ಮೊದಲ ಹಂತದ ಮತದಾನ: ಶೇ. 68 ರಷ್ಟು ಮಣಿಪುರದಲ್ಲಿ ಹೆಚ್ಚು, ಬಿಹಾರದಲ್ಲಿ ಶೇ.47 ರಷ್ಟು ಕಡಿಮೆ

ನವದೆಹಲಿ: ಲೋಕಸಭಾ ಚುನಾವಣೆಗೆ ೭ ಹಂತಗಳಲ್ಲಿ ಮತದಾನ ಘೋಷಣೆಯಾಗಿದ್ದು, ಶುಕ್ರವಾರ ಏಪ್ರಿಲ್‌ 19 ರಂದು ಮೊದಲ ಹಂತದ ಮತದಾನ ಮುಗಿದಿದ್ದು, 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 60% ರಷ್ಟು ಮತದಾನವಾಗಿದೆ. ಇನ್ನು ಗಲಭೆ ಪೀಡಿತ ಮಣಿಪುರದಲ್ಲಿ ಶೇ.68, ಬಿಹಾರದಲ್ಲಿ ಅತಿಕಡಿಮೆ ಎಂದರೆ ಶೇ.47 ರಷ್ಟು ಮತದಾನವಾಗಿದೆ.

18ನೇ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇ.60ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದ 3 ಸೀಟಿಗೆ ಅತ್ಯಧಿಕ ಶೇ.78, ಹಿಂಸಾಪೀಡಿತ ಮಣಿಪುರ 2 ಸೀಟಿಗೆ ಶೇ.68 ರಷ್ಟು ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ನಕ್ಸಲ್‌ಬಾಧಿತ ಛತ್ತೀಸ್‌ಗಢದ ಬಸ್ತರ್‌ನಲ್ಲಿ ಶೇ.64 ಜನ ಮತ ಚಲಾವಣೆ ಆಗಿದ್ದು, ಬಿಹಾರದ 4 ಸೀಟುಗಳಿಗೆ ಎಂದಿನಂತೆ ಅತೀ ಕಡಿಮೆ ಶೇ.47ರಷ್ಟು ಮತದಾನವಾಗಿದೆ.

ಇನ್ನು 18 ರಾಜ್ಯಗಳಲ್ಲಿ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲ್ಲಿನ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನವಾಗಿದ್ದು, ತಮಿಳುನಾಡಿನ ಎಲ್ಲಾ39 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿಚುನಾವಣೆ ಆಗಿದ್ದು, , ಮೊದಲ ಹಂತದಲ್ಲಿ ಶೇ.62 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೇ ಎಂಟು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಒಬ್ಬರು ಮಾಜಿ ರಾಜ್ಯಪಾಲರು ಸೇರಿ ಕಣದಲ್ಲಿದ್ದ 1,600 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ತಮಿಳುನಾಡಿನ ದಿಂಡಿಗಲ್‌ನಲ್ಲಿ102 ವರ್ಷದ ಚಿನ್ನಮ್ಮ ಎಂಬ ವೃದ್ಧೆ ಮತದಾನ ಮಾಡಿ ಗಮನ ಸೆಳೆದರು.

ಉಳಿದಂತೆ ರಾಜಸ್ಥಾನ (12) ದಲ್ಲಿಶೇ.68, ಅಸ್ಸಾ (5) 71, ಮಹಾರಾಷ್ಟ್ರ (5) 55, ಉತ್ತರ ಪ್ರದೇಶ (8) 55, ಉತ್ತರಾಖಂಡ (5) 54, ತ್ರಿಪುರಾ (1) 77, ಸಿಕ್ಕಿಂ (1) 68, ಮಧ್ಯಪ್ರದೇಶ (6) 64, ಛತ್ತೀಸ್‌ಗಢ (1) 64, ಜಮ್ಮು ಮತ್ತು ಕಾಶ್ಮೀರ (1) 65, ಅರುಣಾಚಲಪ್ರದೇಶ (2) 64, ಮೇಘಾಲಯ (2) 70, ಮಿಜೋರಾಂ (1) 56, ಲಕ್ಷದ್ವೀಪ (1) 59, ಅಂಡಮಾನ್‌ ಮತ್ತು ನಿಕೋಬಾರ್‌ (1) 57, ನಾಗಾಲ್ಯಾಂಡ್‌ (1) 53, ಪುದುಚೆರಿ (1) ಯಲ್ಲಿಶೇ. 73 ರಷ್ಟು ಮತದಾನವಾಗಿದೆ. ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿಮತದಾನ ಬಹಿಷ್ಕಾರ ಹಾಕಿದ್ದು, ಛತ್ತೀಸ್‌ಗಢದಲ್ಲಿಆಕಸ್ಮಿಕ ಸ್ಫೋಟ, ಯೋಧ ಸಾವು, ಮಣಿಪುರದಲ್ಲಿಮತದಾನದ ವೇಳೆ ಹಿಂಸೆ, ಬಿಜೆಪಿ-ಟಿಎಂಸಿ ಘರ್ಷಣೆಯ ಅಹಿತಕರ ಘಟನೆಗಳು ಮೊದಲ ಹಂತದ ಮತದಾನದ ವೇಳೆ ಕಂಡುಬಂದ ಬಗ್ಗೆ ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *