ಬೆಂಗಳೂರು:ತನ್ನ ಉದ್ಯಮಕ್ಕೆಂದು ಉದ್ಯಮಿ ಅದಾನಿ ದೇಶದ ಆಸ್ತಿಗಳನ್ನು ಸರ್ಕಾರದಿಂದ ಪಡೆದು ಅವುಗಳನ್ನೇ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆಯುತ್ತಾ, ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೂ, ಅವರನ್ನು ಮೋದಿ ರಕ್ಷಣೆ ಮಾಡುತ್ತಿದ್ದಾರೆ. ಈವರೆಗೆ ಅದಾನಿ ಬಗ್ಗೆ ಮೋದಿ ಒಂದು ಮಾತನ್ನೂ ಎತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಅದಾನಿ
ಶುಕ್ರವಾರದಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದಅವರು, ಅದಾನಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಪ್ರಕರಣದಲ್ಲಿ ಅವರ ವಿರುದ್ಧ 5-6 ವರ್ಷಗಳಿಂದ ಸತತವಾಗಿ ವಿಷಯ ಎತ್ತಿದ್ದೇವೆ. ಆದರೂ ಕೂಡ ಮೋದಿ ಇಲ್ಲಿಯ ತನಕ ಚಕಾರ ಎತ್ತಿಲ್ಲ. ಅಮಿತ್ ಶಾ ಹೋಮ್ ಮಿನಿಸ್ಟರ್ ಇದ್ದಾರೆ, ಅವರ ಬಳಿ ಇಡಿ, ಸಿಬಿಐ ಇದೆ. ಇದೆಲ್ಲ ಇದ್ದರೂ ತನಿಖೆಯನ್ನು ಮಾಡಲ್ಲ ಎಂದು ಆರೋಪಿಸಿದರು.
ಹಿಂದೆ ಈ ವಿಚಾರ ಎತ್ತಿದಾಗ ಅದು ಫಾರಿನ್‌ನಲ್ಲಿದೆ ಸುಳ್ಳು ಅಂತೆಲ್ಲ ಹೇಳಿದ್ದರು. ಇವರು ಹಿಂಡನ್‌ಬರ್ಗ್ ವರದಿ ಬಗ್ಗೆಯೂ ನಕರಾತ್ಮಕವಾಗಿ ಮಾತನಾಡಿದರು. ನಾವು ಹೇಳೋದು ಇಲ್ಲಿ ಹೇಳಿಯೇ ಹೇಳುತ್ತೇವೆ ಎಂದರು.
ಇದನ್ನೂ ಓದಿ: ಆಸ್ತಿ ಕೇಳಿದ ಅಕ್ಕನನ್ನು ಮನೆಯಿಂದ ಹೊರಹಾಕಿದ ಕ್ರೂರಿ ತಮ್ಮ
ಈ ಬಗ್ಗೆ ವಿದೇಶದಲ್ಲೂ ಕೂಡ ಇಂತಹ ಭ್ರಷ್ಟಾಚಾರದ ವಿಚಾರ ಹೊರಗೆ ಬರುತ್ತಿದೆ. ಇಲ್ಲದಿದ್ದರೆ ಇವರು ಮಾನ ಹಾನಿ ಕೇಸ್ ಹಾಕಲಿ. ನಾವು ರಾಜಕೀಯವಾಗಿ ಮಾತನಾಡುತ್ತೇವೆ ಅಂತ ನೀವು ಹೇಳಬಹುದು. ಆದರೆ, ಹೊರಗಿನವರು ಎಲ್ಲರೂ ಹೇಳುತ್ತಿದ್ದಾರೆ. ನಮಗೆ ಇರುವ ಕಳಕಳಿ ಏನೆಂದರೆ ನಮ್ಮ ದೇಶದ ಆಸ್ತಿಯನ್ನು ಅವರಿಗೆ ಕೊಡುತ್ತಿದ್ದೇವೆ. ಏರ್ಪೋರ್ಟ್, ಬಂದರು, ಸಾರ್ವಜನಿಕ ಸಂಸ್ಥೆಗಳು, ಸರ್ಕಾರಿ ಜಾಗಗಳನ್ನು ಅವರಿಗೆ ಕೊಡುತ್ತಿದ್ದೇವೆ. ನ್ಯಾಯವಾಗಿ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಸರ್ಕಾರಿ ಜಮೀನು ತೆಗೆದುಕೊಳ್ಳುವುದು, ಮಾರಿಕೊಳ್ಳುವುದು ಮಾಡುತ್ತಾರೆ. ಅದನ್ನೇ ಅಸ್ತಿ ಎಂದು ತೋರಿಸಿ ಸರ್ಕಾರಿ ಬ್ಯಾಂಕ್‌ಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ ಎಂದರು.
