ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರಮೋದಿ ಕೂಡಲೇ ರಾಜೀನಾಮೆ ನೀಡಬೇಕೆಂದು #ResignModi ಹ್ಯಾಶ್‌ಟ್ಯಾಗ್ ಬಳಸಿ ಅಸಂಖ್ಯಾತ ನೆಟ್ಟಿಗರು ಒತ್ತಾಯಿಸಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಕೆಲವು ನಿರ್ದಿಷ್ಠ ವಿಚಾರಗಳನ್ನು ಪ್ರಸ್ತಾಪಿಸಿ ನರೇಂದ್ರಮೋದಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಫೇಸ್‌ಬುಕ್‌ನಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸರಕಾರದ ವಿಫಲತೆಯನ್ನು ಖಂಡಿಸಿ ಏಪ್ರಿಲ್ 28 ಬುಧವಾರದಂದು ಸಹ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಫೇಸ್‌ಬುಕ್ ಮೋದಿ ವಿರುದ್ಧ ಮಾಡಿದ 12,000ಕ್ಕಿಂತಲೂ ಹೆಚ್ಚಿನ ಪೋಸ್ಟ್ ಗಳನ್ನು ಸೆನ್ಸಾರ್ ಮಾಡಿದೆ. ಅಲ್ಲದೆ, ಟ್ರೆಂಡಿಂಗ್ ಪಡೆದಿದ್ದ #ResignModi ಕೆಲವು ಗಂಟೆಗಳ ಕಾಲ ಹ್ಯಾಶ್ಟ್ಯಾಗನ್ನು ಬ್ಲಾಕ್ ಮಾಡಿತ್ತು.
ಟ್ರೆಂಡಿಂಗ್‌ನಲ್ಲಿದ ಹ್ಯಾಶ್‌ಟ್ಯಾಗ್ ಹುಡುಕಿದರೆ ಈ ಪೋಸ್ಟ್ಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಪೋಸ್ಟ್ನಲ್ಲಿರುವ ಕೆಲವು ವಿಷಯಗಳು ವೆಬ್ಸೈಟ್ನ ಸಮುದಾಯದ ಮಾನದಂಡಗಳನ್ನು ಉಲ್ಲಂಘಿಸಿವೆ ಎಂಬ ಸಂದೇಶ ಕಾಣಿಸುತ್ತಿತ್ತು. ಫೇಸ್‌ಬುಕ್ ನ ಈ ನಡೆಯ ವಿರುದ್ಧ ನೆಟ್ಟಿಗರು ಆಕ್ರೋಶಗೊಂಡರು. ಫೇಸ್‌ಬುಕ್ ದ್ವಂದ್ವ ನಿಲುವು ತೋರಿಸಿದೆ ಎಂದು ಟೀಕೆಗಳನ್ನು ಮಾಡಿದ್ದಾರೆ.
ಇದೆಲ್ಲದರ ನಡುವೆಯೇ #ResignModi ಹ್ಯಾಶ್ಟ್ಯಾಗ್ನ್ನು ಫೇಸ್‌ಬುಕ್ ಪುನಸ್ಥಾಪಿಸಿತು. ಪ್ರಸ್ತುತ ಹ್ಯಾಶ್‌ಟ್ಯಾಗ್ ಬ್ಲಾಕ್ ಆಗಿದ್ದು ಕಣ್ತಪ್ಪಿನಿಂದ ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿತು. ಹ್ಯಾಶ್‌ಟ್ಯಾಗ್ ಬ್ಲಾಕ್ ಮಾಡಲು ನಾವು ಫೇಸ್‌ಬುಕ್ ಸಂಸ್ಥೆಗೆ ತಿಳಿಸಿರಲಿಲ್ಲ. ಎಂದು ಕೇಂದ್ರ ಸರ್ಕಾರ ಪ್ರಕಟಣೆ ನೀಡಿದೆ.
ಹ್ಯಾಶ್‌ಟ್ಯಾಗ್ ಬ್ಲಾಕ್ ಮಾಡಿರುವ ಬಗ್ಗೆ ಇಮೇಲ್ ಮೂಲಕ ಸ್ಪಷ್ಟನೆ ನೀಡಿದ ಫೇಸ್‌ಬುಕ್ ವಕ್ತಾರ, ನಾವು ಈ ಹ್ಯಾಶ್‌ಟ್ಯಾಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು ಕಣ್ತಪ್ಪಿನಿಂದ. ಭಾರತ ಸರ್ಕಾರವು ನಮ್ಮಲ್ಲಿ ಹೇಳಿಲ್ಲ. ನಾವು ಹ್ಯಾಶ್‌ಟ್ಯಾಗ್ ಪುನಸ್ಥಾಪಿಸಿದ್ದೇವೆ ಎಂದಿದ್ದಾರೆ.
ಬೇರೆ ದೇಶಗಳಲ್ಲಿ ಸುಳ್ಳು ಹಬ್ಬಿಸುವವರನ್ನು ಫೇಸ್‌ಬುಕ್ ಬ್ಲಾಕ್ ಮಾಡುತ್ತದೆ. ಆದರೆ ಭಾರತದಲ್ಲಿ ಸತ್ಯ ಹೇಳುವವರನ್ನು ಬ್ಲಾಕ್ ಮಾಡಲಾಗುತ್ತಿದೆ. ಇದು ಫೇಸ್ಬುಕ್ನ ದ್ವಂದ್ವ ನಿಲುವು ಎಂದು ಹಲವಾರು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
Midi is not a name. That’s power of INDIA