ಸಂಘರ್ಷ ಪೀಡಿತ ಮಣಿಪುರದ ಜನರನ್ನು ರಕ್ಷಿಸುವಲ್ಲಿ ಮೋದಿ ವಿಫಲ; ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸಂಘರ್ಷ ಪೀಡಿತ ಮಣಿಪುರದ ಜನರನ್ನು ರಕ್ಷಿಸುವಲ್ಲಿ  ವಿಫಲರಾಗಿದ್ದಾರೆ. ಈ ಮೂಲಕ ಭಾರತೀಯರಿಗೆ ಮಾಡಲಾದ ದ್ರೋಹಗಳ ಪಟ್ಟಿಗೆ ಅವರ ಈ ನಡೆಯು ಸೇರ್ಪಡೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಟೀಕಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಹಿಂಸಾಚಾರ ಪೀಡಿತ ಮಣಿಪುರವನ್ನು ಸಹಜ ಸ್ಥಿತಿಗೆ ತರಲು ಡಬಲ್‌ ಎಂಜಿನ್‌ ಸರ್ಕಾರ ಏನನ್ನೂ ಮಾಡಿಲ್ಲ, ಸುಮಾರು 16 ತಿಂಗಳಿಂದ ಗಲಭೆ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಪಿಸಿದರು.

ಇದನ್ನು ಓದಿ : ಹಾಸನ ದಲ್ಲಿ ಕೋಮು ಪ್ರಚೋದಿತ ಫ಼್ಲೆಕ್ಸ್‌; ತೆರವುಗೊಳಿಸುವಂತೆ ಸಿಐಟಿಯು ಮನವಿ

ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ಮತ್ತು ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಯಾವುದೇ ಶಾಂತಿ ಸಂಧಾನದಂತಹ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಮಣಿಪುರದ ಸಿಎಂ ಎನ್. ಬಿರೇನ್ ಸಿಂಗ್ ಅವರನ್ನು ಏಕೆ ಸಿಎಂ ಸ್ಥಾನದಿಂದ ವಜಾಗೊಳಿಸಲಿಲ್ಲ. ಸಾರ್ವಜನಿಕವಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದು, ರಾಜೀನಾಮೆ ನೀಡುವ ನಾಟಕ ಮಾಡುವ ಮತ್ತು ಗಲಭೆ ಪ್ರಕರಣಗಳ ಸಂಬಂಧ ನಿರ್ಲಕ್ಷ್ಯ ತೋರಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ. ‘ಮೋದಿ ಅವರೇ, ನೀವು ಏಕೆ ಪಶ್ಚಾತ್ತಾಪ ಪಟ್ಟಿದ್ದೀರಿ? ಮಣಿಪುರಕ್ಕೆ ಭೇಟಿ ನೀಡಲು ಏಕೆ ತಲೆಕೆಡಿಸಿಕೊಳ್ಳುತ್ತಿದ್ದೀರಿ? ನಿಮ್ಮ ಅಹಂಕಾರದಿಂದಾಗಿ ಇಲ್ಲಿನ ಜನರು ನರಳುತ್ತಿದ್ದಾರೆ. ನಿಮ್ಮ ಅಸಮರ್ಥ ಸರ್ಕಾರದಿಂದ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಾಗುತ್ತಿಲ್ಲ‘ ಎಂದು ದೂರಿದ್ದಾರೆ.

ಇದನ್ನು ನೋಡಿ : ನಮಗೆ ಬೇಕಿರುವುದು ಸ್ಪರ್ಧೆಯಲ್ಲ; ಪರಸ್ಪರ ಸಹಕಾರ – ಸಸಿಕಾಂತ್ ಸೆಂಥಿಲ್Janashakthi Media

Donate Janashakthi Media

Leave a Reply

Your email address will not be published. Required fields are marked *