ತ್ರಿಷೂರ್ : ಹೊಟೇಲ್ ಒಂದರಲ್ಲಿ ಬಿರಿಯಾನಿ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿರುವುದೂ ಅಲ್ಲದೇ 178 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಕೇರಳದ ತ್ರಿಷೂರ್ ನಲ್ಲಿ ನಡೆದಿದೆ.
ಮೃತಪಟ್ಟಿರುವ ಮಹಿಳೆ 56 ವರ್ಷದವರಾಗಿದ್ದು, ಅಸ್ವಸ್ಥಗೊಂಡ ಕೂಡಲೇ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಹೋಟೆಲ್ ನಲ್ಲಿ ಸಿಗುವ ಕುಳಿಮಂತಿ (ಯಮನ್ ಶೈಲಿಯ ಮಾಂಸ ಖಾದ್ಯ)ವನ್ನು ಸೇವಿಸಿದ್ದರು. ಸಾಮೂಹಿಕವಾಗಿ ವಿಷಾಹಾರ ಸೇವನೆಯಿಂದ ಅವಘಡ ಸಂಭವಿಸಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಜ್ಞಾತ ಸ್ಥಳವೊಂದರಿಂದ ಪ್ರಜ್ವಲ್ ರೇವಣ್ಣ ವಿಡೀಯೋ ಹೇಳಿಕೆ-ಶುಕ್ರವಾರ ಎಸ್‌ಐಟಿ ಮುಂದೆ ಪ್ರಜ್ವಲ್ ರೇವಣ್ಣ ಹಾಜರು
ಬಿರಿಯಾನಿಯೊಡನೆ ವಿತರಿಸಿದ ಮೆಯೋನೀಸ್‌ನಲ್ಲಿ ವಿಷದ ಅಂಶ ಸೇರಿರಬಹುದೆಂದು ಅಸ್ವಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಬಿಜೆಪಿ ಸೋತರೆ, ಮೋದಿ ಸುಲಭವಾಗಿ ಅಧಿಕಾರ ಬಿಟ್ಟುಕೊಡುವರೇ? Janashakthi Media