– ಆದಿತ್ಯ
ಅ ಆ ಕಾರಗಳ ಕಲಿಸಿದ
ಅವ್ವ, ಅನಂತ
ಕತ್ತಲೆಯ ಗೋಡೆಯೊಡೆದು
ಬಾಗಿಲ ನೆಟ್ಟೆ.
ಹುಳುಗಳೆದ್ದ ಹಾದಿಯಲೂ
ಹೆಜ್ಜೆಯಿಟ್ಟೆ.
ಕಲ್ಲೆಸೆದವರ ಕಣ್ಣಿಗೂ
ಬೆಳಕ ಕೊಟ್ಟು
ಅಕ್ಷರ ಹಂಚಿ
ಮುಚ್ಚಿದೆ ಗಾಯವ
ತಂದ ಜೋಡಿ ಬಟ್ಟೆಯಲಿ
ಇದನ್ನೂ ಓದಿ: ಪಾಠ ಕೇಳುತ್ತಿದ್ದ ಮಕ್ಕಳನ್ನು ಹೊರಗೆ ಕಳುಹಿಸಿ ಶಾಲೆ ತೆರವುಗೊಳಿಸಿದ ದಾವಣಗೆರೆ ಪಾಲಿಕೆ ಸಿಬ್ಬಂದಿ
ಮಣ್ಣು, ನಿಂದೆ, ರಕ್ತ , ಇವನೇ
ಆತ್ಮದ ಕಿಡಿಯಾಗಿಸಿ ಹೊಳೆದೆ
ಸಾತ್ವಿಕ ತೇಜದಿ..
ಅವ್ವ, ನಿನ್ನ ಕಣ್ಣುಗಳು
ಬಂಡಾಯವಲ್ಲ
ದಯೆಯ, ಆಶಾವಾದದ ಹಣತೆ
ಜಗ ಮರೆತರೂ
ದಾರಿ ಧೂಳಾಗದಂತೆ
ನಡೆಯುತ್ತಲೇ ಇರುವ ನಿರಂತರತೆ ನೀನು..
ದಾರಿ ದೀರ್ಘವಾಗಲಿ.. ಕಲಿಯಬೇಕಾದ ಕುಡಿಗಳು ತುಂಬಲಿ ದಾರಿಪೂರ..
ಇದನ್ನೂ ನೋಡಿ: ಕುವೆಂಪು ಜನ್ಮ ದಿನ | ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ – ಓದು : ಎಚ್.ವಿ. ನಟರಾಜ Janashakthi Media
