ಉತ್ತರಾಖಂಡ: ಬದರೀನಾಥದ ಬಳಿಯಲ್ಲಿ ಭಾರೀ ಹಿಮಪಾತ ಉಂಟಾಗಿದ್ದೂ, ಪರಿಣಾಮ ಹಿಮದಡಿ 57ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವಂತ ಶಂಕೆ ವ್ಯಕ್ತವಾಗಿದೆ. ಅವರ ರಕ್ಷಣೆಗಾಗಿ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ಮುಂದುವರೆದಿದೆ.
ಇಂದು ಶುಕ್ರವಾರ ಉತ್ತರಾಖಂಡದ ಬದರೀನಾಥ್ ಧಾಮದಲ್ಲಿ ಭಾರೀ ಹಿಮಪಾತ ಸಂಭವಿಸಿದ ನಂತರ 57 ಕ್ಕೂ ಹೆಚ್ಚು ಕಾರ್ಮಿಕರು ಹಿಮದ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ| ಕಾಲುವೆ ಸುರಂಗದಲ್ಲಿ ಸಿಲುಕಿದ್ದ 8 ಕಾರ್ಮಿಕರೂ ಸಾವು
ರಾಜ್ಯದ ಮಾನಾದಿಂದ ಘಸ್ಟೋಲಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಸುಮಾರು 57 ಕಾರ್ಮಿಕರು ಹಿಮದ ಅಡಿಯಲ್ಲಿ ಸಿಲುಕಿದ್ದರು. ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿ 16 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಿವೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಸುಮನ್ ಮಾಹಿತಿ ನೀಡಿದರು.
ಕಳೆದ 48 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಭಾರಿ ಹಿಮಪಾತವಾದ ನಂತರ ಹಿಮನದಿ ನದಿಗೆ ಕುಸಿದಿದೆ. ಹಿಮನದಿಯ ಬಳಿಯ ನಿರ್ಮಾಣ ಸ್ಥಳಗಳು ಗಮನಾರ್ಹ ಹಾನಿಯನ್ನು ಅನುಭವಿಸಿವೆ.
ಇದನ್ನೂ ನೋಡಿ: ಫೆಬ್ರವರಿ 28| ರಾಷ್ಟ್ರೀಯ ವಿಜ್ಞಾನ ದಿನಾಚರಣೆ |ಸರ್ ಸಿ.ವಿ.ರಾಮನ್Janashakthi Media