299ಕ್ಕೂ ಅಧಿಕ ರೋಗಿಗಳ ಮೇಲೆ ಅತ್ಯಾಚಾರ; ಮಾಜಿ ಸರ್ಜನ್ ಬಂಧನ

ವದೆಹಲಿ: ಫ್ರಾನ್ಸ್​ನಲ್ಲಿ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ದಾಖಲಾಗಿದ್ದ 299ಕ್ಕೂ ಅಧಿಕ ರೋಗಿಗಳ ಮೇಲೆ ಮಾಜಿ ಸರ್ಜನ್ ಒಬ್ಬರು ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿ ಲೆ ಸ್ಕೌರ್ನೆಕ್​ (74) ಎಂಬಾತನನ್ನು ಬಂಧಿಸಲಾಗಿದೆ. ರೋಗಿ

ಈತ ತಾನು ಮಾಡಿದ್ದ ಕೃತ್ಯವನ್ನು ಡೈರಿಯೊಂದಲ್ಲಿ ಬರದಿದ್ದು, ಅಧಿಕಾರಿಗಳನ್ನು ಇದನ್ನು ವಶಪಡಿಸಿಕೊಂಡು ಕೋರ್ಟ್​ಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಯಾದಗಿರಿ| ಮಕ್ಕಳು ತಟ್ಟೆ ತೊಳೆಯಲು ನಿರಾಕರಿಸಿದ್ದಕ್ಕೆ ಬಿಸಿಯೂಟ ಸ್ಥಗಿತ

ಪ್ರಕರಣದ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಮೂರು ದಶಕಗಳಿಂದ ತಾನು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ನಾನು ಅಸಹ್ಯಕರ ಕೃತ್ಯಗಳನ್ನು ಎಸಗಿದ್ದೇನೆ ಎಂದು ಲೆ ಸ್ಕೌರ್ನೆಕ್ ವ್ಯಾನೆಸ್‌ನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಿಯು ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದು, 20 ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತದೆ. ಇದಲ್ಲದೆ ಆತ ಮನೆಯಲ್ಲಿ ಬಳಸುತ್ತಿದ್ದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ನೋಡಿ: ಕೊಪ್ಪಳ ಬಂದ್​ | ಕಾರ್ಖಾನೆ ಸ್ಥಾಪನೆಗೆ ವಿರೋಧ Janashakthi Media

Donate Janashakthi Media

Leave a Reply

Your email address will not be published. Required fields are marked *