‘ಮೋದಿ & ಅಡ್ವಾಣಿ ಗಲಭೆಕೋರರು’ ಎಂದ ಪತ್ರಕರ್ತನ ಮೇಲೆ ಬಿಜೆಪಿ ದುರ್ಷರ್ಮಿಗಳಿಂದ ದಾಳಿ

ಮುಂಬೈ: ಭಾರತ ರತ್ನ ಪ್ರಶಸ್ತಿ ನೀಡಿರುವ ಬಗ್ಗೆ ಉಲ್ಲೇಖಿಸಿ ಪ್ರಧಾನಿ ಮೋದಿ ಮತ್ತು ಅಡ್ವಾಣಿಯನ್ನು ‘ಗಲಭೆಕೋರರು’ ಎಂದು ಟೀಕಿಸಿದ್ದ ಪತ್ರಕರ್ತ ನಿಖಿಲ್ ವಾಗ್ಲೆ ಅವರ ವಾಹನದ ಮೇಲೆ ಬಿಜೆಪಿ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ. ಪುಣೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದ್ದು, ಇದನ್ನು ಮುಂಬೈ ಪ್ರೆಸ್ ಕ್ಲಬ್ ತೀವ್ರವಾಗಿ ಖಂಡಿಸಿದೆ.

ಪುಣೆಯ ಸಿಂಘಾಡ್ ರಸ್ತೆ ಪ್ರದೇಶದಲ್ಲಿ ರಾಷ್ಟ್ರ ಸೇವಾದಳ ಆಯೋಜಿಸಿದ್ದ ‘ನಿರ್ಭಯ್ ಬಾನೊ’ ಕಾರ್ಯಕ್ರಮಕ್ಕೆ ಪೊಲೀಸ್ ರಕ್ಷಣೆಯಲ್ಲಿ ವಾಗ್ಲೆ, ಅಸೀಮ್ ಸರೋದೆ ಮತ್ತು ವಿಶ್ವಂಭರ ಚೌಧರಿ ತೆರಳುತ್ತಿದ್ದ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದು, ಅವರ ಕಾರಿನ ಗಾಜು ಒಡೆದಿದ್ದಾರೆ. ಅಡ್ವಾಣಿ

ಇದನ್ನೂ ಓದಿ: ಸಕಲೇಶಪುರ| ದಲಿತ ಮಹಿಳೆ ಗ್ರಾಪಂ ಅಧ್ಯಕ್ಷೆಯಾಗುವುದನ್ನು ತಪ್ಪಿಸಲು ಚುನಾವಣೆ ಪ್ರಕ್ರಿಯೆಗೆ ಸವರ್ಣೀಯ ಸದಸ್ಯರು ಗೈರು

ಘಟನೆಯನ್ನು ಮುಂಬೈ ಪ್ರೆಸ್ ಕ್ಲಬ್ ತೀವ್ರವಾಗಿ ಖಂಡಿಸಿದ್ದು, ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಆದಾಗ್ಯೂ, ಭಿನ್ನಾಭಿಪ್ರಾಯವು ಚರ್ಚೆಯ ವಿಷಯವಾಗಿದ್ದು, ರಾಜಕೀಯ ವಿರೋಧಿಗಳ ಮೇಲೆ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದು ಹೇಳಿದೆ.

“ಶುಕ್ರವಾರ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ವ್ಯಕ್ತಿಗಳ ಗುಂಪೊಂದು ಪತ್ರಕರ್ತ ನಿಖಿಲ್ ವಾಗ್ಲೆ ಮತ್ತು ಇತರರ ಮೇಲೆ ನಡೆಸಿದ ಹಲ್ಲೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದನ್ನು ವಿರೋಧಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ತೆರಳುತ್ತಿದ್ದ ವೇಳೆ ವಾಗ್ಲೆ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಎಲ್‌ಕೆ ಅಡ್ವಾಣಿ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ವಾಗ್ಲೆ ವಿರುದ್ಧ ಎಫ್‌ಐಆರ್ ದಾಖಲಿಸುವುದನ್ನು ವಿರೋಧಿಸುವ ಪ್ರತಿಭಟನಾ ಸಭೆ ಕೂಡ ಅದಾಗಿತ್ತು. ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ಆದಾಗ್ಯೂ, ಭಿನ್ನಾಭಿಪ್ರಾಯವು ಚರ್ಚೆಯ ವಿಷಯವಾಗಿದ್ದು, ರಾಜಕೀಯ ವಿರೋಧಿಗಳ ಮೇಲೆ ಹಿಂಸಾಚಾರವನ್ನು ಸರಿಯಲ್ಲ” ಎಂದು ಮುಂಬೈ ಪ್ರೆಸ್ ಕ್ಲಬ್ ಹೇಳಿದೆ.

