ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಗೆ 15 ಕಾರ್ಯಕ್ರಮಗಳು ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಚೊಚ್ಚಲ ಬಜೆಟ್ ನಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಅದರಂತೆ, ಹಾವೇರಿ ಜಿಲ್ಲೆಗೆ 15 ಹೊಸ ಕಾರ್ಯಕ್ರಮಗಳ ಘೋಷಣೆ ಮಾಡಲಾಗಿದೆ.

ಕೈಗಾರಿಕೆ. ಕೃಷಿ, ಶಿಕ್ಷಣ ಹೀಗೆ ಜಿಲ್ಲೆಯ ಪ್ರತಿಯೊಂದು ವಲಯದಲ್ಲಿಯೂ ಯೋಜನೆಗಳನ್ನು ಘೋಷಿಸಲಾಗಿದೆ.

– ಹಿರೇಕೆರೂರಿನಲ್ಲಿ ಗೋವಿನ ಜೋಳ ಸಂಶೋಧನಾ ಕೇಂದ್ರ

– ಹಾನಗಲ್ ನಲ್ಲಿ ಮಾವು ಸಂಸ್ಕರಣಾ ಘಟಕ

– ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ

– ಕಾಲೇಜುಗಳ ಮೇಲ್ವಿಚಾರಣೆ ಸುಧಾರಣೆಗೆ ಹಾವೇರಿ ಸೇರಿ ಏಳು ಜಿಲ್ಲೆಗಳಲ್ಲಿ ವಿನೂತನ ಮಾದರಿಯ ವಿವಿ ಸ್ಥಾಪನೆ

– ಹಾವೇರಿ ಸೇರಿ ನಾಲ್ಕು ಜಿಲ್ಲೆಗಳಲ್ಲಿ ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಹೆಸರಿನ ಸಂಚಾರಿ ಕ್ಲಿನಿಕ್

– ಶಿಗ್ಗಾಂವಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ 250 ಹಾಸಿಗೆಗಳಿಗೆ ಮೇಲ್ದರ್ಜೆಗೆ

– ಸವಣೂರು ತಾಲ್ಲೂಕಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ

– ಚರ್ಮ ಕುಶಲಕರ್ಮಿಗಳಿಗೆ ಹಾವೇರಿಯಲ್ಲಿ ಸಾಮಾನ್ಯ ಸೌಲಭ್ಯ ಸಮುಚ್ಛಯ ಸ್ಥಾಪನೆ

– ಶಿಗ್ಗಾಂವಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಏರೋಸ್ಪೇಸ್, ಇಂಜಿನಿಯರಿಂಗ್, ಇಂಡಸ್ಟ್ರಿಯಲ್ ಆಟೋಮೇಷನ್, ಎಲೆಕ್ಟ್ರಾನಿಕ್ ಕ್ಷೇತ್ರಗಳ ತರಬೇತುದಾರರಿಗೆ ತರಬೇತಿ ಕೇಂದ್ರ

– ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರುಗಳಿಗೆ ಹೊಸ ರೈಲು ಮಾರ್ಗ ಯೋಜನೆ

– ಹಾವೇರಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಉತ್ತೇಜನ

– ರಾಣೆಬೆನ್ನೂರಿನಲ್ಲಿ ನೂತನ‌ ಜವಳಿ ಪಾರ್ಕ್

– ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ. 20 ಕೋಟಿ ರೂ ನಿಗದಿ

– ಹಾವೇರಿಯಲ್ಲಿ ಡಾ.ಮಹಾದೇವ ಬಣಕಾರರ ಸಾಂಸ್ಕೃತಿಕ ಭವನ, 2 ಕೋಟಿ ರೂ.

– ಶಿಗ್ಗಾಂವಿಯಲ್ಲಿ ಬಸ್ ಘಟಕ ಮತ್ತು ಚಾಲನಾ ತರಬೇತಿ ಕೇಂದ್ರ, 28 ಕೋಟಿ ರೂ.

Donate Janashakthi Media

Leave a Reply

Your email address will not be published. Required fields are marked *