ಮೊರಾಕ್ಕೊದಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2,800 ಕ್ಕೆ ಏರಿಕೆಯಾಗಿದೆ.
ಈ ದುರಂತ ಘಟನೆಯಲ್ಲಿ 2500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಮೊರಕ್ಕೊ ಆಂತರಿಕ ಸಚಿವಾಲಯ ತಿಲಳಿಸಿದೆ.
ಕಳೆದ ಶುಕ್ರವಾರ 6.8 ತೀವ್ರತೆಯ ಭೂಕಂಪ ಸಂಭವಿಸಿ ಅಪಾರ ಸಾವು-ನೋವಾಗಿತ್ತು. ಬದುಕುಳಿದವರ ಪತ್ತೆಗಾಗಿ ದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಇದನ್ನೂ ಓದಿ:ಮೊರಾಕ್ಕೊನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪದಲ್ಲಿ 296 ಜನ ಸಾವು
ಭೂಕಂಪಕ್ಕೆ ಸಿಲುಕಿ 2,562 ಜನರು ಗಾಯಗೊಂಡಿದ್ದಾರೆ. ಮರ್ರಾಕೇಶ್‌ನಿಂದ 60 ಕಿ.ಮೀ. ದೂರದಲ್ಲಿರುವ ತಾಫೆಘಗ್ಟೆ ಎಂಬ ಪರ್ವತ ಹಳ್ಳಿಯಲ್ಲಿನ ಪ್ರತಿ ಕಟ್ಟಡವೂ ಭೂಕಂಪದಿಂದಾಗಿ ನಾಶವಾಗಿದೆ.
ಸ್ಪೇನ್, ಬ್ರಿಟನ್,ಹಾಗೂ ಯುನೈಟೆಡ್ ಕಿಂಗ್‌ಡಮ್ ಮತ್ತು ಕತಾರ್‌ನ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.ಇತರೆ ಅನೇಕ ರಾಷ್ಟ್ರಗಳು ನೆರವಿನ ಭರವಸೆ ನೀಡಿವೆ. ಮೊರಾಕ್ಕೊ