ಇದನ್ನೂ ಓದಿ: ಉತ್ತರಾಖಂಡ | ಮಸೀದಿ & ಮದ್ರಸಾ ಧ್ವಂಸದ ನಂತರ ಭುಗಿಲೆದ್ದ ಹಿಂಸಾಚಾರ; 5 ಸಾವು

ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ-ಇಂಡಿಯಾ ಕೂಡ ವಾಗ್ಲೆ ಅವರಿಗೆ ತನ್ನ ಗಟ್ಟಿಯಾದ ಬೆಂಬಲ ನೀಡಿದ್ದು, “ಈ ಘಟನೆ ಅಸಹಿಷ್ಣುತೆಯನ್ನು ಪ್ರಶ್ನಿಸುವ ಧೈರ್ಯವಿರುವ ಪತ್ರಕರ್ತರ ಮೇಲೆ ದಾಳಿ ಮಾಡುವ ಬಿಜೆಪಿಯ ಪುನರಾವರ್ತಿತ ಮಾದರಿಗೆ ಮತ್ತಷ್ಟು ಸಾಕ್ಷಿಯಾಗಿದೆ. ಭಿನ್ನಾಭಿಪ್ರಾಯವನ್ನು ಮೌನಗೊಳಿಸಲು ವಿವೇಚನಾರಹಿತ ಬಲವನ್ನು ಆಶ್ರಯಿಸುವುದು ಪಕ್ಷದ ಅಸಮರ್ಥತೆ ಮತ್ತು ಸುಸಂಸ್ಕೃತ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಇಷ್ಟವಿಲ್ಲದಿರುವುದನ್ನು ಎತ್ತಿ ತೋರಿಸುತ್ತದೆ” ಎಂದು ಹೇಳಿದೆ.

ನರೇಂದ್ರ ಮೋದಿ ಅವರು ಅವರ ಪಕ್ಷದ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದಕ್ಕಾಗಿ ಟೀಕಿಸಿದ್ದ ವಾಗ್ಲೆ ಅವರು “ಒಬ್ಬ ಗಲಭೆಕೋರನಿಂದ ಮತ್ತೊಬ್ಬರಿಗೆ ಪ್ರಶಸ್ತಿ ಘೋಷಿಸಲಾಗಿದೆ” ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ “ಮಾನಹಾನಿಕರ” ಎಂದು ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದರು. ಹೀಗಾಗಿ ಪುಣೆ ಪೊಲೀಸರು ಶುಕ್ರವಾರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಇದನ್ನೂ ಓದಿ: ಅಣ್ಣಾಮಲೈ ವಿರುದ್ಧದ ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಕಾರ

ಎಫ್‌ಐಆರ್‌ ಬಗ್ಗೆ ಪ್ರತಿಕ್ರಿಯಿಸಿದ್ದ ವಾಗ್ಲೆ ಅವರು, ತನ್ನನ್ನು ಜೈಲಿಗೆ ಕಳುಹಿಸಿದರೂ ಸರಿ, ಹೇಳಿಕೆಗೆ ಬದ್ಧ ಎಂದು ಹೇಳಿದ್ದರು. ಹೀಗಾಗಿ ಸಂಜೆ ನಡೆಯಲಿದ್ದ ವಾಗ್ಲೆ ಅವರು ಭಾಗವಹಿಸಬೇಕಿದ್ದ ‘ನಿರ್ಭಯ್ ಬಾನೋ’ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಬಿಜೆಪಿ ಪುಣೆ ಘಟಕವು ನಗರ ಪೊಲೀಸರಿಗೆ ಪತ್ರ ಬರೆದಿದ್ದರು ಹಾಗೂ ಒಂದು ವೇಳೆ ರದ್ದು ಮಾಡದಿದ್ದರೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿತ್ತು.

