ಶಿಕ್ಷಕನ ಮೊಬೈಲ್‌ನಲ್ಲಿ 5 ಸಾವಿರಕ್ಕೂ ಹೆಚ್ಚು ನಗ್ನ ದೃಶ್ಯಗಳು

ಕೋಲಾರ: ಐದು ಸಾವಿರಕ್ಕೂ ಹೆಚ್ಚು ನಗ್ನ ದೃಶ್ಯಗಳು ಮಾಲೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಮೊಬೈಲ್‌ನಲ್ಲಿ ಇದ್ದವು ಎನ್ನಲಾದ ವಿಚಾರ ಪೋಷಕರಲ್ಲಿ ಆತಂಕ ತಂದೊಡ್ಡಿದೆ. ಈ ಸಂಬಂಧ ಪೋಷಕರು, ಸಂಬಂಧಿಕರು ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ.

ವಿಡಿಯೊಗಳು ತಮ್ಮ ಮಕ್ಕಳಿಗೆ ಸಂಬಂಧಿಸಿದ ಇವೆಯೇ ಎಂದು ಆತಂಕಗೊಂಡಿದ್ದಾರೆ. ‘ವಸತಿ ಶಾಲೆಯಲ್ಲಿ ಮಕ್ಕಳು ಬಟ್ಟೆ ಬದಲಾಯಿಸುವ ಫೋಟೊವನ್ನು ಕೆಲವರು ಮೊಬೈಲ್‌ನಲ್ಲಿ ತೆಗೆದಿದ್ದ ಬಗ್ಗೆ ಆಗಲೇ ದೂರು ನೀಡಿದ್ದೆವು’ ಆದರೆ ಪ್ರಾಂಶುಪಾಲರು ಕ್ರಮಗೈಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಸತಿ ಶಾಲೆಯ ಹೊಸ ಪ್ರಾಂಶುಪಾಲ, ‘ಆರೋಪಿ ಶಿಕ್ಷಕ ಈಗ ನಮ್ಮ ವಸತಿ ಶಾಲೆಯಲ್ಲಿ ಇಲ್ಲ. ಕೆಲ ಸಾಮಾಜಿಕ ಜಾಲತಾಣಗಳು ನಮ್ಮ ಶಾಲೆಯಲ್ಲಿರುವ ಶಿಕ್ಷಕ ಎಂದು ಉಲ್ಲೇಖಿಸುತ್ತಿವೆ. ಪೋಷಕರು ಆತಂಕಗೊಂಡು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ನಾವು ಸಮಾಧಾನ ಮಾಡುತ್ತಿದ್ದೇವೆ. ಈಗ ನಮ್ಮ ವಸತಿ ಶಾಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದರು. ಪ್ರಕರಣ ನಡೆದಾಗ ಇದ್ದ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಅತಿಥಿ ಶಿಕ್ಷಕರು, ಅಡುಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಈಗಾಗಲೇ ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಮುಖ್ಯಮಂತ್ರಿ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ, ಮುಂದಿನ ಮುಖ್ಯಮಂತ್ರಿಯ ಕುರಿತು ಚರ್ಚೆ ಮಾಡುವ ಅಗತ್ಯವೂ ಇಲ್ಲ; ಡಾ.ಜಿ.ಪರಮೇಶ್ವರ್

ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಲಗುಂಡಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಶಿಕ್ಷಕರಾಗಿದ್ದ ಮುನಿಯಪ್ಪ ಅವರನ್ನು 2023ರ ಡಿ.17ರಂದೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌) ಅಮಾನತುಗೊಳಿಸಿತ್ತು. ಅವರ ವಿರುದ್ಧ ಮಾಸ್ತಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈಗ ಅವರು ಕೋಲಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜೂನ್ 5ರಂದು ಅಮಾನತು ತೆರವುಗೊಳಿಸಿ ಚಾಮರಾಜನಗರ ಜಿಲ್ಲೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್‌ ತಿಳಿಸಿದ್ದಾರೆ.

‘ಐದು ಸಾವಿರ ನಗ್ನ ಚಿತ್ರ, ವಿಡಿಯೊ ವಿಚಾರ ಗೊತ್ತಿಲ್ಲ’ ‘ಈ ಪ್ರಕರಣ ತನಿಖಾ ಹಂತದಲ್ಲಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಬೇಕಿದೆ. ಮೊಬೈಲ್‌ನಲ್ಲಿ ಐದು ಸಾವಿರ ನಗ್ನ ವಿಡಿಯೊ ಇರುವ ವಿಚಾರ ಎಲ್ಲಿಂದ ಬಂತು ಎಂಬುದು ನಮಗೆ ಗೊತ್ತಿಲ್ಲ. ವಶಪಡಿಸಿಕೊಂಡಿರುವ ಮೊಬೈಲ್‌ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ‌ಕಳುಹಿಸಲಾಗಿದೆ. ಸದ್ಯದಲ್ಲೇ ಎಫ್‌ಎಸ್ಎಲ್‌ ವರದಿ ಬರಲಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ನೋಡಿ: ರಾಜ್ಯಪಾಲರ ನೇಮಕ – ಸಂವಿಧಾನದ ಅಪಭ್ರಂಶ – ಎ. ನಾರಾಯಣJanashakthi Media

Donate Janashakthi Media

Leave a Reply

Your email address will not be published. Required fields are marked *