ಸಿರಿಯಾ-ಟರ್ಕಿ ಭೂಕಂಪನ; 4300ಕ್ಕೂ ಹೆಚ್ಚು ಮಂದಿ ಸಾವು; 7 ದಿನ ರಾಷ್ಟ್ರೀಯ ಶೋಕಾಚರಣೆ

ಡಮಾಸ್ಕಸ್: 24 ಗಂಟೆಯ ಅವಧಿಯಲ್ಲಿ ನಾಲ್ಕು ಬಾರಿ ಭೂಕಂಪನ ಸಂಭವಿಸಿರುವ ಸಿರಿಯಾ, ಟರ್ಕಿಯಲ್ಲಿ ಸಾವು-ನೋವುಗಳು ಪ್ರಮಾಣ ಹೆಚ್ಚಾಗಿದ್ದು, ಸದ್ಯದ ವರದಿ ಪ್ರಕಾರ ಸುಮಾರು 4300ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅನೇಕ ಕಟ್ಟಡಗಳು ನೆಲಸಮಗೊಂಡಿದ್ದು, ರಕ್ಷಣಾ ಕಾರ್ಯಕ್ಕೂ ತೊಡಗಾಗಿ ಪರಿಣಮಿಸಿದೆ. ಅಲ್ಲಿನ ಸರ್ಕಾರ 7 ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.

ಇದನ್ನು ಓದಿ: ಸಿರಿಯಾ-ಟರ್ಕಿಯಲ್ಲಿ ಪ್ರಬಲ ಭೂಕಂಪನ; 200ಕ್ಕೂ ಮಂದಿ ಸಾವು-ಕಟ್ಟಡಗಳು ಕುಸಿತ

ಟರ್ಕಿ ಮತ್ತು ಸಿರಿಯಾದಲ್ಲಿ ನಿನ್ನೆ(ಫೆಬ್ರವರಿ 6) ಸಂಭವಿಸಿದ ಪ್ರಬಲ ಭೂಕಂಪದ ವೇಳೆ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಪ್ರಮಾಣ ದಾಖಲಾಗಿತು. ಇದಾ‌ದ ಕೆಲವು ಗಂಟೆಗಳ ನಂತರ 7.5 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಹಲವು ನಗರಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಭಗ್ನಾವಶೇಷಗಳ ರಾಶಿಗಳು ಕಾಣಿಸುತ್ತಿದ್ದು, ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ನಿವಾಸಿಗಳಿಂದ ತುಂಬಿರುವ 5,606 ಬಹುಮಹಡಿ ಅನೇಕ ಕಟ್ಟಡಗಳು ಧರೆಗುರುಳಿದ್ದರೆ ಇನ್ನು ಕೆಲವು ಶಿಥಿಲಗೊಂಡಿವೆ. ಸಿರಿಯಾದಲ್ಲಿ ಅಧಿಕ ಪ್ರಮಾಣದಲ್ಲಿ ಕುಸಿತ ಸಂಭವಿಸಿದೆ ಮತ್ತು ಅಲೆಪ್ಪೊದಲ್ಲಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹಾನಿಯುಂಟಾಗಿದೆ. ಸಿರಿಯಾದ ಅಲೆಪ್ಪೊ ಮತ್ತು ಹಮಾದ್ ನಗರಗಳಿಂದ ಹಿಡಿದು ಟರ್ಕಿಯ ದಿಯರ್‌ಬಕೀರ್‌ ವರೆಗೆ ಈಶಾನ್ಯಕ್ಕೆ 330 ಕಿಲೋಮೀಟರ್‌ ಗಿಂತಲೂ ಹೆಚ್ಚು ವಿಸ್ತಾರದ ಪ್ರದೇಶದಲ್ಲಿ ಕಟ್ಟಡಗಳು ಕುಸಿದಿವೆ.

ಇದನ್ನು ಓದಿ: ಗಡಿಕೇಶ್ವಾರದಲ್ಲಿ ಮತ್ತೆ ಭೂಕಂಪನ: ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ

ಟರ್ಕಿಯ ಸ್ಥಳೀಯ ಕಾಲಮಾನ ಪ್ರಕಾರ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಮೊದಲ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಮಿ ಕಂಪಿಸಿದ ಕೂಡಲೇ ನಿದ್ರೆಯಿಂದ ಎಚ್ಚರಗೊಂಡವರು ಜೀವ ಉಳಿಸಿಕೊಳ್ಳಲು ಮಳೆ, ಕೊರೆವ ಚಳಿಯಲ್ಲೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ದಿಢೀರ್‌ ಎದುರಾದ ಈ ಆಘಾತದಿಂದ ನಿವಾಸಿಗಳು ಹೊರಬರುವಷ್ಟರಲ್ಲಿ ಕ್ಷಣಾರ್ಧದಲ್ಲೇ ಬಹುಮಹಡಿ ಕಟ್ಟಡಗಳು, ವಸತಿ ಸಮುಚ್ಚಯಗಳು ಧರೆಗುರುಳಿವೆ. ಭೂಕಂಪ ಪೀಡಿತ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಪರಿಣಾ ಬೀರಿದ್ದು, ಪರಿಹಾರ ಕಾರ್ಯಾಚರಣೆಗೆ ತೊಡಕಾಗಿದೆ.

24 ಗಂಟೆಯಲ್ಲಿ 4ನೇ ಸಲ ನಡುಗಿದ ಭೂಮಿ:

ಟರ್ಕಿಯಲ್ಲಿ 24 ಗಂಟೆಯ ಅವಧಿಯಲ್ಲಿ ಭೂಕಂಪನದಿಂದ ಭೂಮಿ ನಡುಗಿದ ಅನುಭವಾಗಿದ್ದು ನಿನ್ನೆಯಿಂದ ನಾಲ್ಕನೇ ಸಲ ಕಂಪನ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದ ಮಧ್ಯೆಯೂ ಭೂ ನಡುಗಿದ್ದು ಟರ್ಕಿಯಲ್ಲಿ ಸಾವಿನ ಸಂಖ್ಯೆ ವಿಪರೀತ ಏರಿಕೆ ಕಾಣುತ್ತಿದೆ. ಅಲ್ಲಿನ ಸರ್ಕಾರ 7 ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.

ಇದನ್ನು ಓದಿ: ಪ್ರಬಲ ಭೂಕಂಪಕ್ಕೆ ನಡುಗಿದ ತೈವಾನ್‌ ದ್ವೀಪ

ಟರ್ಕಿಯ ಆಗ್ನೇಯ ಪ್ರಾಂತ್ಯದ ಗಾಝಿಯಾನ್‌ ಟೆಪ್‌ ಪಟ್ಟಣದ ಉತ್ತರಕ್ಕೆ 18 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರಬಿಂದುವಾಗಿದೆ. ಡಮಾಸ್ಕಸ್ ಮತ್ತು ಬೇರೂತ್‌ನಲ್ಲಿ ಸಾವಿರಾರು ಜನ ಮೃತಪಟ್ಟಿದ್ದು, ಲಕ್ಷಾಂತರ ಜನ ಬೀದಿಪಾಲಾಗಿದ್ದಾರೆ. ಸಿರಿಯಾದಲ್ಲಿ ಎರಡು ದಶಕಗಳ ಅಂತರ್‌ಯುದ್ಧದ ಪರಿಣಾಮ ಗಡಿಯ ಎರಡೂ ಬದಿಗಳಲ್ಲಿ ನೆಲೆಕಂಡುಕೊಂಡಿದ್ದ ವಲಸಿಗರ ಜನವಸತಿ ಪ್ರದೇಶಗಳು ಕಂಪನದ ಪರಿಣಾಮದಿಂದ ತತ್ತರಿಸಿವೆ.

