ಯೆ ಏಪ್ರಿಲ್‌ ನಲ್ಲಿ ನಿವೃತ್ತಿ ಹೊಂದಲಿದ್ದಾರೆ.  ಲೋಕತಾಂತ್ರಿಕ ಜನತಾ ದಳದ ಎಂ.ವಿ.ಶ್ರೇಯಮ್​​​ ಕುಮಾರ್​ (ಕೇರಳ), ಸುಖದೇವ್ ಸಿಂಗ್​ ಧಿಂಡ್ಸಾ, ನರೇಶ್​ ಗುರ್ಜಾಲ್​(ಶಿರೋಮಣಿ ಅಕಾಲಿ ದಳ-ಪಂಜಾಬ್​), ಕೇರಳದ ಕಮ್ಯೂನಿಸ್ಟ್ ಪಾರ್ಟಿಯ ಕೆ.ಸೋಮಪ್ರಸಾದ್​, ತ್ರಿಪುರದಿಂದ ಆಯ್ಕೆಯಾಗಿದ್ದ ಝರ್ನಾ ದಾಸ್​ ಬೈದ್ಯ ಅವರು ಒಳಗೊಂಡಿದ್ದಾರೆ.

ರಾಷ್ಟ್ರಪತಿಯವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಬಾಕ್ಸರ್​ ಮೇರಿಕೋಂ, ಆರ್ಥಿಕ ಶಾಸ್ತ್ರಜ್ಞ ನರೇಂದ್ರ ಜಾದವ್​  ಅವಧಿಯೂ ಏಪ್ರಿಲ್​ನಲ್ಲಿ ಕೊನೆಗೊಳ್ಳಲಿದೆ.

Donate Janashakthi Media

Leave a Reply

Your email address will not be published. Required fields are marked *