ಮೊಸಳೆ ಕಣ್ಣೀರು, ಫೇಕ್ ಟೂಲ್‍ಕಿಟ್ ಮಾತುಗಳ ನಡುವೆ ಮರೆಯಾದ ‘ಟೀಕಾ ಉತ್ಸವ್’

ವೇದರಾಜ ಎನ್‌.ಕೆ

ಮೇ 21ರಂದು ಉತ್ತರಪ್ರದೇಶದ ಕಾಶಿಯಲ್ಲಿ ಕೋವಿಡ್‍ ಸನ್ನಿವೇಶವನ್ನು ಪರಾಮರ್ಶಿಸುತ್ತ ಪ್ರಧಾನ ಮಂತ್ರಿಗಳು ಗದ್ಗದಿತರಾದರು ಎಂಬ ಸುದ್ದಿ ಮುಖ್ಯಧಾರೆಯ ಮಾಧ್ಯಮಗಳಲ್ಲಿ ಹರಿದಾಡಿತು. ಜತೆಗೇ ದೈನಂದಿನ ಸೋಂಕಿತರ ಅಧಿಕೃತ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಸಾವುಗಳ ಸಂಖ್ಯೆ ಏರುತ್ತಲೇ, 4000ದ ಆಚೆಗೇ ಇರುವ ಸುದ್ದಿ ಕೂಡ. ಮತ್ತು ಗಂಗಾನದಿ ‘ಶವವಾಹಿನಿ’ಯಾಗುತ್ತಿರುವ ಬಗ್ಗೆ ಆತಂಕಗಳು ಕೂಡ.

……ಮತ್ತು ಕರುಣಾರಸವೂ ಸೇರಿದಂತೆ ಎಲ್ಲ ‘ರಸ’ಗಳೂ ಕೊನೆಗೆ ಹಾಸ್ಯರಸ’ವಾಗಿ ಬಿಡುವ ದುರಂತ ಕೂಡ.

***

“ಕೊರೊನಾ ನಮ್ಮ ಹಲವಾರು ಪ್ರೀತಿಪಾತ್ರರನ್ನು ನಮ್ಮಿಂದ ಕಿತ್ತುಕೊಂಡಿದೆ. ನಾನು ಆ ಎಲ್ಲ ಜನಗಳಿಗೆ ನನ್ನ ಗೌರವ ಸಲ್ಲಿಸುತ್ತೇನೆ, ಅವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ” ಎನ್ನುವಾಗ ಪ್ರಧಾನಿಗಳ ಗಂಟಲು ಕಟ್ಟಿ ಬಂದುದನ್ನು ಟಿವಿಗಳಲ್ಲಿ ನೋಡಿದಾಗ ಆ ಕುಟುಂಬಗಳಿಗೆ ಏನನಿಸಿರಬಹುದು-ಸಕಾರಾತ್ಮಕತೆ ಮತ್ತು ನಕಾರಾತ್ಮಕತೆಯ ಚರ್ಚೆಗಳೇ?

ಆಳುವವರು ಅಳುವವರಾದರೆ ಏನು ಗತಿ ಎಂಬ ಹೊಸ ಆತಂಕವೇ?

(ಪಿ.ಮಹಮ್ಮದ್, ಆಂದೋಲನ)

***

ಇಡೀ ಆರೋಗ್ಯ ವ್ಯವಸ್ಥೆಯೇ ಸೋರುತ್ತಿರುವಾಗ, ಈ ನೀರೂ ಅದರದ್ದೇ….

ಯೋಚನೆ ಮಾಡಬೇಡ. ಯಾರೋ ಒಬ್ಬ ರಾಜಕಾರಣಿ ಟಿವಿಯಲ್ಲಿ ಅಳುತ್ತಿದ್ದಾನೆ

(ಸಜಿತ್‍ ಕುಮಾರ್, ಡೆಕ್ಕನ್ ಹೆರಾಲ್ಡ್)

***

ಆದರೂ ಇದು ಈಗಲಾದರೂ ಮೋದಿ ಸ್ಟೇಡಿಯಂ. ರಾಮಮಂದಿರ , ಸರ್ದಾರ್ ಪ್ರತಿಮೆ, ಸೆಂಟ್ರಲ್ ವಿಸ್ತಾಕ್ಕಿಂತ  ಆಸ್ಪತ್ರೆಗಳನ್ನು ಕಟ್ಟಲು ಹೆಚ್ಚಿನ ಹಣ ನೀಡುವಂತಾಗುವ, ಸೊನ್ನೆಗಳನ್ನು ಸೇರಿಸುವಂತದ್ದು ಆಗಬಾರದೇ?…….