ಇತಿಹಾಸದಲ್ಲೇ ದಾಖಲಾದ ಅತಿದೊಡ್ಡ ಭೂಕಂಪನ

ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರೇದ್ ಅಹ್ಮದ್, ಇದನ್ನು “ಈ ಕೇಂದ್ರದ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ” ಎಂದು ಕರೆದಿದ್ದಾರೆ. ಆಗ್ನೇಯ ಟರ್ಕಿಶ್ ನಗರವಾದ ಕಹ್ರಮನ್‌ ಮರಸ್‌ ನಲ್ಲಿ ವರದಿಗಾರ್ತಿ ಮೆಲಿಸಾ ಸಲ್ಮಾನ್, “ನಾವು ಇಂತಹ ಭೀಕರ ಭಯಾನಕ ಮಾರಣಾಂತಿಕ ಪರಿಸ್ಥಿತಿ ಎದುರಿಸುತ್ತಿರುವುದು ಇದೇ ಮೊದಲು” ಎಂದಿದ್ದಾರೆ.

ಆರಂಭಿಕ ಭೂಕಂಪದ ನಂತರದ ಅವಧಿಯಲ್ಲಿ ಮತ್ತೆ ಮತ್ತೆ ಭೂಮಿ ಕಂಪಸಿದ ಅನುಭವವಾಗಿದೆ. ಇದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾದವು “ನಾವು ಮೂವರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ, ಆದರೆ ಇಬ್ಬರು ಮೃತಪಟ್ಟರು” ಎಂದು ಟರ್ಕಿಯ ಆಗ್ನೇಯ ನಗರವಾದ ದಿಯಾರ್‌ ಬಕಿರ್‌ನಲ್ಲಿ 35 ವರ್ಷದ ಹ್ಯಾಲಿಸ್ ಅಕ್ಟೆಮುರ್ ಹೇಳಿಕೊಂಡಿದ್ದಾರೆ. ಇದು ಗ್ರೀನ್‌ಲ್ಯಾಂಡ್‌ ನಷ್ಟು ದೂರದಲ್ಲಿ ಸಂಭವಿಸಿದ ಭೂಕಂಪವಾಗಿದೆ.

ಇದನ್ನು ಓದಿ: ಕಲುಷಿತ ಆಹಾರ ಸೇವನೆ: 137 ವಿದ್ಯಾರ್ಥಿನಿಯರು ಅಸ್ವಸ್ಥ

ಮತ್ತೆ ಭೂಕಂಪ ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಸಾವಿನ ಸಂಖ್ಯೆ 10 ಸಾವಿರ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಜನರು ಜೀವಭಯದಿಂದ ಸುರಕ್ಷಿತ ನೆಲೆಗಳಿಗೆ ತೆರಳುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ, ಪರಿಹಾರ ಕಾರ್ಯಕ್ಕೆ ಮತ್ತಷ್ಟು ಅಡ್ಡಿಯಾಗಿದೆ.  ಭೂಕಂಪದಿಂದ ಅಪಾರ ಸಾವು-ನೋವುಗಳುಂಟಾದ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಸಹಾಯ ಮಾಡುವುದಾಗಿ ಭರವಸೆ ನೀಡಿವೆ.

ಟರ್ಕಿಯ ಭೂಕಂಪನದ ಇತಿಹಾಸ

ಮಧ್ಯಪ್ರಾಚ್ಯ ದೇಶದಲ್ಲಿ 1784 ರಲ್ಲಿ ಉಂಟಾದ 7.5 ತೀವ್ರತೆಯ ಕಂಪನದಲ್ಲಿ 10 ಸಾವಿರ ಜನರು ಬಲಿಯಾಗಿದ್ದರೆ, 1881 ರಲ್ಲಿ 7900, 1840 ರಲ್ಲಿ 10 ಸಾವಿರ, 1939 ರಲ್ಲಿ 32700, 1999 ರಲ್ಲಿ 17000 ಜನರು ಸಾವಿಗೀಡಾಗಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *