ಹಣವಿರುವ ಚೀಲವನ್ನು ಮರೆತು ಬಸ್ಸಿನಲ್ಲೇ ಬಿಟ್ಟು ಹೋಗಿದ್ದ ವೃದ್ದೆ: ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ‌ ಮೆರೆದ ವಾಯುವ್ಯ ಸಾರಿಗೆ ಸಂಸ್ಥೆ

ಶಿರಸಿ: ಹಣವಿರುವ ಚೀಲವನ್ನು ಬಸ್ಸಿನಲ್ಲೇ ಬಿಟ್ಟು ಹೋಗಿದ್ದ ವೃದ್ದೆಯನ್ನು ಹುಡುಕಿ, ಅವರಿಗೆ‌ ಹಣದ ಚೀಲವನ್ನು ತಲುಪಿಸುವ ಮೂಲಕ ವಾಯುವ್ಯ ಸಾರಿಗೆ ಸಂಸ್ಥೆಯ ಸಿಬಂದಿಯೋರ್ವರು‌ ಪ್ರಾಮಾಣಿಕತೆ‌ ಮೆರೆದಿದ್ದಾರೆ.

ಹಾವೇರಿ ತಾಲೂಕಿನ ಬಾಳಂಬೀಡ ಗ್ರಾಮದ ಅಕ್ಕಮ್ಮ ಎನ್ನುವ 70 ವರ್ಷದ ವಯೋವೃದ್ಧ ತನ್ನ ಅನಾರೋಗ್ಯ ನಿರ್ವಹಣೆಗಾಗಿ‌ ಕೂಡಿಟ್ಟ ಹಣವುಳ್ಳ ಚೀಲವನ್ನು ಬಸ್ಸಿನಲ್ಲೇ ಬಿಟ್ಟು ಇಳಿದು ಹೋಗಿದ್ದರು. ವೃದ್ದೆಯನ್ನು ಹುಡುಕಿ ಅವರಿಗೆ‌ ಹಣದ ಚೀಲವನ್ನು ತಲುಪಿಸುವ ಮೂಲಕ ವಾಯುವ್ಯ ಸಾರಿಗೆ ಸಂಸ್ಥೆಯ ಸಿಬಂದಿಯೋರ್ವರು‌ ಪ್ರಾಮಾಣಿಕತೆ‌ ಮೆರೆದಿದ್ದಾರೆ.

ಇದನ್ನೂ ಓದಿ : ಜಾತಿಗಣತಿ ವರದಿ : ಊಹಾಪೋಹಗಳನ್ನಾಧರಿಸಿ ವಿರೋಧಿಸುವುದು ಅನವಶ್ಯಕ : ಮುಖ್ಯಮಂತ್ರಿ ಸಿದ್ದರಾಮಯ್ಯ

ತನ್ನ ಚಿಕಿತ್ಸೆಗಾಗಿ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಮುಂದೆ ಅವಲಕ್ಕಿಯನ್ನು ಮಾರಿ ಕೂಡಿಟ್ಟ 9.500 ರೂಪಾಯಿ ಹಣವನ್ನು ಖಾಲಿ ಅಕ್ಕಿ ಚೀಲದೊಳಗೆ ಇರಿಸಿ, ಶಿರಸಿ – ಹಾವೇರಿ ಮಾರ್ಗದ ಬಸ್ಸಿನಲ್ಲಿ ಎರಡು ದಿನದ ಹಿಂದೆ ಪ್ರಯಾಣಿಸಿದ್ದರು. ಅಂದು ಇಳಿಯುವ ಗಡಿಬಿಡಿಯಲ್ಲಿ ಹಣ ಇದ್ದ ಚೀಲವನ್ನು ಬಸ್ಸಿನಲ್ಲಿಯೇ ಮರೆತು ಬಿಟ್ಟು ಇಳಿದಿದ್ದರು.

ಗಂಟುಕಟ್ಟಿದ ಈ ಚೀಲವನ್ನು ಗಮನಿಸಿದ ಶಿರಸಿ ಹಾವೇರಿ ವಾಹನದ ಖಾಯಂ ನಿರ್ವಾಹಕ ಮಹಮ್ಮದ್ ಗೌಸ್ ನದಾಫ್ ಅವರು ಚೀಲವನ್ನು ಜೋಪಾನದಿಂದ ಕಾಪಾಡಿ ಅದರಲ್ಲಿರುವ ಪಡಿತರ ಚೀಟಿಯಲ್ಲಿನ ವಿಳಾಸದ ಆಧಾರದ ಮೇಲೆ ಮೂಲ ವಾರಸುದಾರರನ್ನು ಪತ್ತೆ ಮಾಡಿ, ಮಹಿಳೆಗೆ ಮರಳಿಸುವಲ್ಲಿ ಯಶಸ್ಸಾದರು.

ಕಡು ಬಡತನದಲ್ಲಿರುವ ಈ ವೃದ್ಧೆ ಹಣ ಹಾಗೂ ಸಾಮಾನುಗಳನ್ನು ಮರಳಿ ಪಡೆದು, ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ವಾಹಕನ ಪ್ರಾಮಾಣಿಕತೆಗೆ ವಾಯುವ್ಯ ಸಾರಿಗೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ನೋಡಿ : ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು

Donate Janashakthi Media

Leave a Reply

Your email address will not be published. Required fields are marked *