ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕ ಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕುಂಪಿ ಗ್ರಾಮದಲ್ಲಿ ದಲಿತ ಕುಟುಂಬವಿರುವ ಎಸ್ ಸಿ/ ಎಸ್ ಟಿ ಕಾಲೋನಿಗೆ ಅನೇಕ ಮೂಲಭೂತ ಸೌಲಭ್ಯಗಳು ಇಲ್ಲದೇ ಕಾಲೋನಿಯ ಜನರು ನರಳಾಡುತ್ತಿದ್ದಾರೆ ಎಂದು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆಯು ತಾಲ್ಲೂಕು ಸಮಿತಿಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನು ಓದಿ: ನಿರ್ದಯಿ………….. ನಿಷ್ಕರುಣಿ!
ಚಿಕ್ಕ ಬೆಣಕಲ್ ಗ್ರಾಮ ಪಂಚಾಯತಿಯ ಅಧ್ಯಕ್ಷರು/ಅಭಿವೃದ್ದಿ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ದಲಿತ ಎಸ್‌ಸಿ ಕಾಲೋನಿಯಲ್ಲಿನ ಅನೇಕರು ಕೆಲಸ ಬೇಕೆಂದು ಉದ್ಯೋಗ ಖಾತ್ರಿ ಕೆಲಸ ಬೇಕೆಂದು ಮನವಿ ಸಲ್ಲಿಸಿದರೂ ಕೆಲಸ ನಿರಾಕರಣೆ ಮಾಡಲಾಗುತ್ತಿದೆ. ಗ್ರಾಮದ ಜನರಿಗೆ ಸರಿಯಾದ ಸೌಲಭ್ಯಗಳು ಇಲ್ಲದೇ ಜನರು ಕಂಗಾಲಾಗಿದ್ದಾರೆ. ಹಾಗಾಗಿ ಮುಕ್ಕುಂಪಿ ಗ್ರಾಮದ ದಲಿತ ಎಸ್ ಸಿ ಕಾಲೋನಿ ಗೆ ಸಮಗ್ರ ಅಭಿವೃದ್ದಿ ಪಡಿಸಬೇಕೆಂದು ಕೆಲವು ಬೇಡಿಕೆಗಳನ್ನು ಸರಕಾದ ಮುಂದಿಟ್ಟು ಆಗ್ರಹಿಸಿದ್ದಾರೆ.
- ಮುಕ್ಕುಂಪಿ ಗ್ರಾಮದ ಕೂಲಿಕಾರರಿಗೆ ತಕ್ಷಣ ಕೆಲಸ ಕೊಡಬೇಕು.
- ಎಸ್ ಸಿ / ಎಸ್ ಟಿ ಕಾಲೋನಿಗೆ ಬಟ್ಟೆ ತೊಳೆಯುವ ನೀರಿನ ದೋಣಿಯನ್ನು ನಿರ್ಮಾಣ ಮಾಡಬೇಕು.
- ಅಂಬೇಡ್ಕರ್ ನಾಮಫಲಕವಿರುವ ಸ್ಥಳದಲ್ಲಿ ಕಟ್ಟೆಯನ್ನು ಕಟ್ಟಿ ಪಂಚಾಯಿತಿಯಲ್ಲಿ ನೋಂದಣಿ ಮಾಡಬೇಕು.
- ಎಸ್ ಸಿ ಕಾಲೋನಿಗೆ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು.
- ಮುಕ್ಕುಂಪಿ ಗ್ರಾಮದಲ್ಲಿ ಮನೆಯಿಲ್ಲದವರಿಗೆ ಆಶ್ರಯ ಮನೆ ನಿರ್ಮಾಣ ಮಾಡಿಕೊಡಬೇಕು.
- ಮುಕ್ಕುಂಪಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಎಲ್ಲಾ ಅಗತ್ಯ ಸೌಲಭ್ಯ ನೀಡಬೇಕು.
ಇದನ್ನು ಓದಿ: ಕೋವಿಡ್ ಬಿಕ್ಕಟ್ಟು: ಜನವಾದಿಯಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ
ಎಂಬ ಪ್ರಮುಖ ಆರು ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಇಲ್ಲವಾದಲ್ಲಿ ಪಂಚಾಯಿತಿ ಮುಂದೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಎಸ್ಎಫ್ಐ ಒತ್ತಾಯಿಸುತ್ತದೆ.
ಸಂಘಟನೆಯ ರಾಜ್ಯ ಅಧ್ಯಕ್ಷರಾದ ಅಮರೇಶ ಕಡಗದ, ತಾಲ್ಲೂಕು ಅಧ್ಯಕ್ಷರಾದ ಗ್ಯಾನೇಶ ಕಡಗದ ಮತ್ತು ಹನುಮಂತ ಮುಕ್ಕುಂಪಿ, ಮಲ್ಲಪ್ಪಶಿವಣ್ಣ ಬೆಣಕಲ್, ಗಾದೆಪ್ಪ, ಸೋಮಣ್ಣ ಇಂದ್ರಿಗಿ, ಮಂಜುನಾಥ ಸೇರಿದಂತೆ ಇತರರು ಭಾಗವಹಿಸಿದ್ದರು.