ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನ ವಿದ್ಯಾಭ್ಯಾಸಕ್ಕೆ ಲ್ಯಾಪ್ ಟಾಪ್ ಕೊಡಿಸಿದ ತಾಯಿ

ಗ್ಯಾರಂಟಿ ಯೋಜನೆಯಿಂದ ಹೆಚ್ಚು ಅನುಕೂಲ| ಸಿಎಂ ಸಿದ್ದರಾಮಯ್ಯನವರನ್ನು ಸ್ಮರಿಸಿದ ಮಹಿಳೆ

ವರದಿ : ಸಿ. ಮಹಾಂತೇಶ್‌
ಯಲಬುರ್ಗಾ: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ  ʻಗೃಹಲಕ್ಷ್ಮಿ ಯೋಜನೆʼಯ ಹಣವನ್ನು ಕೂಡಿಟ್ಟು ಮಗನಿಗೆ ಲ್ಯಾಪ್‌ಟಾಪ್ ಕೊಡಿಸಿ ಮಗನ ಶಿಕ್ಷಣಕ್ಕೆ ತಾಯಿ ನೆರವಾಗಿರುವ ಘಟನೆ ಯಲಬುರ್ಗಾ ತಾಲೂಕಿನಲ್ಲಿ ನಡೆದಿದೆ.

ಇತ್ತೀಚೆಗೆ ಗೃಹಲಕ್ಷ್ಮೀ  ಯೋಜನೆಯಿಂದ ಬಂದ ಹಣದಿಂದ ಬೋರ್ ವೆಲ್ ಕೊರೆಸಿರುವುದು, ಚಿನ್ನಾಭರಣ ಖರೀದಿ, ಸಾರ್ವಜನಿಕರಿಗೆ ಹೋಳಿಗೆ ಊಟ ಹಾಕಿರುವ ಬಗ್ಗೆ ವರದಿಗಳಾಗಿವೆ. ಅದರಂತೆ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದ ಮಹಿಳೆ ಶಾರದಾ ಮುತ್ತಣ್ಣ ಪೊಲೀಸ್ ಪಾಟೀಲ ಎನ್ನುವವರು  15 ಕಂತಿನ ಹಣ ಕೂಡಿಟ್ಟು ಸುಮಾರು 30 ಸಾವಿರ ರೂಪಾಯಿ ವೆಚ್ಚದಲ್ಲಿ ಲ್ಯಾಪ್‌ಟಾಪ್ ನ್ನು ಕೊಡಿಸಿದ್ದಾರೆ.

ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದಾನೆ. ಮಗನಿಗೆ ಯೋಜನೆಯ ಹಣದಿಂದ ಲ್ಯಾಪ್‌ಟಾಪ್ ಕೊಡಿಸಿದ ಶಾರದಾ ಅವರೆ ನಡೆಗೆ ಕುಟುಂಬ ಹಾಗೂ ಗ್ರಾಮ ಅವರನ್ನು ಕೊಂಡಾಡುತ್ತಿದೆ.  ಗೃಹಲಕ್ಷ್ಮಿ ಯೋಜನೆ ಬಡವರ ನೆರವಿಗೆ ಹೆಚ್ಚು ಅನುಕೂಲ ಆಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ರೈತ ಚಳುವಳಿ ಭಿನ್ನ ಆಯಾಮಗಳು – ಭಾಗ 2

ನನ್ನ ಶಿಕ್ಷಣಕ್ಕೆ ಲ್ಯಾಪ್‌ಟಾಪ್‌ ಅಗತ್ಯವಿತ್ತು. ನಾನು ಬೇರೆಯವರ ಲ್ಯಾಪ್‌ಟ್ಯಾಪ್‌ನ ಸಹಾಯ ಪಡೆಯುತ್ತಿದ್ದನ್ನು ಗಮನಿಸಿದ ನನ್ನ ತಾಯಿ ʻಭಾಗ್ಯಲಕ್ಷ್ಮೀ ಯೋಜನೆಯʼ ಹಣದಲ್ಲಿ ನನಗೆ ಲ್ಯಾಪ್‌ಟಾಪ್‌ ಕೊಡಿಸಿರುವುದಕ್ಕು ತುಂಬಾ ಖುಷಿಯಾಗಿದೆ. ಇದರಿಂದ ನನ್ನ ವಿದ್ಯಾಭ್ಯಾಸಕ್ಕೆ ಹೆಚ್ಚು ಸಹಕಾರಿಯಾಗಿದೆ ಎಂದು ವಿದ್ಯಾರ್ಥಿ ಶರಣುಬಸವ ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯಿಸಿದ್ದಾರೆ.

‘ಬಡವರ ಬದುಕಿಗೆ ಗ್ಯಾರಂಟಿ ದಾರಿದೀಪ’

ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳನ್ನು ತಂದಿದ್ದರಿಂದ ನಡವರ ಬದುಕಿಗೆ ದಾರಿಯಾಗಿದೆ. ನಾವು ತುಂಬಾ ಆರ್ಥಿಕ ಸಂಕಷ್ಟದಲ್ಲಿ ಇದ್ದರಿಂದ ಈ ಯೋಜನೆ ಹೆಚ್ಚು ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.  ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಮಗನಿಗೆ ಲ್ಯಾಪ್‌ಟಾಪ್ ಕೊಡಿಸಿರುವುದಕ್ಕೆ ಹೆಮ್ಮೆ ಅನಿಸುತ್ತದೆ ಎಂದು ಶಾರದ ಪ್ರತಿಕ್ರಿಯಿಸಿದ್ದಾರೆ.
-ಶಾರದಾ ಮುತ್ತಣ್ಣ ಪೊಲೀಸ್ ಪಾಟೀಲ, ಗೃಹಿಣಿ.

‘ಗೃಹಲಕ್ಷ್ಮೀ ಯೋಜನೆ ಒಳ್ಳೆಯ ಕೆಲಸ ಉಪಯೋಗ’

ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನಿಗೆ ಲ್ಯಾಪ್ ಟಾಪ್ ಕೊಡಿಸಿರುವುದು ಸಂತಸದ ವಿಷಯ. ಸಿಎಂ ಸಿದ್ದರಾಮಯ್ಯನವರ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಆಶೋತ್ತರಗಳಿಗೆ ಹೆಚ್ಚು ಸಹಕಾರಿಯಾಗಿದೆ. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ಆರ್ಥಿಕ ಸ್ವಾವಲಂಬಿ ಜೀವನ ನಡೆಸಲು ಪೂರಕವಾಗಿದೆ.

ಯಲಬುರ್ಗಾ ಕ್ಷೇತ್ರದಲ್ಲಿ ಶೇ.98 ರಷ್ಟು ಐದು ಯೋಜನೆಗಳ ಲಾಭವನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಇಂತಹ ಕೆಲಸವನ್ನು ಯಾವ ಸರ್ಕಾರಗಳು ಮಾಡಿಲ್ಲ.‌ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ ಕೊರ್ಲಳ್ಳಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಸವಿತಕ್ಕ ಜೊತೆ ಸಂಕ್ರಾಂತಿ ಸುಗ್ಗಿ ಹಾಡು, ಒಂದಿಷ್ಟು ಮಾತುJanashakthi Media

Donate Janashakthi Media

Leave a Reply

Your email address will not be published. Required fields are marked *