ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದರು. ಯಾವುದೇ ಜಾತಿ ಧರ್ಮಗಳ ತಾರತಮ್ಯ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿದ್ದು ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಹೇಳಿದರು. ಸಚಿವ ಸಂಪುಟದಲ್ಲಿ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮತನಾಡಿದ್ದು, ಸಂಪೂರ್ಣ ವಿವರ ಇಲ್ಲಿದೆ.
ಗೃಹಜ್ಯೋತಿ : 200 ಯುನಿಟ್ವರೆಗು ಉಚಿತ ವಿದ್ಯುತ್ಗೃ ಹಜ್ಯೋತಿ ಯೋಜನೆ ಅಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್ ಒಳಗಡೆ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಳೆ ಶೇ 10 ರಷ್ಟು ವಿದ್ಯುತ್ ಉಚಿತ, 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿದ್ದು ಈ ಹಿಂದಿನ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು. ಉಚಿತ ವಿದ್ಯುತ್ ಯೋಜನೆ ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ.
ಉಚಿತ ಬಸ್ ಪ್ರಯಾಣ: ಜೂ. 11ರಿಂದ ಎಲ್ಲಾ ಮಹಿಳೆಯರಿಗೆ, ಅಂತಸ್ತಿನ ಬೇಧಭಾವವಿಲ್ಲದೆ, ಮಹಿಳಾ ವಿದ್ಯಾರ್ಥಿನಿಯರು ಸೇರಿ ಎಲ್ಲರಿಗೂ ಬಸ್ಸುಗಳಲ್ಲಿ ಉಚಿತ ಪ್ರಯಾಣ. ಎಸಿ ಬಸ್ಸುಗಳನ್ನು, ಎಸಿ ಸ್ಲೀಪರ್ ಬಸ್ಸುಗಳನ್ನು ಬಿಟ್ಟು ಉಳಿದ ಎಲ್ಲಾ ಬಸ್ಸುಗಳಲ್ಲಿ ಉಚಿತ ಪ್ರಯಾಣ. ಹೊರರಾಜ್ಯಗಳಿಗೆ ಹೋಗುವ ಬಸ್ಸುಗಳಲ್ಲಿ ಪ್ರಯಾಣವಿಲ್ಲ. ರಾಜಹಂಸ ಬಸ್ಸುಗಳಲ್ಲಿಯೂ ಉಚಿತ ಪ್ರಯಾಣ. ಬಿಎಂಟಿಸಿಯಲ್ಲಿಯೂ ಇದೇ ಅನ್ವಯ. ಕೆಎಸ್ ಆರ್ ಟಿಸಿ ಬಸ್ ಗಳ ಆಸನಗಳಲ್ಲಿ ಶೇ. 50ರಷ್ಟು ಸೀಟುಗಳು ಪುರುಷರಿಗೆ ಮೀಸಲು.
ಅನ್ನಭಾಗ್ಯ ಯೋಜನೆ : ಮೂರನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಘೋಷಣೆ ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಮಾಸಿಕ 10 ಕೆಜಿ ಅಕ್ಕಿಯನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಗೃಹಲಕ್ಷ್ಮಿ ಯೋಜನೆ : ಗೃಹಲಕ್ಷ್ಮಿ ಯೋಜನೆಗಾಗಿ ಜೂ. 15ರಿಂದ ಜು. 15ರವರೆಗೆ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರು ಅರ್ಜಿಯನ್ನು ಕೊಡಬೇಕು. ವಿಳಾಸ ದಾಖಲೆ, ಬ್ಯಾಂಕ್ ಖಾತೆ ದಾಖಲೆ, ಆಧಾರ್ ಕಾರ್ಡ್ ಗಳನ್ನು ದಾಖಲೆಗಳ ರೂಪವಾಗಿ ಕೊಡಬೇಕು. ಇದು ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಇದು ಅನ್ವಯ. ಮನೆಯವರೇ ಮನೆಯೊಡತಿ ಯಾರು ಎಂಬುದನ್ನು ನಿರ್ಧರಿಸಿ ಅರ್ಜಿ ಸಲ್ಲಿಸಬೇಕು. ಆ. 15ರಂದು ಅವರ ಖಾತೆಗೆ 2,000 ರೂ. ಜಮೆ. ವಿಧವಾ ಪೆನ್ಷನ್, ವಿಕಲಚೇತನರ ಪೆನ್ಷನ್, ವೃದ್ಧಾಪ್ಯದ ಪಿಂಚಣಿ ಇದ್ದರೂ ಅವರಿಗೂ ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕವಾಗಿ 2,000 ರೂ. ನೀಡಲು ನಿರ್ಧಾರ.
ಯುವ ನಿಧಿ: ಯುವನಿಧಿ ಜಾರಿ, ಪಧವಿದದರಿಗೆ 3 ಸಾವಿರ, ಡಿಪ್ಲೊಮಾದವರಿಗೆ 1.500 ಸಾವಿರ ಯುವನಿಧಿ ಯೋಜನೆ ಅಡಿ ಎಲ್ಲ ಪದವಿ ಪಡೆದ ನಂತರ ನೋಂದಾಯಿಸಿಕೊಂಡವರಿಗೆ ಪ್ರತಿ ತಿಂಗಳು ಪಧವಿದರರಿಗೆ 3 ಸಾವಿರ,ಡಿಪ್ಲೋಮಾದವರಿಗೆ 1,500 ಸಾವಿರ 24 ತಿಂಗಳು ನೀಡುತ್ತೇವೆ. ಆದರೆ ಇದರ ಒಳಗೆ ಯಾರಾದರೂ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ಸೇರಿದರೇ ಅವರಿಗೆ ನೀಡುವುದಿಲ್ಲ. ಇವರು ನಿರುದ್ಯೋಗಿಗಳು ಎಂದು ಘೋಷಿಸಿಕೊಂಡಿರಬೇಕು. ಮತ್ತು ಇದಕ್ಕೆ ಅರ್ಜಿಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿದ್ಯಾನಿಧಿಗಾಗಿ 6 ತಿಂಗಳವರೆಗೆ ಅರ್ಜಿ ಆಹ್ವಾನ.