ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಿಂದ ಸೋಲನ್ನುಂಡಿರುವ ಬಿಜೆಪಿ ಅಭ್ಯರ್ಥಿ ಎಸ್.ಕುಮಾರ ಬಂಗಾರಪ್ಪ ಮತ್ತೆ ಇದೀಗ ಸುದ್ದಿಕೇಂದ್ರದಲ್ಲಿದ್ದಾರೆ. ಅದಕ್ಕೆ ಮುಖ್ಯ ಕಾರಣ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ. ಲೋಕಸಭಾ
ಹೌದು ಕುಮಾರ ಬಂಗಾರಪ್ಪ, ಸೊರಬದ ಸೋಲಿನಿಂದ ರಾಜಕೀಯದಿಂದಲೇ ಮುಖ ಮಾಡಿದಂತೆ ಕಂಡು ಬಂದಿದ್ದರೂ, ಒಳಗೊಳಗೆ ಮನಸು ರಾಜಕಾರಣದತ್ತಲೇ ಇತ್ತು. ವಿಧಾನಸಭಾ ಕ್ಷೇತ್ರದ ಸೋಲಾದ ಬಳಿಕ ಅದರಲ್ಲಿಯೂ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕವಂತೂ ರಾಜಕಾರಣದ ದಿಕ್ಸೂಚಿಯೇ ಬದಲಾಯಿತು. ಹೀಗೆ ಈಡಿಗ ಸಮುದಾಯಕ್ಕೆ ಸೇರಿದ ಕುಮಾರ ಬಂಗಾರಪ್ಪ, ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡುತ್ತಾರೆ ಎಂಬ ಸುದ್ದಿಗಳೂ ತೇಲಿ ಬಂದಿದ್ದವು.
ಕುಮಾರ ಬಂಗಾರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಎಂದು ಕೆಲವೆಡೆ ಸುದ್ದಿ ಕೇಳಿ ಬಂದಿತ್ತಾದರೂ ಅದು ಯಾವ ಪಕ್ಷದಿಂದ ಎನ್ನುವುದೂ ಗೊತ್ತಿರಲಿಲ್ಲ. ಅವರ ಸಹೋದರಿಯೇ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದಂತೆ ಅಲ್ಲಿನ ರಾಜಕಾರಣವೇ ಬದಲಾಯಿತು. ಕುಮಾರ ಬಂಗಾರಪ್ಪ ಕಾಂಗ್ರೆಸ್‌ನಿಂದ ಟಿಕೇಟ್ ಕೇಳಿದ್ದಾರಂತೆ ಎನ್ನುವುದೂ ಇತ್ತು. ಅದೂ ಊಹಾಪೋಹವೋ ಗೊತ್ತಿಲ್ಲ. ಈಗ ಮತ್ತೆ ಕುಮಾರ ಬಂಗಾರಪ್ಪ ಮುನ್ನಲೆಗೆ ಬಂದಿದ್ದಾರೆ.
ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ʻಜೇಮ್ಸ್ʼ ಎತ್ತಂಗಡಿ: ಮುಖ್ಯಮಂತ್ರಿ ಭೇಟಿಯಾದ ನಟ ಶಿವರಾಜಕುಮಾರ್
ಇತ್ತೀಚಿನ ಸಾಲುಸಾಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕ ಸುದ್ದಿಕೇಂದ್ರಕ್ಕೆ ಬಂದಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಒಂದು ಕಡೆ ಪಕ್ಷದ ಕಡೆಯಿಂದಲೂ ಮತ್ತು ಸಂವಿಧಾನದ ವಿರೋಧವಾಗಿ ಹೇಳಿಕೆ ನೀಡಿದ್ದಕ್ಕಾಗಿಯೋ ವಿರೋಧ ವ್ಯಕ್ತವಾಗಿದ್ದು, ಬಿಜೆಪಿಯಿಂದ ಟಿಕೇಟ್ ಸಿಗುವುದು ಅನುಮಾನವೆನ್ನಲಾಗಿದೆ. ಹೀಗಾಗಿ ಈ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಕುಮಾರ ಬಂಗಾರಪ್ಪರ ಹೆಸರು ಕೇಳಿಬರುತ್ತಿದೆ. ಇದಕ್ಕೆ ಕಾರಣ ಅವರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅಲ್ಲಿ ಬಹುತೇಕ ಇದೇ ಸಮುದಾಯಕ್ಕೆ ಸೇರಿದ ಪೂಜಾರಿ, ಸುವರ್ಣ, ಕೋಟ್ಯಾನ್, ನಾಮಧಾರಿ, ಕರ್ಕೇರಾ ಸಮುದಾಯಗಳು ನಿರ್ಣಾಯಕ ಮತಗಳಾಗಿವೆ. ಇವು ಈಡಿಗ ಸಮುದಾಯಕ್ಕೆ ಸೇರಿದ ಮತಗಳು ಆಗಿವೆ. ಹೀಗಾಗಿ ಇದೇ ಸಮುದಾಯಕ್ಕೆ ಸೇರಿರುವ ಕುಮಾರ ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಲಾಗುತ್ತಿದೆ.