ಬೆಂಗಳೂರು: ಲೈಂಗಿಕ ಕಿರುಕುಳ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಆರೋಪಿ ಭಾರತದಿಂದ ಓಡಿಹೋಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡೀಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪ್ರಾರಂಭಿಸಿರುವ ಹೆಲ್ಪ್‌ಲೈನ್‌ಗೆ ಇದೂವರೆಗೆ 30ಕ್ಕೂ ಹೆಚ್ಚು ಕರೆ ಗಳು ಬಂದಿವೆ ಎಂದು ವರದಿಯಾಗಿದೆ. ಪ್ರಜ್ವಲ್
ಎಸ್ಐಟಿ ದೂರು ನೀಡುವವರಿಗಾಗಿ 6360938947 ಸಂಖ್ಯೆಯ ಸಹಾಯವಾಣಿ ಆರಂಭಿಸಿದೆ. ಈ ಸಹಾಯವಾಣಿಗೆ ಸಂಪರ್ಕಿಸಿ ದೂರು ನೀಡುವಂತೆ ಎಸ್ಐಟಿ ತಿಳಿಸಿದೆ. ದೂರು ನೀಡಿದವರ ಗುರುತು ಹಾಗೂ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.
ಇದನ್ನೂ ಓದಿ: ಎಸ್‌ಐಟಿಗೆ ಸುಳಿವಾಗಬಲ್ಲದೆನ್ನುವ ದೇವೇಗೌಡರ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂದ ಕರೆಯ ಊಹಾಪೋಹ
ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಇನ್ನು ಹೆಲ್ಪ್ ಲೈನ್ ಮೂಲಕ ದಾಖಲಾಗಿರುವ ಹೇಳಿಕೆಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಪ್ರಜ್ವಲ್ ರೇವಣ್ಣ ದೌರ್ಜನ್ಯ ಪ್ರಕರಣ ಸಂಬಂಧ 30ಕ್ಕೂ ಹೆಚ್ಚು ಕರೆಗಳು ಬಂದಿವೆಯಾದರೂ ಸಂತ್ರಸ್ತೆಯರು ಈವರೆಗೆ ದೂರು ನೀಡಿಲ್ಲ. ಹೆಲ್ಪ್ ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಎಸ್ಐಟಿ ಮನವಿ ಮಾಡಿದೆ.
ಇದನ್ನೂ ನೋಡಿ: ಗ್ರೇಸ್ ಮಾರ್ಕ್ಸ್ : ಶಾಲಾ ಶಿಕ್ಷಣದ ಹೀನಾಯ ಸ್ಥಿತಿ ಅನಾವರಣJanashakthi Media