(ಸಂದೀಪ್ ಅಧ್ವರ್ಯು/ಫೇಸ್‍ಬುಕ್)

***

ಈ ಮೇಲೆ  ಹೇಳಿದ ಮೇ 21ರ ಉತ್ತರ ಪ್ರದೇಶದ ಕಾಶಿಯಲ್ಲಿನ ಕೋವಿಡ್‍ ಪರಿಸ್ಥಿತಿಯ ಆನ್‍ಲೈನ್‍ ಪರಾಮರ್ಶೆಯ ಎರಡು ದಿನಗಳ ನಂತರ (ಮೇ23ರ ಸಂಜೆ) ಪ್ರಧಾನ ಮಂತ್ರಿ ಮತ್ತು ಗೃಹಮಂತ್ರಿಗಳು(ಮೋಶಾ) ಆರ್. ಎಸ್‍.ಎಸ್‍. ಕೋವಿಡ್‍ ಬಿಕ್ಕಟ್ಟು, ಪಕ್ಷದ ಇಮೇಜಿನ ಮೇಲೆ ಅದರ ಪ್ರಭಾವ ಮತ್ತು ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಬೇಕಾಗಿರುವ ವಿಧಾನಸಭಾ ಚುನಾವಣೆಗಳ ಮೇಲೆ ಅದು ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದರು ಎಂದು ವರದಿಯಾಗಿದೆ (ಎನ್‍ಡಿಟಿವಿ.ಕಾಂ, ಮೇ 24).

ಹಾಗಿದ್ದರೆ ಮೇ 21ರದ್ದು  ಹಲವರು ಕಾಣುವಂತೆ ಮೊಸಳೆ ಕಣ್ಣೀರು ….? ಅಲ್ಲ…..

(ಪಂಜು ಗಂಗೊಳ್ಳಿ, ಫೇಸ್‍ಬುಕ್)

***

ಕಾಶಿ ಪರಾಮರ್ಶೆಯಲ್ಲಿ ಪ್ರಧಾನಿಗಳು ಈ ವೈರಾಣುವಿನ ವಿರುದ್ದ ಸಮರ ಇನ್ನೂ ನಿಂತಿಲ್ಲ ಎಂದು (ಜನವರಿ ತಿಂಗಳಲ್ಲಿ ಸಮರ ಗೆದ್ದಿದ್ದೇವೆ ಎಂದುದನ್ನು ಪರಿಷ್ಕರಿಸಿ?) ದೃಢಪಡಿಸಿದರು. ಈ ಸಮರದಲ್ಲಿ ಎಲ್ಲರಿಗೂ ಲಸಿಕೆ ಹಾಕಿಸುವುದು ಆದ್ಯತೆಯ ಕೆಲಸವಾಗಬೇಕು ಎಂದು ವಿಶೇಷಜ್ಞರು ಮತ್ತೆ-ಮತ್ತೆ ಹೇಳುತ್ತಿದ್ದರೂ, ಕಳೆದ ತಿಂಗಳು ‘ಟೀಕಾ ಉತ್ಸವ್’ ಕರೆಯ ನಂತರ ಆರು ವಾರಗಳಲ್ಲಿ ಲಸಿಕೀಕರಣದ ಪ್ರಮಾಣ ತೀವ್ರವಾಗಿ ಹೆಚ್ಚುವ ಬದಲು 67% ದಷ್ಟು ತೀವ್ರವಾಗಿ ಇಳಿದಿದೆ, ಮತ್ತು ಒಟ್ಟು ಅಧಿಕೃತ ಕೊರೊನಾ ಸಾವುಗಳ ಸಂಖ್ಯೆ 3 ಲಕ್ಷ ದಾಟಿದಾಗಲೂ, ಇಳಿಯುತ್ತಲೇ ಇದೆ ಎಂದು ವರದಿಯಾಗಿದೆ.

ಈಗ ಜನರಿಗೆ ಬೇಕಾಗಿರುವುದು ಸಲಹೆ-ಉಪದೇಶಗಳಲ್ಲ, ಲೀಟರ್ ಗಟ್ಟಲೆ ಕಣ್ನೀರಲ್ಲ……

ನನಗೆ ಬೇಕಾಗಿರುವುದು ಕೇವಲ 0.5 ಮಿಲಿಲೀಟರ್ ಲಸಿಕೆಯಷ್ಟೇ ಸಾರ್!

(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

***

ಆದರೆ ಪ್ರಧಾನಿಗಳ ಟೀಕಾ ಉತ್ಸವ್‍ ಕರೆಯನ್ನು ಮರೆತೇ ಬಿಟ್ಟಂತಿರುವ ಆಳುವ ಪಕ್ಷ ತನ್ನ ಮುಖಂಡರು ಮತ್ತು ಕಾರ್ಯಕರ್ತರಿಗೆ ನೀವು ಹೆಚ್ಚು  ಅನುಭೂತಿ ಮತ್ತು ಸಹಾನುಭೂತಿ ಇರುವವರಂತೆ ಕಾಣಿಸಬೇಕು ಎಂದು ಹೇಳಿದೆಯಂತೆ.

 “ನಾವು ಎಲ್ಲ ರಸಗಳನ್ನು ಪ್ರಯತ್ನಿಸುತ್ತೇವೆ,
ಆದರೆ ಕೊನೆಗೆ ಹಾಸ್ಯರಸಕ್ಕೇ ಬಂದು ಬಿಡುತ್ತೇವೆ!”

(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

***

ಹಾಸ್ಯರಸವೆಂದರೆ ಬಿಜೆಪಿ ಮಟ್ಟಿಗೆ ನೆನಪಾಗುವುದು ಅವರ ಪ್ರಸಿದ್ಧ ರಾಷ್ಟ್ರೀಯ ವಕ್ತಾರ, ಅವರು ಮತ್ತೆ ಟೂಲ್‍ಕಿಟ್ ಪ್ರಶ್ನೆ ಎತ್ತಿದ್ದಾರೆ-ಇಲ್ಲ ಸೃಷ್ಟಿಸಿದ್ದಾರೆ ಎಂದು ನಂತರ ಟ್ವಿಟರ್ ನ ಕ್ರಮದಿಂದ ಅನಿಸುತ್ತಿದೆ.

“ನನ್ನ ತಂದೆ-ತಾಯಿಗೆ ಆಕ್ಸಿಜನ್‍ ಸಿಗಲಿಲ್ಲ .ಅವರು ತೀರಿಕೊಂಡರು…”

ಅದು ಟೂಲ್‍ಕಿಟ್‍ ನ ಒಂದು ಡೈಲಾಗ್‍!”

(ಅಲೋಕ್‍ ನಿರಂತರ್, ಫೇಸ್‍ಬುಕ್)

***

ಒಂದೆಡೆಯಲ್ಲಿ ಪ್ರಧಾನಿಗಳೂ ಸೇರಿದಂತೆ ಆಳುವ ಮಂದಿ ಮತ್ತು ಅವರ ಬೆಂಬಲಿಗರು ಜನಗಳಿಗೆ ಸಹಾನುಭೂತಿಯ ಮುಖವನ್ನು ತೋರಿಸುತ್ತಿದ್ದರೆ, ಐಟಿ ಸೆಲ್ ಆಕ್ರಮಣವೇ ಆತ್ಮರಕ್ಷಣೆಯ ಅತ್ಯುತ್ತಮ ದಾರಿ ಎಂಬ ಹಳೆಯ ನಂಬಿಕೆಯನ್ನೇ ಆತುಕೊಂಡಂತಿದೆ. ಆಕ್ಸಿಜನ್, ಲಸಿಕೆ ಕೊರತೆಗಳ ಬಗ್ಗೆಯೆಲ್ಲ ಮಾತಾಡುತ್ತಿರುವುದು ಪ್ರಧಾನಿಗಳ ಪ್ರತಿಷ್ಠೆಗೆ ಮಸಿ ಬಳಿಯಲೇಂದೇ ಕಾಂಗ್ರೆಸ್‍ ನಿರ್ಮಿಸಿರುವ ‘ಟೂಲ್‍ಕಿಟ್’ , ಅಂದರೆ ಸಾಮಾಜಿಕ ಜಾಲತಾಣದಲ್ಲಿನ ಡಿಜಿಟಲ್‍ ಅಪಪ್ರಚಾರ ಎಂದು ‘ಪುರಾವೆ ಸಮೇತ’ ಈ ವಕ್ತಾರ ‘ಟ್ವೀಟ್‍ ಮಾಡಿದರು!

ನೀವು ಆಕ್ಸಿಜನ್‍ ನೋಡಿದ್ದೀರಾ?”    “ನೀನು ಟೂಲ್‍ ಕಿಟ್ ನೋಡಿದ್ದೀಯಾ?”

(ಮಂಜುಲ್, ಫಸ್ಟ್ ಪೋಸ್ಟ್)

***

ಇದನ್ನು ಸ್ವತಃ ಆರೋಗ್ಯಮಂತ್ರಿಗಳು ಕೇಂದ್ರದ ಇತರ ನಾಲ್ಕು ಕೇಂದ್ರ ಮಂತ್ರಿಗಳು ಮತ್ತು ಬಿಜೆಪಿ ಮುಖಂಡರು ಪುನರುಚ್ಛರಿಸಿದರು. ಆದರೆ ಇದು ಕಾಂಗ್ರೆಸಿನ ಒಂದು  ದಸ್ತಾವೇಜಿನ ಫೋರ್ಜರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮೋಸದ ಪ್ರಚಾರವನ್ನು ಪತ್ತೆ ಹಚ್ಚುವ ‘ಆಲ್ಟ್ ನ್ಯೂಸ್’ ತೋರಿಸಿಕೊಟ್ಟಿತು.

ಟ್ವಿಟರ್ ಸಂಸ್ಥೆ ಸಂಬಿತ್‍ ಪಾತ್ರರವರ ಟ್ವೀಟಿಗೆ “ಕೈಚಳಕದ ಮಾಧ್ಯಮ” ಎಂದು ಲೇಬಲ್‍ ಹಚ್ಚಿದೆ. ಅಂದರೆ ಇದರಲ್ಲಿ ಮೋಸವಿದೆ ಎಂದು ಹೇಳಿದೆ.

***

ಕೊರೊನಾ ವಿರುದ್ಧ ಸಮರ ಮುಂದುವರೆಯುತ್ತದೆಂದು ಹೇಳಿದವರ ಸರಕಾರ ಅದಕ್ಕಾಗಿ ಆಕ್ಸಿಜನ್, ಲಸಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಈ ಲೇಬಲ್‍ ತೆಗೆಸುವ ಕೆಲಸಕ್ಕೆ ಇಳಿದಿದೆ.  ಕಾಂಗ್ರೆಸ್‍ ಪಕ್ಷ ದಿಲ್ಲಿ ಪೊಲೀಸಿಗೆ ದೂರುನೀಡಿ ಈ ಎಲ್ಲ ಬಿಜೆಪಿ ಮುಖಂಡರುಗಳ ಟ್ವಿಟರ್ ಖಾತೆಗಳನ್ನು ಅಮಾನತು ಮಾಡಬೇಕೆಂದು ಕೇಳಿದೆ. ದಿಲ್ಲಿ ಪೋಲೀಸ್‍ ಎಫ್‍ಐಆರ್ ದಾಖಲಿಸುವ ಬದಲು, ಈ ಲೇಬಲ್‍ ಹಚ್ಚಿರುವ ಬಗ್ಗೆ ವಿವರಣೆ ಕೇಳಿ ಟ್ವಟರ್ ಗೆ ನೋಟೀಸು ಕಳಿಸಿದೆಯಂತೆ.

ಪ್ರತಿಪಕ್ಷಗಳ ಟೂಲ್‍ ಕಿಟ್      ಸರಕಾರದ ಟೂಲ್‍ಕಿಟ್

(ಮಂಜುಲ್, ಫಸ್ಟ್ ಪೋಸ್ಟ್)

***

ಈ ನಡುವೆ ಭಾರತದಲ್ಲಿ ಕೊರೊನಾ ಸಾವುಗಳ ಸಂಖ್ಯೆ 3 ಲಕ್ಷ ದಾಟಿದೆ. ಈ ಮೈಲಿಗಲ್ಲನ್ನು ದಾಟಿದ ದೇಶಗಳಲ್ಲಿ ಅಮೆರಿಕ ಮತ್ತು ಬ್ರೆಝಿಲ್‍ ನಂತರ ಈಗ ಭಾರತದ ಹೆಸರು ದಾಖಲಾಗಿದೆ.