ವಾಗ್ಲೆ ಅವರ ವಾಹನವನ್ನು ನಾಲ್ಕು ವಿಭಿನ್ನ ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಬಿಜೆಪಿ ಕಾರ್ಯಕರ್ತರು ವಾಹನವನ್ನು ತಡೆದು ಘೋಷಣೆಗಳನ್ನು ಕೂಗಿದರು ಮತ್ತು ಗಾಜುಗಳನ್ನು ಒಡೆದಿದ್ದಾರೆ. ಅಲ್ಲದೆ, ಕಾರಿನ ಮೇಲೆ ಮೊಟ್ಟೆ ಹಾಗೂ ಶಾಯಿ ಎರಚಿದ್ದಾರೆ ಎಂದು ವರದಿ ಹೇಳಿದೆ.

ವಾಗ್ಲೆ ಅವರನ್ನು ಮಹಾ ವಿಕಾಸ್ ಅಘಾಡಿ ಕಾರ್ಯಕರ್ತರು ಸ್ಥಳಕ್ಕೆ ಕರೆದೊಯ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ನೂರಾರು ಪೋಲೀಸ್ ಸಿಬ್ಬಂದಿಯ ಎದುರಿನಲ್ಲೆ ಹಲವಾರು ಮಹಿಳಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅದಾಗ್ಯೂ, ಕಾರ್ಯಕ್ರಮದಲ್ಲಿ ವಾಗ್ಲೆ ಮಾತನಾಡಿದ್ದು, ಅವರೊಂದಿಗೆ ಹೋರಾಟಗಾರ ವಿಶ್ವಂಬರ್ ಚೌಧರಿ ಮತ್ತು ವಕೀಲ ಅಸೀಂ ಸರೋದೆ ಇದ್ದರು.

ಇದನ್ನೂ ಓದಿ: ‘ಮನೆ ಕೆಡವಿ ಪತ್ರಿಕೆಯಲ್ಲಿ ಪ್ರಕಟಿಸುವುದು ಫ್ಯಾಶನ್ ಆಗಿದೆ’ – ಮುನ್ಸಿಪಲ್ ಕಾರ್ಪೊರೇಷನ್‌ ವಿರುದ್ಧ ಹೈಕೋರ್ಟ್‌ ಆಕ್ರೋಶ

“ವಾಗ್ಲೆ ವಿರುದ್ಧ ಪ್ರತಿಭಟನೆ ನಡೆಸಲು ಪೊಲೀಸರ ಅನುಮತಿಯನ್ನು ತೆಗೆದುಕೊಳ್ಳದ ಕಾರಣ 20 ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಯಿತು” ಎಂದು ಪೊಲೀಸರು ನಂತರ ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕರು, “ಪ್ರಜಾಪ್ರಭುತ್ವವನ್ನು ಕೊಲ್ಲುವ ಲಜ್ಜೆಗೆಟ್ಟ ಪ್ರಯತ್ನ” ಎಂದು ಶಿಂಧೆ-ಫಡ್ನವಿಸ್ ಸರ್ಕಾರವನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಲಾಗುತ್ತಿದ್ದು, ಕಳೆದ ಏಳು ದಿನಗಳಿಂದ, ಎರಡು ಗುಂಡಿನ ದಾಳಿಗಳು ರಾಜ್ಯದಲ್ಲಿ ನಡೆದಿದೆ.

ವಿಡಿಯೊ ನೋಡಿ: ಯುವಜನತೆಯನ್ನು ಮತಾಂಧತೆಯ ಖೆಡ್ಡಾಗೆ ತಳ್ಳಿದ ಸಂಘ ಪರಿವಾರ… Janashakthi Media

Donate Janashakthi Media

Leave a Reply

Your email address will not be published. Required fields are marked *