ಶಿವಮೊಗ್ಗ: ಸಂಸದ ಬಿ.ವೈ ರಾಘವೇಂದ್ರ ಅವರ ಬ್ಯಾಂಕ್ ಖಾತೆಗೆ ಆನ್‌ಲೈನ್ ವಂಚಕರು ಕನ್ನ ಹಾಕಿದ್ದು, ಬರೋಬ್ಬರಿ ರೂ.16 ಲಕ್ಷ ಮೊತ್ತವನ್ನು ಲಪಟಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಗ್ರಾಹಕರು ಕೂಡ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಬ್ಯಾಂಕ್ ನಲ್ಲಿ ಖಾತೆ ಹೊಂದಿರುವಂತ ಪ್ರತಿಯೊಬ್ಬರು ಆನ್‌ಲೈನ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಒಟಿಪಿ ನಂಬರ್ ಬಗ್ಗೆ ಯಾರಾದರೂ ಮಾಹಿತಿ ಕೇಳಿದರೇ ಕೊಡಲೇ ಬಾರದು. ಈಗ ವಾಟ್ಸಾಪ್ ಮೂಲಕವೂ ಒಟಿಪಿ ಕೇಳುತ್ತಿದ್ದಾರೆ. ಯಾರೂ ಕೊಡಬಾರದು ಎಂದರು.
ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ಹೊಂದಿರುವ ಖಾತೆಯಿಂದ 16 ಲಕ್ಷ ಹಣ ದಿಢೀರ್ ವರ್ಗಾವಣೆಗೊಂಡಿತ್ತು. ಹೀಗೆ ವರ್ಗಾವಣೆಗೊಂಡ ಹಣ ನಾನು ಮಾಡಿದ್ದಲ್ಲ. ಈ ಸಂಬಂಧ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದೇನೆ. ತನಿಖೆ ನಡೆಸಲಾಗುತ್ತಿದ್ದು, ಮುಂಬೈನಲ್ಲಿ ನನ್ನ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಹ್ಯಾಕರ್ ಒಬ್ಬರನ್ನು ಪತ್ತೆ ಹಚ್ಚಿ, ಬಂಧಿಸಿದರು. ಆ ಬಳಿಕ ಮರಳಿ ಹಣ ಜಮೆಗೊಂಡಿತು ಎಂದು ಹೇಳಿದರು.