ಈ ಎರಡೂ ದೇಶಗಳು ಮಾತ್ರವಲ್ಲ, ಕೋವಿಡ್‍ನಿಂದ ಹೆಚ್ಚು ಬಾಧಿತವಾಗಿರುವ ಮೊದಲ ಹತ್ತು ದೇಶಗಳಲ್ಲಿ ಭಾರತವನ್ನು ಬಿಟ್ಟು ಎಲ್ಲವೂ ಲಸಿಕೆಗಳನ್ನು ಉಚಿತವಾಗಿ ಕೊಡುತ್ತಿವೆ.

ಇತರ ದೇಶಗಳಲ್ಲಿ…..              ಭಾರತದಲ್ಲಿ… ಭಿನ್ನ ಬೆಲೆಗಳು, ಸೀಮಿತ ಉತ್ಪಾದನೆ

(ಸಾತ್ವಿಕ್‍ ಗಡೆ, ದಿ ಹಿಂದು)

***

ಉಚಿತ ಲಸಿಕೆ ಕೊಡುವುದಾಗಿ ಮೊದಲು ಹೇಳಿದ ಭಾರತ ಸರಕಾರ ನಂತರ ಅದನ್ನು ಖಾಸಗಿಯವರ ಪರವಾಗಿ “ಉದಾರೀಕರಿಸಿದ” ಏಕೈಕ ದೇಶ ಎನ್ನಲಾಗಿದೆ.

ಎರಡನೇ ಅಲೆ ತೀವ್ರವಾಗಿ ಅಪ್ಪಳಿಸಿದಾಗ ‘ಟೀಕಾಉತ್ಸವ್‍’ಗೆ ಕರೆ ನೀಡಿದ ನಂತರ, ಕೇಂದ್ರ ಸರಕಾರ ತಾನೇ ಎಲ್ಲ ಲಸಿಕೆಗಳನ್ನು ಖರೀದಿಸುವುದಿಲ್ಲ,  50% ದಷ್ಟು ಮಾತ್ರ ರೂ.150 ದರದಲ್ಲಿ ಖರೀದಿಸುತ್ತದೆ., ಉಳಿದದ್ದನ್ನು ಆ ಕಂಪನಿಗಳು ತಾವು ನಿರ್ಧರಿಸಿದ ಬೆಲೆಗಳಲ್ಲಿ ಮಾರಿಕೊಳ್ಳಬಹುದು, ರಾಜ್ಯ ಸರಕಾರಗಳು ಆ ಕಂಪನಿಗಳು ನಿರ್ಧರಿಸಿದ ಬೆಲೆಗಳಲ್ಲಿ ಆ ಕಂಪನಿಗಳಿಂದಲೇ ಖರೀದಿಸಲು ಪರಸ್ಪರ ಸ್ಪರ್ಧಿಸಬೇಕು ಎನ್ನುವುದು ಮೋದಿ ಸರಕಾರದ ಪ್ರಸಕ್ತ ಲಸಿಕೆ ನೀತಿ.

ಇದರಲ್ಲಿ ಕರ್ನಾಟಕದಂತಹ ‘ಡಬಲ್‍ ಇಂಜಿನ್‍’ ಸರಕಾರಗಳಿಗೂ, ಅದರಲ್ಲೂ ಶಾಸಕರ ಸಾರಾಸಗಟು ಖರೀದಿಯ ಅನುಭವ ಇರುವ  ರಾಜ್ಯ ಸರಕಾರಕ್ಕೂ ರಿಯಾಯ್ತಿ/ವಿನಾಯ್ತಿ ಇಲ್ಲ!

ಸಾರಾಸಗಟು ಖರೀದಿ ಯಾವಾಗಲೂ ಅಗ್ಗವೇ ಆಗಿರುತ್ತದೆ, ನಿಜ;

..ಆದರೆ, ಲಸಿಕೆಗಳ ಖರೀದಿ ಎಂಎಲ್‍ಎ ಗಳ ಖರೀದಿಯಂತಲ್ಲ”

( ಸಂದೀಪ್‍ ಅಧ್ವರ್ಯು, ಫೇಸ್‍ಬುಕ್)

 

ಕಾಶಿ ಪರಾಮರ್ಶೆಯ ಕಣ್ಣಿರಿನ ನಂತರವೂ ಇದು ಬದಲಾಗುವ ಲಕ್ಷಣ ಇಲ್ಲ!

Donate Janashakthi Media

Leave a Reply

Your email address will not be published. Required fields are marked *