ಮಂಕಿಪಾಕ್ಸ್‌ನ ಮೊದಲನೇ ಪ್ರಕರಣವನ್ನು ದೃಢೀಕರಿಸಿದ ಯು ಎಸ್

  • ಇತ್ತೀಚಿಗೆ ಕೆನಡಾಗೆ ಪ್ರಯಾಣಿಸಿದ ವ್ಯಕ್ತಿಗೆ ಮಂಕಿಪಾಕ್ಸ್ ದೃಡ
  • ಪ್ರಕರಣಗಳ ಬಗ್ಗೆ ಜಾಗರೂಕರಾಗಿರಲು ಮತ್ತು ತನಿಖೆ ಮಾಡಲು ಕರೆ 

ಮಾಂಟ್ರಿಯಲ್: ಉತ್ತರ ಅಮೇರಿಕಾ ಮತ್ತು ಯುರೋಪ್‌ನ ಆರೋಗ್ಯ ಅಧಿಕಾರಿಗಳು ಡಜನ್‌ಗಟ್ಟಲೆ ಶಂಕಿತ ಅಥವಾ ದೃಡಪಟ್ಟ ಮಂಕಿಪಾಕ್ಸ್ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ,  ಆಫ್ರಿಕಾದ ಕೆಲವು ಭಾಗಗಳಲ್ಲಿ ಸ್ಥಳೀಯ ರೋಗವು ಹರಡುತ್ತಿದೆ ಎಂಬುದು ಆತಂಕಕ್ಕೆ ಕಾರಣವಾಗಿದ್ದು. ಸ್ಪೇನ್ ಮತ್ತು ಪೋರ್ಚುಗಲ್ ನಲ್ಲಿ 40 ಕ್ಕೂ ಹೆಚ್ಚು ಸಂಭವನೀಯ ಪ್ರಕರಣಗಳನ್ನು ಪತ್ತೆಹಚ್ಚಿದ ನಂತರ, ಮಂಕಿಪಾಕ್ಸ್‌ನ ಶಂಕಿತ ಮತ್ತು ದೃಡಪಟ್ಟಿರುವ ಪ್ರಕರಣಗಳನ್ನು ತನಿಖೆ ಮಾಡುತ್ತಿದೆ ಎಂದು ಕೆನಡಾ ಪತ್ರಿಕೆಗಳು ವರದಿಮಾಡಿವೆ.

ಮೇ 6 ರಿಂದ ಬ್ರಿಟನ್ ಒಂಬತ್ತು ಪ್ರಕರಣಗಳನ್ನು ದೃಢಪಡಿಸಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಬುಧವಾರ ತನ್ನ ಮೊದಲನೆಯ ಪ್ರಕರಣವನ್ನು ಪರಿಶೀಲಿಸಿದೆ, ಪೂರ್ವ ರಾಜ್ಯವಾದ ಮ್ಯಾಸಚೂಸೆಟ್ಸ್‌ನ ವ್ಯಕ್ತಿಯೊಬ್ಬರು ಕೆನಡಾಕ್ಕೆ ಭೇಟಿ ನೀಡಿದ ನಂತರ ಸೋಂಕಿಗೆ ಒಳಪಟ್ಟಿದ್ದಗಿ ತಿಳಿದು ಬಂದಿದೆ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ ಸಾವಿರಾರು ಜನರಿಗೆ ಸೋಂಕು ತಗುಲಿಸಿದೆ. ಆದರೆ ಯುರೋಪ್ ಮತ್ತು ಉತ್ತರ ಆಫ್ರಿಕಾದಲ್ಲಿ ಅಷ್ಟೇನು ಪ್ರಕರಣಗಳು ಕಂಡು ಬಂದಿಲ್ಲ.  ಆದರೂ ಹೆಚ್ಚಿನ ಜನರು ಕೆಲವೆ ವಾರಗಳಲ್ಲಿ ಚೇತರಿಸಿಕೊಳ್ಳುವ ಮತ್ತು ಮಾರಣಾಂತಿಕವಾಗಿ ಅನಾರೋಗ್ಯವು ಸೃಷ್ಟಿಯಾಗುವ ಸಾಧ್ಯತೆ ಇದೆ  ಎಂದು ಯುಕೆ ಮತ್ತು ಯುರೋಪಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಕಿಪಾಕ್ಸ್‌, ಜ್ವರ, ಸ್ನಾಯುನೋವು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ರೋಗಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಮೊದಲು ಮುಖ ಮತ್ತು ದೇಹದ ಮೇಲೆ ಚಿಕನ್ಪಾಕ್ಸ್ ತರಹದ ದದ್ದು ಉಂಟಾಗುತ್ತದೆ ಎಂದು ಯುಎಸ್ ಏಜೆನ್ಸಿ ವಿವರಿಸಿದೆ. ಕೆನಡಾದ ಕ್ವಿಬೆಕ್ ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ಕನಿಷ್ಠ 13 ಶಂಕಿತ ಮಂಕಿಪಾಕ್ಸ್ ಪ್ರಕರಣಗಳನ್ನು ತನಿಖೆ ಮಾಡುವುದಾಗಿ ಘೋಷಿಸಿದ್ದಾರೆ ಎಂದು ಸಾರ್ವಜನಿಕ ಪ್ರಸಾರಕ ಸಿಬಿಸಿ ಬುಧವಾರ ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *