ಕಲಬುರಗಿ: ಲೋಕಸಭೆ ಚುನಾವಣೆಗೆ ಕಲಬುರಗಿಯಿಂದ ಪ್ರಚಾರ ಆರಂಭಿಸಲು ಕಲಬುರ್ಗಿ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ‘ಗೋ ಬ್ಯಾಕ್ ಬ್ಯಾಕ್’ ಘೋಷಣೆ ಕೂಗುವ ಮೂಲಕ ಸಿಪಿಎಂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಭಟನೆಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋ ಬ್ಯಾಕ್ ಮೋದಿ
ನಗರದ ಜಗತ್ ವೃತದಲ್ಲಿ ಜಮಾವಣೆಗೊಂಡ ಸಿಪಿಐಎಂ ಕಾರ್ಯರ್ತರು ಗೋ ಬ್ಯಾಕ್ ಮೋದಿ ಘೋಷಣೆಗಳನ್ನು ಕೂಗಿದರು. ಉದ್ಯೋಗ ಖಾತ್ರಿಯ ಬಾಕಿ ವೇತನ ಬಿಡುಗಡೆ ಮಾಡಬೇಕು. ಬರಗಾಲದ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಹಣ ಬಿಡುಗಡೆ ಮಾಡದೆ ರೈತರ ಜೊತೆ ಚಲ್ಲಾಟವಾಡುವ ಮೋದಿ ವಾಪಸ್ಸ ಹೋಗಲಿ, ಜನರ ಭಾವನೆಗಳನ್ನು ಕೆರಳಿಸುವ ಮೋದಿಗೆ ಜನರ ಸಂಕಷ್ಟ ಎಲ್ಲಿ ಅರ್ಥವಾಗಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಆರೋಪಿಸಿದರು.
ಇದನ್ನೂ ಓದಿ : ನೂರು ಕೋಟಿ ಲಸಿಕೆ ಸಾಧನೆಯ ಹಿಂದೆಮುಂದೆ
ರೈತರ ಸಾಲ ಮನ್ನಾ ಮಾಡಬೇಕು. ಎನ್‌ಎಮ್‌ಎಮ್‌ಎಸ್ ರದ್ದಾಗಬೇಕು. ತೊಗರಿಯ ನಾಡಿನಲ್ಲಿ ತೊಗರಿ ಬೆಳೆಗಾರರಿಗೆ ಬೆಂಬಲ ಬೆಲೆ ನಿಗದಿ ಮಾಡಿ ಕನಿಷ್ಠ 12.000 ರೂ. ಘೋಷಣೆ ಮಾಡಬೇಕು. ಬೀಜ ರಸಗೊಬ್ಬರ ಔಷಧಿ ಬೆಲೆ ಏರಿಕೆ ತಡೆಗೆ ಕ್ರಮ ವಹಿಸಬೇಕು ಎಂದು ಇದೇ ವೇಳೆ ಪ್ರತಿಭಟನೆಕಾರರು ಅಗ್ರಹಿಸಿದರು.
ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, , ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಗುರುನಂದೇಶ ಕೋಣಿನ್, ಲವಿತ್ರ ವಸ್ತ್ರದ್, ಪ್ರಕಾಶ್ ಜಾನೆ, ಸಿದ್ಧರಾಮ ಹರವಾಳ, ಸುಜಾತಾ ಮತ್ತಿತರರನ್ನು ವಶಕ್ಕೆ ಪಡೆದರು. ಗೋ ಬ್ಯಾಕ್ ಮೋದಿ