ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಆರಂಭವಾಗಿದೆ. ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನ ಸೋಮೇಶ್ವರ ಸಭಾಭವನದಿಂದ ರೋಡ್ ಶೋ ಆರಂಭವಾಗಿದೆ. ತೆರೆದ ವಾಹನದಲ್ಲಿ ಮೋದಿ ರೋಡ್ ಶೋ ಆರಂಭಿಸಿದ್ದಾರೆ. ಪ್ರಧಾನಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಸಾಥ್ ನೀಡಿದ್ದಾರೆ.
ಶನಿವಾರ ಬೆಳಗ್ಗೆ 10.20ಕ್ಕೆ ಮೋದಿ ರೋಡ್ ಶೋ ಆರಂಭವಾಗಿದ್ದು, ಜೆಪಿ ನಗರದಿಂದ ಮಲ್ಲೇಶ್ವರದವರೆಗೂ ಸುಮಾರು 26.5 ಕಿಮೀ ರೋಡ್ ಶೋ ಸಾಗಲಿದೆ. ಮೋದಿ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಮೋದಿ ಅವರ ರೋಡ್ ಶೋ ಭದ್ರತೆಗಾಗಿ 8 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು 26.5 ಕಿಮೀಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಮೋದಿ ಸುತ್ತ ಎಸ್‌ಪಿಜಿ ಭದ್ರತೆ ಇದೆ. ದಾರಿಯುದ್ದಕ್ಕೂ ಬಿಜೆಪಿ ಧ್ವಜಗಳನ್ನು ಅಳವಡಿಸಲಾಗಿದೆ. ರೋಡ್ ಶೋ ಸಾಗುವ ಮಾರ್ಗ್ ಸೇರಿದಂತೆ 35 ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬೀದಿ ಬದಿ ವ್ಯಾಪಾರಿಗಳ ಅನ್ನ ಕಿತ್ತ ರೋಡ್ ಶೋ : ಪ್ರಧಾನಿ ಮೋದಿಯವರ ರೋಡ್ ಶೋ, ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಗೆ ತಣ್ಣೀರು ಹಾಕಿದೆ. 35 ಕ್ಕೂ ಹೆಚ್ಚು ರಸ್ತೆಗಳಲ್ಲಿ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಎರಡು ದಿನಗಳ ಕಾಲ ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಅನೇಕ ಕಡೆಗಳಲ್ಲಿ ಪೊಲೀಸರು ಮುಂದೆ ನಿಂತು ಹೆದರಿಸಿ ಅಂಗಡಿಗಳನ್ನು ಮುಚ್ಚಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿವೆ. ಬಸವನಗುಡಿಯ ಬೀದಿ ಬದಿ ವ್ಯಾಪಾರಿ ಕೆಂಚಮ್ಮ ಜನಶಕ್ತಿ ಮೀಡಿಯಾ ಜೊತೆ ಮಾತನಾಡುತ್ತಾ, ನಿನ್ನೆಯಿಂದಲೇ ಪೊಲೀಸರು ಅಂಗಡಿಗಳನ್ನು ಮುಚ್ಚಿಸುವಂತೆ ಒತ್ತಡ ಹೇರುತ್ತಿದ್ದಾರೆ. ತರಕಾರಿ, ಹಣ್ಣುಗಳು ಕೆಟ್ಟು ಹೋಗುತ್ತವೆ. ದಿನದ ವ್ಯಾಪಾರದ ದುಡಿಮೆಯಲ್ಲಿಯೇ ನಮ್ಮ ಕುಟುಂಬ ಸಾಗಬೇಕು. ಈಗ ಎರಡು ದಿನ ವ್ಯಾಪರ ಮಾಡಬೇಡಿ ಎಂದರೆ ಏನು ಮಾಡುವುದು ಎಂದು ಬಿಜೆಪಿ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ಬೆಂಗಳೂರು ಮುಖಂಡರಾದ ಬಸ್ಸಮ್ಮ ಮಾತನಾಡಿ ” ರೋಡ್ ಶೋ” ಶೋಕಿಗಾಗಿ ಬೀದಿಬದಿ ವ್ಯಾಪಾರಿಗಳ ಹೊಟ್ಟೆ ಹೊಡೆಯುವುದು ಮೋದಿಯವರು ಜನರ ಬಗ್ಗೆ ಕಾಳಜಿ ಹೇಗೆ ತೋರಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಸಾರ್ವಜನಿಕರನ್ನು ಕಷ್ಟಕ್ಕೆ ತಳ್ಳಿ ರೋಡ್ ಶೋ ನಡೆಸುವುದು ಯಾವ ನ್ಯಾಯ? ಈ ಚುನಾವಣೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.
Only one day Could not able to hold business their people but her husband ready for one day business money can be use for Alchohal drink