ಉದ್ಯಮಿಗಳು ಇದೆಲ್ಲವನ್ನು ಮಾಡುವುದಕ್ಕೆ ಕೇಂದ್ರ ಸರ್ಕಾರ ಕೂಡ ಅವರನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮಾಡುತ್ತಿದೆ. ಅವರ ಮುಖಾಂತರ ಸರ್ಕಾರ ಕೂಡ ಸಹಾಯ ಪಡೆದುಕೊಳ್ಳುತ್ತಿದೆ. ಅವರ ಪಕ್ಷಕ್ಕೂ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಮೋದಿ ಹೊರಗಡೆ ಬಹಳ ನ್ಯಾಯ ಸ್ವಚ್ಛ ಅಂತ ಭಾಷಣ ಮಾಡುತ್ತಾರೆ. ನಿಮ್ಮ ನಡವಳಕೆ ಕೂಡ ಸ್ವಚ್ಛವಾಗಿ ಇರಬೇಕು. ಎಲ್ಲಾ ಹೂಡಿಕೆ ತಮಗೆ ಬೇಕಾದ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಆಲ್ ಇಂಡಿಯಾ ಡೆವಲಪ್ಮೆಂಟ್ ಆಗಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರವರಿಗೆ ಏಳಿಗೆ ಆಗುತ್ತಾ? ಒಬ್ಬರಿಂದ ಸಣ್ಣಪುಟ್ಟ ಇಂಡಸ್ಟ್ರಿಗಳು ಕೂಡ ಸಫರ್ ಆಗುತ್ತಿವೆ. ಕ್ವಿಕ್ ಮಿಲಿಯನರ್ ಬಿಲಿಯನೇರ್ ಆಗಬೇಕು ಅಂತ ಇದೆಲ್ಲಾ ಕ್ರಿಯೇಟ್ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಪಂಚದಲ್ಲೇ ನಾನು ಶ್ರೀಮಂತ ಮನುಷ್ಯ ಅಂತ ಅನಿಸಿಕೊಳ್ಳಬೇಕು ಅಂತ ಅವರು ಇದನ್ನೆಲ್ಲಾ ಮಾಡುತ್ತಾರೆ. ಈ ವಿಷಯವನ್ನು ನಾವು ಪಾರ್ಲಿಮೆಂಟ್‌ನಲ್ಲಿ ಎತ್ತುತ್ತೇವೆ. ಇದರ ಬಗ್ಗೆ ತನಿಖೆ ಆಗಬೇಕು. ಅವರು ಭಾರತದಲ್ಲಿ ಇರುವುದರಿಂದ ಅವರನ್ನ ಅರೆಸ್ಟ್ ಮಾಡೋದು ಆಕ್ಷನ್ ತೆಗೆದುಕೊಳ್ಳುವುದು ಎಲ್ಲಾ ವಿಚಾರ ಸರ್ಕಾರಕ್ಕೆ ಗೊತ್ತಿದೆ. ಅದಕ್ಕೆ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪಿಸಿದರು.
ಮಹಾರಾಷ್ಟ್ರ, ಜಾರ್ಖಂಡ್ ಫಲಿತಾಂಶ ವಿಚಾರದ ಬಗ್ಗೆ ಮಾತನಾಡಿ, ನಾವು ಕೆಲಸ ಮಾಡಿದ್ದರಿಂದ ನಮಗೆ ಗೆಲ್ಲುವ ನಿರೀಕ್ಷೆ ಅಂತೂ ಇದೆ. ನಾಳೆ ಗೊತ್ತಾಗುತ್ತೆ, ಈಗಲೇ ಹೇಳಿದರೆ ಊಹಾಪೋಹ ಆಗಬಹುದು. ನಾವು ಬೆಟರ್ ಪರ್ಫಾರ್ಮೆನ್ಸ್ ಮಾಡಿದ್ದೇವೆ. ಸಾಕಷ್ಟು ಸಭೆಗಳನ್ನು ಮಾಡಿದ್ದೇವೆ. ವಲಯವಾರು ಹೋಗಿ ಕೆಲಸ ಮಾಡಿದ್ದೇವೆ. ಮಹಾರಾಷ್ಟ್ರ, ಜಾರ್ಖಂಡ್‌ಲ್ಲಿ ಕೆಲಸ ಮಾಡಿದ್ದೇವೆ ಎರಡು ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇದನ್ನೂ ನೋಡಿ: ಒಂದು ದೇಶ, ಒಂದು ಚುನಾವಣೆ | ಸಂವಿಧಾನದ ಮೂಲಭೂತರಚನೆಗೆ ಗಂಡಾಂತರ – ಕೆ.ಎನ್. ಉಮೇಶ್ Janashakthi Media