ಎಂಎಸ್‌ಪಿ ಕುರಿತು ಬಿಜೆಪಿ ಸರಕಾರ ರೈತರ ದಾರಿ ತಪ್ಪಿಸುತ್ತಿದೆ : ಹನ್ನನ್‌ ಮೊಲ್ಲಾ

ಕೋಲ್ಕತ್ತಾ : ದೇಶದ ರೈತ ಸಮುದಾಯದ ಮೇಲೆ ಧಾಳಿ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರಕಾರವು, ಪ್ರಧಾನಿ ನರೇಂದ್ರಮೋದಿ ಅವರು ಕೃಷಿ ಉತ್ನ್ನಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ರೈತರ ದಾರಿ ತಪ್ಪಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯೂರೋ ಸದಸ್ಯರಾದ ಹನ್ನನ್‌ ಮೊಲ್ಲಾ ತಿಳಿಸಿದರು.

ರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ 40ಕ್ಕೂ ಹೆಚ್ಚಿನ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ) ನೇತೃತ್ವದಲ್ಲಿ ಇಂದು ಕೋಲ್ಕತ್ತಾದ ಭವಾನಿಪೋರ್‌ ಮತ್ತು ನಂದಿಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಮಟ್ಟದ ಕಿಸಾನ್‌ ಮಹಾಪಂಚಾಯತ್‌ ಪ್ರತಿಭಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರದ ಬಿಜೆಪಿ ಸರಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಬಿಜೆಪಿಗೆ ಕೃಷಿಕರು ಮತ್ತು ಪಶ್ಚಿಮ ಬಂಗಾಳದ ಜನತೆ ಮತ ನೀಡಬಾರದೆಂದು ಎಸ್‌ಕೆಎಂ ಕರೆ ನೀಡಿದೆ.

ಇದನ್ನೂ ಓದಿ : ‘ನೀವು ರೈತರಿಗಾಗಿ ನೀಡುತ್ತಿರುವ ಮೂರು ಕೃಷಿ ಕಾಯ್ದೆಯ ಗಿಫ್ಟ್ ನಮಗೆ ಬೇಕಿಲ್ಲ. ಅದನ್ನು ನೀವು ಇಟ್ಟುಕೊಳ್ಳಿ’ ‌ಮೋದಿಜಿ – ಯೋಗೇಂದ್ರ ಯಾದವ್

ಎಸ್‌ಕೆಎಂನ ಮತ್ತೊಬ್ಬ ಮುಖಂಡರಾದ ಯೋಗೇಂದ್ರ ಯಾದವ್‌ ಮಾತನಾಡಿ ʻʻನಾವು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ ಅಥವಾ ಯಾರಿಗೆ ಮತ ಚಲಾಯಿಸಬೇಕೆಂದು ಜನರಿಗೆ ಹೇಳುತ್ತಿಲ್ಲ. ಬಿಜೆಪಿಗೆ ಪಾಠ ಕಲಿಸಬೇಕೆಂಬುದು ನಮ್ಮ ಏಕೈಕ ಗುರಿಯಾಗಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೆ ಮಾತ್ರ ಕೃಷಿ ಕಾನೂನುಗಳ ರದ್ದತಿಗಾಗಿ ಹೋರಾಟದ ತೀವ್ರತೆಯನ್ನು ಬಿಂಬಿಸುತ್ತದೆ ಎಂದು ಸಂಘಟನೆಯಲ್ಲಿ ಭಾಗವಹಿಸಿದ ರೈತ ಮುಖಂಡರು ತಿಳಿಸಿದರು.

ಸಿಂಗೂರ್‌ ಮತ್ತು ಅಸನ್‌ ಸೋಲ್‌ ನಲ್ಲಿ ನಾಳೆ ನಡೆಯಲಿರುವ ಕಿಸಾನ್‌ ಮಹಾಪಂಚಾಯತ್‌ ನಲ್ಲಿ ರೈತ ಮುಖಂಡರಾದ ರಾಕೇಶ್‌ ಸಿಂಗ್ ಟಿಕಾಯತ್‌ ಮತ್ತು ಯುದ್ವೀರ್‌ ಭಾಗವಹಿಸಿದ್ದಾರೆ.

ಇದನ್ನೂ ಓದಿ : ನರೇಂದ್ರ ಮೋದಿ ಸರ್ವಜ್ಞರೇನಲ್ಲ ಎಂದು ತೋರಿಸುತ್ತಿದೆ ರೈತರ ಹೋರಾಟ

ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ʻʻಬಿಜೆಪಿ ಪಕ್ಷವು ಕೆಲವೇ ಕೆಲವು ಕಾರ್ಪೋರೇಟ್‌ ಸಂಸ್ಥೆಗಳಿಗೆ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಕಾರ್ಪೋರೇಟ್‌ ಸಂಸ್ಥೆಗಳು ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯಾಗಿ ಭಾರೀ ಮೊತ್ತದ ಹಣ ನೀಡುತ್ತಿದೆ. ಉದ್ಯಮಿಗಳ ಸಂಪತ್ತು ಹೆಚ್ಚುತ್ತಿರುವಾಗ, ಅಪೌಷ್ಟಿಕತೆಯಿಂದ ಬಡ ಮಕ್ಕಳು ಸಾಯುತ್ತಿದ್ದಾರೆ. ಜನತೆ ತಮ್ಮ ಮತವನ್ನು ಎಚ್ಚರಿಕೆಯಿಂದ ಚಲಾಯಿಸಬೇಕುʼʼ ಕರೆ ನೀಡಿದರು.

ಕೇಂದ್ರ ಸರಕಾರದ ಕಿವಿಗಳು ಮಂದಗೊಂಡಿದ್ದು ಚುನಾವಣೆಯಲ್ಲಿ ಸೋಲಿಸುವ ಮೂಲಕ ಆಂದೋಲನ ನಡೆಯುತ್ತಿರುವ ರೈತರ ಬೇಡಿಕೆಗಳಿಗೆ ಸರಕಾರ ಕಿವಿಕೊಡಬೇಕೆಂದು ಮಹಾ ಪಂಚಾಯತ್‌ನಲ್ಲಿ ಎಸ್‌ಕೆಎಂ ನಿರ್ಣಯ ಕೈಗೊಂಡಿತು.

Donate Janashakthi Media

Leave a Reply

Your email address will not be published. Required fields are marked *