ಬೆಂಗಳೂರು : ರಾಜ್ಯ ರಾಜಧಾನಿಗೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಿ ತೆರಳಿ ಇಂದಿಗೆ ಮೂರೇ ದಿನ ಆಗಿದ್ದು, ಅಷ್ಟರಲ್ಲೇ ಕೋಟಿ ಕೋಟಿ ಖರ್ಚು ಮಾಡಿ ಮಾಡಲಾಗಿದ್ದ ಕೊಮ್ಮಘಟ್ಟ ರಸ್ತೆಯೇ ಇದೀಗ ಕಿತ್ತುಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನದ ಕರ್ನಾಟಕ ಪ್ರವಾಸ ಅಂತ್ಯವಾಗಿದ್ದು, ಜೂನ್ 21 ರಂದು (ಮಂಗಳವಾರ) ಮೈಸೂರಿನಿಂದ ನವದೆಹಲಿಗೆ ತೆರಳಿದರು. ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ಮೈಸೂರಿಗೆ ಹೋದ್ರು. ಇನ್ನು ಒಂದು ದಿನ ಬೆಂಗಳೂರಿನಲ್ಲಿ ಇದ್ದ ಮೋದಿಗಾಗಿ ಹತ್ತಾರು ಕೋಟೆ ಖರ್ಚಾಗಿದೆ.
ಮೋದಿ ಅವರು ಕೇವಲ 4 ಗಂಟೆ ಮಾತ್ರ ಬೆಂಗಳೂರಿನಲ್ಲಿದ್ದರು. ಇದಕ್ಕೆ ಬಿಬಿಎಂಪಿ ಬರೋಬ್ಬರಿ 14 ಕೋಟಿ ಖರ್ಚು ಮಾಡಿದೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುವುದಕ್ಕೆ ಭರ್ಜರಿ ಸಿದ್ದತೆ ನಡೆಸಲಾಗಿತ್ತು. ಸಿಟಿಯ ಪ್ರತಿ ರಸ್ತೆ ರಸ್ತೆಗಳನ್ನು ರಿಪೇರಿ ಮಾಡಿ ಪಳ-ಪಳ ಹೊಳೆಯುವಂತೆ ಮಾಡಲಾಗಿದೆ. ಇದರಿಂದ ಕೋಟಿ-ಕೋಟಿ ಖರ್ಚು ಮಾಡಲಾಗಿದೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಒಟ್ಟು 20 ಗಂಟೆಗಳ ಕಾಲ ಇದ್ದು, ಇದಕ್ಕೆ 34 ಕೋಟೆ ರೂಪಾಯಿಗಳನ್ನ ಖರ್ಚು ಮಾಡಲಾಗಿದೆ.
ಆದರೇ ಮೂರೇ ದಿನಕ್ಕೆ ಇದೀಗ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ಸಾರ್ವಜನಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಜತೆಗೆ ಬಿಬಿಎಂಪಿ ಕಳಪೆ ಕಾಮಗಾರಿ ಬಟಬಯಲಾಗಿದೆ ಎಂದು ತಿಳಿಯಬಹುದು. ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಮೋಹನ್ ಪ್ರಸಾದ್ ಮಾತನಾಡಿ ಕಾಮಗಾರಿ ಸಂದರ್ಭದಲ್ಲಿ ಮಳೆ ಬಂದಿರೋದ್ರಿಂದ ಟಾರ್ ಸರಿಯಾಗಿ ಗಟ್ಟಿಯಾಗಿಲ್ಲ ಹಾಗಾಗಿ ಕೆಲವೊಂದು ಕಡೆಗಳಲ್ಲಿ ಎದ್ದಿದೆ ಅಷ್ಟೇ ಗುತ್ತಿದಾರರನ ವೆಚ್ಚದಿಂದಲೇ ಮತ್ತೆ ಕಾಮಗಾರಿ ಮಾಡಲಾಗುತ್ತದೆ ಮಾಹಿತಿ ನೀಡಿದ್ದಾರೆ.