ಮೋದಿ ಬೆಂಬಲಿಸಿ ತಪ್ಪು ಮಾಡಿದೆ – ಶಂಕರ್ ಬಿದರಿ

ಬೆಂಗಳೂರು, ಫೆ 19:  “ಮೋದಿಯನ್ನು ಬೆಂಬಲಿಸಿ ನಾನು ಬಹಳ ದೊಡ್ಡ ತಪ್ಪು ಮಾಡಿದೆ” ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಕುರಿತು ಫೇಸ್‌ಬುಕ್‌ನಲ್ಲಿ ಹಲವು ಪೋಸ್ಟ್‌ಗಳನ್ನು ಮಾಡಿರುವ ಶಂಕರ ಬಿದರಿ, ಮೋದಿ ಹಾಗೂ ಬಿಜೆಪಿ ಸರ್ಕಾರ ನನಗೆ ಹಾಗೂ ಸಾರ್ವಜನಿಕರಿಗೆ ನಿರಾಸೆ ಮೂಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ನಾನು ಉತ್ಸಾಹದಲ್ಲಿದ್ದೆ. ಮೋದಿ ಜನರನ್ನು ತನ್ನೊಂದಿಗೆ ಕೊಂಡೊಯ್ದು ದೇಶದ ಹಣೆ ಬರಹವನ್ನು ಬದಲಾಯಿಸುತ್ತಾರೆ ಎಂದು ನಂಬಿಕೊಂಡಿದ್ದೆ. ಈ ಕಾರಣಕ್ಕೇ ನಾನು ಅವರಿಗೆ ಅಪನಗದೀಕರಣ ಹಾಗೂ 370ರ ವಿಧಿ ಸಂಬಂಧ ಬೆಂಬಲ ವ್ಯಕ್ತಪಡಿಸಿದ್ದೆ. ಆದರೆ ಇಂದು ನನಗೆ ತುಂಬಾ ಬೇಸರವಾಗುತ್ತಿದೆ. ಮೋದಿ ಕೂಡ ಸೋತಿದ್ದಾರೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ಫೆಸ್ಬುಕ್ ನಲ್ಲಿ ಹಲವು ವಿಷಯಗಳ ಕುರಿತು ಪ್ರಸ್ತಾಪ ಮಾಡಿರುವ ಅವರು, ಬಿಜೆಪಿ ತಮ್ಮ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. ಮೋದಿಯವರೂ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಜನರ ಸಂಕಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಈಚೆಗಷ್ಟೆ ಬಿದರಿ ಬಿಜೆಪಿ ಮೇಲೆ ಆರೋಪಿಸಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿ ಸರ್ಕಾರದ ಕಾರ್ಯವೈಖರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಶಂಕರ್ ಬಿದರಿಯವರ ಪೋಸ್ಟ್ ಗಳನ್ನು ನೋಡಲು ಇದನ್ನು ಕ್ಲಿಕ್ ಮಾಡಿ

1999ರಿಂದಲೂ ಕೃಷ್ಣಾ ನದಿ ಕಣಿವೆ ಬಿಜೆಪಿಗೆ ನಿರಂತರ ಬೆಂಬಲ ನೀಡಿದೆ. ಆ ಸಮಯ ಮೋದಿಯವರು ಒಂದು ಹನಿ ನೀರನ್ನೂ ವ್ಯರ್ಥವಾಗಲು ನಾನು ಬಿಡುವುದಿಲ್ಲ ಎಂದಿದ್ದರು. ನಾವು ಅವರನ್ನು ನಂಬಿದ್ದೆವು. ಆದರೆ ಏಳು ವರ್ಷಗಳು ಕಳೆದವು. ಇಂದಿಗೂ ಕರ್ನಾಟಕಕ್ಕೆ ಮೀಸಲಾದ 300 ಟಿಎಂಸಿ ನೀರು ವ್ಯರ್ಥವಾಗಿ ಹೋಗುತ್ತಿದೆ ಎಂದು ಹೇಳಿದ್ದಾರೆ. ಜನರ ಸೇವೆಯನ್ನು ಮಾಡಲು ಹಾಗೂ ದೇಶಕ್ಕೆ ಕೈಲಾದಷ್ಟು ಒಳಿತನ್ನು ಮಾಡಲು ಸಾರ್ವಜನಿಕ ಸೇವೆಗೆ ಬರುತ್ತಾರೆ. ಆದರೆ ಈ ಕೆಲಸವನ್ನು ಅವರು ಮಾಡುತ್ತಿಲ್ಲ ಎಂದರೆ, ಅವರು ಸಾರ್ವಜನಿಕ ಜೀವನದಿಂದ ಹೊರಗೆ ಹೋಗಬೇಕು. ಆದರೆ ಇಲ್ಲೇ ಇದ್ದುಕೊಂಡು ತಮಗೆ ತಾವು, ಜನರಿಗೆ ಮತ್ತು ದೇಶಕ್ಕೆ ಮೋಸ ಮಾಡುವುದನ್ನು ಮುಂದುವರೆಸಬಾರದು ಎಂದಿದ್ದಾರೆ.

ಭ್ರಷ್ಟಾಚಾರ ಹಾಗೂ ಗಂಭೀರ ಅಪರಾಧಗಳ ಆರೋಪ ಎದುರಿಸುತ್ತಿರುವ ರಾಜಕೀಯ ವ್ಯಕ್ತಿಗಳನ್ನು ಈ ವ್ಯವಸ್ಥೆಯಿಂದ ಮೋದಿಯವರು ತೆಗೆದುಹಾಕುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಏಳು ವರ್ಷಗಳು ಕಳೆದು ಹೋದವು. ನಮ್ಮ ಭರವಸೆಗಳು ಸುಳ್ಳಾಗಿವೆ. ನೀವೂ ವಿಫಲರಾಗಿದ್ದೀರಿ ಎಂದು ಮೋದಿಯವರ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

Donate Janashakthi Media

One thought on “ಮೋದಿ ಬೆಂಬಲಿಸಿ ತಪ್ಪು ಮಾಡಿದೆ – ಶಂಕರ್ ಬಿದರಿ

  1. He expressed his opinion, using freedom of speech, Being citizen of India he may be right, But PM Modi’s spectrum of fields are much more vast and paramount, Before comment an him better to be in his & capacity then address, This is opinion

Leave a Reply

Your email address will not be published. Required fields are marked *